• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ತರಕಾರಿಗಳನ್ನು ಹೆಚ್ಚಾಗಿ ತಿನ್ನಿ

Bhavya by Bhavya
in ಆರೋಗ್ಯ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ತರಕಾರಿಗಳನ್ನು ಹೆಚ್ಚಾಗಿ ತಿನ್ನಿ
0
SHARES
168
VIEWS
Share on FacebookShare on Twitter

Health tips for Sugar Patients: ಸಕ್ಕರೆ ಕಾಯಿಲೆ ಅನ್ನೋದು ಸರ್ವೇ ಸಾಮಾನ್ಯವಾಗಿದ್ದು, (Vegetable for Sugar Patients) ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಇದ್ದರೆ ಅಥವಾ

ಒಂದು ವೇಳೆ ನಿಮಗೆ ಡಯಾಬಿಟಿಸ್ (Diabetes) ಇದ್ದರೆ, ಸೇವಿಸುವ ಆಹಾರ ಪದ್ಧತಿಯ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ಏಕೆಂದರೆ ತುಂಬಾ ಜನರಿಗೆ ಆಹಾರ ಸೇವನೆ ಮಾಡಿದ ತಕ್ಷಣ ರಕ್ತದಲ್ಲಿ ಸಕ್ಕರೆ

ಪ್ರಮಾಣದ ಏರಿಕೆ ಕಾಣುತ್ತದೆ. ಹಾಗಾಗಿ ಅಂತಹ ಆಹಾರಗಳಿಗೆ ಆದ್ಯತೆ ಕೊಡದೆ ಮಧುಮೇಹಿ ಸ್ನೇಹಿ ಎನ್ನಲಾದ ತರಕಾರಿಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಹಾಗಾದರೆ ಆ ತರಕಾರಿಗಳ (Vegetable for Sugar Patients) ಬಗ್ಗೆ ತಿಳಿದುಕೊಳ್ಳೋಣ.

Diabetes

ಬ್ರೊಕೋಲಿ:
ಬ್ರೊಕೋಲಿಯು (Broccoli) ಕ್ರೋಮಿಯಂ ಖನಿಜಾಂಶವನ್ನು ಅಪಾರವಾಗಿ ಹೊಂದಿದ್ದು, ದೇಹದಲ್ಲಿ ಗ್ಲುಕೋಸ್ ಬಳಕೆಯನ್ನು ಅಭಿವೃದ್ಧಿಪಡಿಸುತ್ತದೆ.


ಸಂಶೋಧಕರು ಹೇಳುವಂತೆ ಯಾರಿಗೆ ಮಧುಮೇಹ ಇರುತ್ತದೆ ಅವರಿಗೆ ದೇಹದಲ್ಲಿ ಈ ಒಂದು ಖನಿಜಾಂಶ ಕಡಿಮೆ ಇರುತ್ತದೆ. ಹಾಗಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಬ್ರೊಕೋಲಿ ಸೇರಿಸಿ ಕೊಂಡು

ಸೇವಿಸುವುದು ಉತ್ತಮ.

ಹಾಗಲಕಾಯಿ:
ಸಕ್ಕರೆ ಕಾಯಿಲೆ ಇರುವವರಿಗೆ ಹಾಗಲಕಾಯಿ (Bitter Guard) ರಾಮಬಾಣ ಎಂದು ಹೇಳಬಹುದು ಏಕೆಂದರೆ ಇದರಲ್ಲಿ ದೇಹದ ರಕ್ತದ ಹರಿವಿನಲ್ಲಿ ಕಂಡು ಬರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣ

ಮಾಡುವ ಗುಣವಿದೆ. ಹೀಗಾಗಿ ಊಟ ಆದ ನಂತರದಲ್ಲಿ ಸ್ವಲ್ಪ ಹಾಗಲಕಾಯಿ ಪಲ್ಯವನ್ನು ಸೇವಿಸುವುದರಿಂದ ಇದ್ದಕ್ಕಿದ್ದಂತೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗುವ ಸಾಧ್ಯತೆಯನ್ನು ತಡೆಯಬಹುದು.

Vegetable for Sugar Patients

ಬೆಂಡೆಕಾಯಿ ಮತ್ತು ಬಟಾಣಿ:
ಕರಗುವ ನಾರಿನ ಅಂಶವನ್ನು ಹೆಚ್ಚಾಗಿ ಒಳಗೊಂಡಿರುವ ಈ ತರಕಾರಿ ಪದಾರ್ಥಗಳು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು.


ಕೇವಲ ಹಸಿ ಬಟಾಣಿ ಮಾತ್ರವಲ್ಲದೆ ಒಣಗಿದ ಬೇಳೆ ಕಾಳಿನ ರೂಪದ ಬಟಾಣಿ, ಒಣಗಿದ ಬೀನ್ಸ್ (Beans), ಕಡಲೆ ಬೇಳೆ ಈ ರೀತಿ ಕಡಿಮೆ ಸಿಹಿ ಸೂಚ್ಯಂಕ ಹೊಂದಿರುವ ಕಾಳುಗಳನ್ನು ಸೇವಿಸಿ ಹೊಟ್ಟೆ ಹಸಿವನ್ನು

ಕಡಿಮೆ ಮಾಡಿಕೊಳ್ಳಬಹುದು.​

ನುಗ್ಗೆಸೊಪ್ಪು:
ಸಕ್ಕರೆ ಕಾಯಿಲೆ ನುಗ್ಗೆಸೊಪ್ಪು ಇರುವವರಿಗೆ ಬಹಳ ಒಳ್ಳೆಯದು. ಏಕೆಂದರೆ ಇದರಲ್ಲಿ ನೈಟ್ರಿಕ್ ಆಮ್ಲವನ್ನು ಕಡಿಮೆ ಮಾಡುವ ಗುಣವಿದೆ. ಜೊತೆಗೆ ಗ್ಲುಕೋಸ್ (Glucose) ಅಂಶವನ್ನು ನಿಯಂತ್ರಣ ಕೂಡ

ಮಾಡುತ್ತದೆ. ಹೀಗಾಗಿ ವಾರದಲ್ಲಿ ಎರಡು ಬಾರಿ ನುಗ್ಗೆ ಸೊಪ್ಪಿನ ಆಹಾರ ಪದಾರ್ಥ ಗಳನ್ನು ತಯಾರಿಸಿ ಸೇವಿಸುವುದು ಉತ್ತಮ.

ಮೆಂತ್ಯೆ ಸೊಪ್ಪು:
ಇನ್ನು ಸೇವಿಸಿದ ಆಹಾರದಲ್ಲಿ ಕಂಡು ಬರುವ ಸಕ್ಕರೆ ಅಂಶವನ್ನು ಜೀರ್ಣಪ್ರಕ್ರಿಯೆ ಸಂದರ್ಭದಲ್ಲಿ ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುವುದರ ಜೊತೆಗೆ ಪ್ಯಾಂಕ್ರಿಯಾಸ್ (Pancreas) ಭಾಗದಿಂದ

ಇನ್ಸುಲಿನ್ (Insulin) ಉತ್ಪತ್ತಿಯನ್ನು ಹೆಚ್ಚಾಗುವಂತೆ ಮಾಡುವ ಸಾಮರ್ಥ್ಯ ಇದರಲ್ಲಿದ್ದು, ಈ ಕಾಯಿಲೆ ಇರುವವರು ಆಗಾಗ ಮೆಂತ್ಯ ಸೊಪ್ಪು ಬಳಸಿ ಅಡುಗೆ ಮಾಡಿ ಸವಿಯುವುದು ಉತ್ತಮ. ಖಾಲಿ

ಹೊಟ್ಟೆಯಲ್ಲಿ ನೆನೆಸಿದ ಮೆಂತ್ಯ ಕಾಳುಗಳನ್ನು ಮತ್ತು ಅದರ ನೀರನ್ನು ಸಹ ಸೇವಿಸುವುದು ಇನ್ನು ಒಳ್ಳೆಯದು.​

ಇದನ್ನು ಓದಿ: ಮಂಗನ ದಾಳಿಯಿಂದ ವ್ಯಕ್ತಿಯ ಸಾವು : ವ್ಯಕ್ತಿಯನ್ನು ಕೊಂದ ಮಂಗ ಕೊನೆಗೂ ಸೆರೆ

  • ಭವ್ಯಶ್ರೀ ಆರ್. ಜೆ
Tags: diabetesfoodhealth tipsPatients

Related News

ಮ್ಯೂಚುವಲ್ ಫಂಡ್ : ಮಲ್ಟಿಕ್ಯಾಪ್, ಫ್ಲೆಕ್ಸಿಕ್ಯಾಪ್ ಮತ್ತು ಮಲ್ಟಿ ಅಸೆಟ್ ಫಂಡ್‌ಗಳಲ್ಲಿ ಯಾವುದು ಬೆಸ್ಟ್
ಪ್ರಮುಖ ಸುದ್ದಿ

ಮ್ಯೂಚುವಲ್ ಫಂಡ್ : ಮಲ್ಟಿಕ್ಯಾಪ್, ಫ್ಲೆಕ್ಸಿಕ್ಯಾಪ್ ಮತ್ತು ಮಲ್ಟಿ ಅಸೆಟ್ ಫಂಡ್‌ಗಳಲ್ಲಿ ಯಾವುದು ಬೆಸ್ಟ್

January 21, 2026
ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಲೆಬೆರಕೆ ಹಾಲು ಮಾರಾಟ: 8 ಆರೋಪಿಗಳ ಬಂಧನ
ಪ್ರಮುಖ ಸುದ್ದಿ

ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಲೆಬೆರಕೆ ಹಾಲು ಮಾರಾಟ: 8 ಆರೋಪಿಗಳ ಬಂಧನ

January 21, 2026
ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ
ದೇಶ-ವಿದೇಶ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ

January 21, 2026
ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ
ದೇಶ-ವಿದೇಶ

ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ

January 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.