ಉಡುಪಿಯ ನಾಲ್ವರ ಹತ್ಯೆ ಪ್ರಕರಣ: ಕಡೆಗೂ ಪೋಲೀಸರ ಬಲೆಗೆ ಬಿದ್ದ ಹಂತಕ

Udupi: ನ.12ರಂದು ಉಡುಪಿಯ (Udupi Murder case – Killer Arrest) ಮಲ್ಪೆ ಠಾಣೆಯ ವ್ಯಾಪ್ತಿಯಲ್ಲಿರುವ ನೆಜಾರುವಿನ ತೃಪ್ತಿ ಲೇಔಟ್ ನಲ್ಲಿ ಕಳೆದವಾರ ನಡೆದಿದ್ದ ಕೊಲೆ ಪ್ರಕರಣದ

ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮನೆಯೊಂದಕ್ಕೆ ನುಗ್ಗಿದ್ದ ಆತ, ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ತಾನು ನುಗ್ಗಬೇಕಿದ್ದ ಮನೆಯ ಮುಂದೆ

ಆಟೋದಲ್ಲಿ ಬಂದಿದ್ದ. ಆಟೋರಿಕ್ಷಾ (Autorickshaw) ಚಾಲಕ ನೀಡಿದ ಮಾಹಿತಿಯ ಮೇರೆಗೆ ಆತನನ್ನು ಹಿಡಿಯಲು ಪೊಲೀಸರು ಸಂಚು ರೂಪಿಸಿದ್ದರು.

ಬೆಳಗಾವಿಯ (Belagavi) ಮೂಲಕ ಮಹಾರಾಷ್ಟ್ರಕ್ಕೆ ಪಲಾಯನ ಮಾಡಲು ಯತ್ನಿಸಿದ್ದ ಆತನನ್ನು ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಮೂಲಗಳು ಹೇಳಿವೆ.

ಬಂಧಿತನನ್ನು ಪ್ರವೀಣ್ ಚೌಗಲೆ (Praveen Chowgale) (35) ಎಂದು ಗುರುತಿಸಲಾಗಿದ್ದು, ಈತ ಮಂಗಳೂರು ಏರ್ ಪೋರ್ಟ್ ನಲ್ಲಿ ಉದ್ಯೋಗಿಯಾಗಿದ್ದನು. ಖಾಸಗಿ ಕಂಪನಿಯ ಕ್ಯಾಬಿನ್ ಕ್ರ್ಯೂ

(Cabin Crue) ಆಗಿ ಕೆಲಸ ಮಾಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ (Udupi Murder case – Killer Arrest) ತಿಳಿದುಬಂದಿದೆ.

ಈತ ಮೃತರ ಕುಟುಂಬಕ್ಕೆ ಪರಿಚಿತನಾಗಿದ್ದ ಎನ್ನಲಾಗಿದ್ದು, ಮಹಾರಾಷ್ಟ್ರದ (Maharashtra) ಸಾಂಗ್ಲಿಯವನು ಎಂಬುದು ಸಹ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ. ಉಡುಪಿಯಲ್ಲಿ

ನಾಲ್ಕು ಕೊಲೆಗಳನ್ನು ಮಾಡಿದ ನಂತರ, ಪರಾರಿಯಾಗಿದ್ದ ಈತ ನಾನಾ ಕಡೆಗೆ ತೆರಳಿ, ಆನಂತರ ಬೆಳಗಾವಿ ತಲುಪಿದ್ದ. ಅಲ್ಲಿಂದ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ (Andrapradesh) ತೆರಳಿ

ತಲೆಮರೆಸಿಕೊಳ್ಳುವ ಬಗ್ಗೆ ಸಂಚು ಹಾಕಿಕೊಂಡಿದ್ದ.

ಮಹಾರಾಷ್ಟ್ರದ ಕಡೆಗೆ ಸಾಗುವುದಾಗಿ ನಿರ್ಧರಿಸಿದ್ದಾಗಲೇ ಈತನ ಬೆನ್ನು ಹತ್ತಿದ್ದ ಬೆಳಗಾವಿ ಪೊಲೀಸರ ಸಹಾಯದಿಂದ ಉಡುಪಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕುಡಚಿಯಲ್ಲಿ ವಶಕ್ಕೆ

ಪಡೆದಿದ್ದಾರೆ. ಮಲ್ಪೆ ಠಾಣಾ ವ್ಯಾಪ್ತಿಯಲ್ಲಿರುವ ನೆಜಾರುವಿನಲ್ಲಿ ತೃಪ್ತಿ ಲೇಔಟ್ ನಲ್ಲಿರುವ ಮೊಹಮ್ಮದ್ ನೂರ್ (Mohammed Noor) ಎಂಬುವರ ಮನೆಗೆ ಮನೆಯೊಂದಕ್ಕೆ ನ.12ರ ಬೆಳಗ್ಗೆ 8.30

ಸುಮಾರಿಗೆ ನುಗ್ಗಿದ್ದ ವ್ಯಕ್ತಿಯೊಬ್ಬ (ಆರೋಪಿ ಪ್ರವೀಣ್) ಆ ಮನೆಯಲ್ಲಿದ್ದ ನೂರ್ ಪತ್ನಿ ಹಸೀನಾ ಹಾಗೂ ಅವರ ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಅಸೀಮ್ (Aseem) (14) ಎಂಬುವರನ್ನು

ಕೊಂದು ಹಾಕಿದ್ದ.

ಇದೀಗ ಅವರೂ ಸಹ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಕೊಲೆ ಮಾಡಿದವನೆಂದು ಹೇಳಲಾದ ಆರೋಪಿಯೂ ಸಿಕ್ಕಿಬಿದ್ದಿದ್ದಾನೆ. ಇಡೀ ಘಟನೆಯಲ್ಲಿ ಚೂರಿ ಇರಿತಕ್ಕೆ ಒಳಗಾಗಿಯೂ ಆ ಮನೆಯ ಹಿರಿಯರಾದ

ಹಸೀನಾ (Haseena) ಎಂಬುವರು ಬಾತ್ ರೂಮಿನಲ್ಲಿ ಅಡಗಿಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದರು. ಇನ್ನು ಮುಂದೆ ಈ ಪ್ರಕರಣದ ಹಿಂದಿನ ನೈಜ ಕಾರಣ ನಿಧಾನವಾಗಿ ಬಿಚ್ಚಿಕೊಳ್ಳಲಿದೆ.

ಇದನ್ನು ಓದಿ: ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ತರಕಾರಿಗಳನ್ನು ಹೆಚ್ಚಾಗಿ ತಿನ್ನಿ

Exit mobile version