ಆದಾಯ ಮೀರಿ ಆಸ್ತಿ ಪ್ರಕರಣ: ಅಮಾನತ್ತಿನಲ್ಲಿರುವಾಗಲೇ ಭ್ರಷ್ಟ ಅಧಿಕಾರಿ ಅಜಿತ್ ರೈ ವರ್ಗಾವಣೆ! ಸಾರ್ವಜನಿಕರಿಂದ ತೀವ್ರ ಆಕ್ರೋಶ

Bengaluru (ಜು.3) : ಕೆಆರ್ ಪುರ ತಹಸೀಲ್ದಾರ್‌ ಅಜಿತ್ ಕುಮಾರ್ ರೈ(under suspension AjitRai transferred) ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಮಾನತ್ತಿನಲ್ಲಿರುವಾಗಲೇ ಸರ್ಕಾರ ಇದೀಗ

ಬೆಂಗಳೂರು ಕೆಆರ್‌ ಪುರಂನಿಂದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿದೆ. ಸರ್ಕಾರದ ಈ ನಡೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಪೊಲೀಸರು ಅಜಿತ್ ಕುಮಾರ್ ರೈ ಬಂಧಿಸಿದ್ದಾರೆ. ಆದರೆ ಕಂದಾಯ ಇಲಾಖೆ (Revenue Department) ಬಂಧನದಲ್ಲಿರುವಾಗಲೇ ಅಜಿತ್ ರೈ ವಿರುದ್ಧ ಅಮಾನತ್ತು ಆದೇಶ ಹೊರಡಿಸಿತ್ತು.

ಒಂದು ವೇಳೆ ಸಾಕ್ಷ್ಯನಾಶ, ಅಧಿಕಾರ ದುರ್ಬಳಕೆ, ತನಿಖೆಗೆ ಅಜಿತ್ ರೈ ಅಧಿಕಾರದಲ್ಲಿದ್ರೆ ಅಡ್ಡಿಯಾಗಬಹುದು ಎಂದು ಅಮಾನತಿನಲ್ಲಿಟ್ಟಿತ್ತು. ಅದ್ರೆ ಇದೀಗ ರಾಯಚೂರು (Raichur) ಜಿಲ್ಲೆಯ ಸಿರವಾರ

ತಾಲೂಕಿಗೆ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈರನ್ನು ವರ್ಗಾವಣೆ ಮಾಡಿರುವುದು ಸಾರ್ವಜನಿಕರ ತೀವ್ರ (under suspension AjitRai transferred) ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಹೌದು ಅಜಿತ್ ರೈ ಬೆಂಗಳೂರಿನಲ್ಲಿ ತಹಸೀಲ್ದಾರ್(ಗ್ರೇಡ್ 1) ಅಧಿಕಾರಿಯಾಗಿದ್ದ ನಂತರ ಅಕ್ರಮ ಹಣ ಪತ್ತೆಯಾದ ಬಳಿಕ ಸರ್ಕಾರವು ಗ್ರೇಡ್ -1 ತಹಸೀಲ್ದಾರ್ ಹುದ್ದೆಯಿಂದ ಗ್ರೇಡ್ – 2 ತಹಸೀಲ್ದಾರ್ ಹಿಂಬಡ್ತಿ ಮಾಡಿ ವರ್ಗಾವಣೆ ಮಾಡಿದೆ.

ಅಮಾನತಿನಲ್ಲಿ ಇದ್ರೂ ಅಜಿತಕುಮಾರ್ ರೈ ವರ್ಗಾವಣೆ

ಸರ್ಕಾರ ಮಾತ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ದರೂ ಕೂಡ ಸಿರವಾರ್‌ಗೆ ಅಮಾನತುಗೊಂಡ ತಹಸೀಲ್ದಾರರನ್ನ ವರ್ಗಾಯಿಸಿದ್ದು ಯಾಕೆ? ಭ್ರಷ್ಟರ ಮೇಲೆ

ಲೋಕಾಯುಕ್ತರು (Lokayuktha) ದಾಳಿ ಮಾಡಿ ಎಡೆಮುರಿಕಟ್ಟುತ್ತಿದ್ದರು ಇತ್ತ ಅಮಾನತ್ತಿನಲ್ಲಿರುವ ಭ್ರಷ್ಟ ಅಧಿಕಾರಿಗೆ ಹಿಂಬಡ್ತಿ ನೀಡಿ ರಾಚೂರು ಜಿಲ್ಲೆ ಸಿರವಾರಕ್ಕೆ ಸರ್ಕಾರ ವರ್ಗಾವಣೆ ಮಾಡಿರುವುದು ಸರ್ವತಾ ಸರಿಯಲ್ಲ

ಭ್ರಷ್ಟ ಅಧಿಕಾರಿ ಅಜಿತ್‌ ರೈ ಮನೆಯಲ್ಲಿ ನಗ, ನಾಣ್ಯ, ಲಕ್ಸುರಿ ವಸ್ತುಗಳು

ಅಜಿತ್‌ ರೈ ಕೇವಲ ಕೆಎಎಸ್‌ (KAS) ಅಧಿಕಾರಿ ಆಗಿದ್ದಾರೆ ಅದರಂತೆ ಅವರು ಪ್ರತಿ ತಿಂಗಳಿಗೆ 1 ಲಕ್ಷ ರೂ.ನಂತೆ ಕೆಲಸ ಮಾಡಿದರೂ ಜೀವಮಾನವಿಡೀ ಅಂದರೆ ಒಟ್ಟು 40 ವರ್ಷದಲ್ಲಿ 5 ಕೋಟಿ ಹಣವನ್ನು

ಮಾತ್ರ ಗಳಿಸಲು ಸಾಧ್ಯವಾಗುತ್ತದೆ. ಆದರೆ, ಕೆಲಸಕ್ಕೆ ಸೇರಿ ಕೇವಲ ವರ್ಷಗಳಲ್ಲಿ ಅಪಾರ ಆಸ್ತಿ ಮೌಲ್ಯ ಹಾಗೂ ಐಷಾರಾಮಿ ಜೀವನವನ್ನು ಅವರ ಮನೆಯಲ್ಲಿರುವ ವಸ್ತುಗಳ

ಮೌಲ್ಯವೇ ಕೋಟಿ ಕೋಟಿ ಹಣವನ್ನು ಲೋಕಾಯುಕ್ತರ ದಾಳಿಯಲ್ಲಿ ಮೀರಿಸಿದೆ.

ಯಾವ ಬ್ಯುಸಿನೆಸ್‌ ಮ್ಯಾನ್‌ಗಿಂತಲೂ ಇವರ ಐಷಾರಾಮಿ ಜೀವನ ಕಮ್ಮಿಯೇನಿಲ್ಲ. ಸಾವಿರಾರು ರೂಪಾಯಿ ಬೆಲೆಬಾಳುವ ಚಪ್ಪಲಿಗಳು, ಬ್ರಾಂಡೆಡ್ ವಾಚ್ ಗಳು ಪತ್ತೆಯಾಗಿವೆ. ಜಿಮ್‌ ಇಕ್ವಿಪ್‌ಮೆಂಟ್‌,

ಎಸಿ ಎಲ್ಲವೂ ಅತ್ಯಂತ ದುಬಾರಿ ಮತ್ತು ಬ್ರ್ಯಾಂಡೆಡ್‌ ಆಗಿವೆ ಮತ್ತು ಇನ್ನು ಮನೆಯ ಗೃಹೋಪಯೋಗಿ ವಸ್ತುಗಳು, ಮೇಜು, ಪೀಠೋಪಕರಣ, ಟಿವಿ (Television), ಲ್ಯಾಪ್‌ಟಾಪ್‌ (Laptop) ಪತ್ತೆಯಾಗಿವೆ.

ಮತ್ತು 5.83 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಕೆಜಿಗಟ್ಟಲೆ ಚಿನ್ನ-ಬೆಳ್ಳಿ. ಸುಮಾರು 795 ಗ್ರಾಂ ಚಿನ್ನಾಭರಣ ಅಜಿತ್ ರೈ ಮನೆಯಲ್ಲಿ ಲಭ್ಯವಾಗಿದೆ.

27 ಬ್ರ್ಯಾಂಡೆಡ್‌ ವಾಚ್ ಗಳು,ಸುಮಾರು 70 ಸಾವಿರ ಮೌಲ್ಯದ ಶೂಗಳು ಸಹ ಪತ್ತೆಯಾಗಿವೆ.

ರಶ್ಮಿತಾ ಅನೀಶ್

Exit mobile version