ಮಕ್ಕಳಿಗೆ ಅಡ್ಮಿಷನ್ ಮಾಡೋ ಮುನ್ನ ಎಚ್ಚರ ! ಕರ್ನಾಟಕದಲ್ಲಿವೆ ಒಟ್ಟು 1,600 ಅನಧಿಕೃತ ಶಾಲೆಗಳು

Karnataka: ಪೋಷಕರೇ ಎಚ್ಚರ ! ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸೋ ಮುನ್ನ ಜಾಗೃತರಾಗಿರಿ. ಯಾಕಂದ್ರೆ ರಾಜ್ಯದಲ್ಲಿವೆ 1,600 ಅನಧಿಕೃತ ((unofficial schools in Karnataka)) ಶಾಲೆಗಳು.

ನೀವು ಯಾವುದೇ ಮಾಹಿತಿ ಇಲ್ಲದೆ ನಿಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಸೇರಿಸಿದ್ರೆ ನೀವು ಸಮಸ್ಯೆಗೆ ಸಿಲುಕೋದು ಗ್ಯಾರಂಟಿ.


ಕರ್ನಾಟಕ (Karnataka) ಶಾಲಾ ಶಿಕ್ಷಣ ಇಲಾಖೆಯೇ ಹೇಳಿರುವಂತೆ, ರಾಜ್ಯದಲ್ಲಿ ನಿಯಮಗಳನ್ನು ಉಲ್ಲಂಘಿಸುವ 1,600 (unofficial schools in Karnataka) ಶಾಲೆಗಳು ಅಸ್ತಿತ್ವದಲ್ಲಿವೆ.

ಈ ಶಾಲೆಗಳು ಪೋಷಕರಿಗೆ ವಂಚನೆ ಮಾಡುವ ಎಲ್ಲಾ ಸಾಧ್ಯತೆಗಳು ಇರ್ತವೆ. ಇನ್ನಯ ಕೆಲವು ಶಾಲೆಗಳು ರಾಜ್ಯದ ಕೇಂದ್ರೀಯ ಪಠ್ಯಕ್ರಮಕ್ಕೆ ಬದ್ಧವಾಗಿದೆ ಎಂದು ಸುಳ್ಳು ಹೇಳಿ ಪೋಷಕರನ್ನು ಯಾಮಾರಿಸುತ್ತಿವೆ.


ಮುಂಬರುವ ವರ್ಷಗಳಲ್ಲಿ, ಕಾನೂನುಬದ್ಧ ಮತ್ತು ಕಾನೂನುಬಾಹಿರ ಶಾಲೆಗಳ ನಡುವಿನ ಪಾರದರ್ಶಕತೆಯ ಕೊರತೆಯಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ ಅಸ್ಪಷ್ಟತೆಯು ವರ್ಗಾವಣೆ ಪ್ರಮಾಣಪತ್ರಗಳು, ಶೈಕ್ಷಣಿಕ ಮಾರ್ಕ್‌ಶೀಟ್‌ಗಳು (Marksheet) ಮತ್ತು ಪ್ರಮಾಣಪತ್ರಗಳನ್ನು ಅಮಾನ್ಯಗೊಳಿಸುವುದಕ್ಕೆ ಕಾರಣವಾಗಬಹುದು,

ಇದನ್ನು ಓದಿ: ಕಂಬಳ ಮತ್ತು ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್ ನಿಂದ ಹಸಿರು ನಿಶಾನೆ

ಪರಿಶೀಲನೆ ಪ್ರಕ್ರಿಯೆಗಳ ಸಮಯದಲ್ಲಿ ಗಮನಾರ್ಹ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ನೀವು ಈ ಕೆಳಗಿನ ಮನ್ನೆಚ್ಚರಿಕೆಯನ್ನು ವಹಿಸಲೇ ಬೇಕು.


ಶಾಲೆಯ ನೋಂದಣಿ ಸ್ಥಿತಿಯನ್ನು ಪರಿಶೀಲಿಸಿ:


ಪೋಷಕರು ತಮ್ಮ ಮಗುವನ್ನು ತರಾತುರಿಯಲ್ಲಿ ದಾಖಲಿಸುವ ಮೊದಲು ಸಂಭಾವ್ಯ ಶಾಲೆಯ ನೋಂದಣಿ ಸ್ಥಿತಿಯನ್ನು ಪರಿಶೀಲಿಸುವ ಅಗತ್ಯವಿದೆ. ದಾಖಲಾತಿ ಸಮಯದಲ್ಲಿ ಶಾಲೆಯು ರಾಜ್ಯ ಅಥವಾ ಕೇಂದ್ರೀಯ ಪಠ್ಯಕ್ರಮದ

ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ನೋಂದಣಿಯನ್ನು ನವೀಕರಿಸಲಾಗಿದೆಯೇ ಎಂಬುದನ್ನು ದೃಢೀಕರಿಸಲೇ ಬೇಕಾಗಿದೆ.

ಅನುಮತಿ ಪಡೆದಿರುವ ವಿಷಯಗಳನ್ನು ಬೋಧನೆ ಮಾಡುವ ಬದಲು ಅನಗತ್ಯ ವಿಷಯಗಳನ್ನು ಸೇರ್ಪಡೆ ಮಾಡಿದೆಯೇ ಮುಂತಾದ ಮಾಹಿತಿಗಳನ್ನು ಅಗತ್ಯವಾಗಿ ತಿಳಿದುಕೊಂಡ ನಂತರವೇ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡಲು ಮುಂದಾಗಬೇಕು.


ಶಾಲಾ ಶುಲ್ಕವನ್ನು ಸೂಚನಾ ಫಲಕದಲ್ಲಿ ಹಾಕಲಾಗಿದೆಯೇ?


ಶಾಲೆಯು ಮಗುವಿಗೆ ವಿಧಿಸಿದ ಶುಲ್ಕವನ್ನು ಸೂಚನಾ ಫಲಕಗಳಲ್ಲಿ ಮತ್ತು ಶಾಲೆಯ ವೆಬ್‌ಸೈಟ್‌ನಲ್ಲಿ (Website) ಪೋಸ್ಟ್ ಮಾಡುತ್ತಿದೆಯೇ? ಒಂದು ವೇಳೆ ಪ್ರಕಟಿಸಿಸದಿದ್ದರೆ ಅದನ್ನು ಏಕೆ ಪ್ರಕಟಿಸಿಲ್ಲ ಎಂದು ಪ್ರಶ್ನಿಸಬೇಕು.

ಕಲಿಕಾ ಉಪಕರಣವನ್ನು ನಿಗದಿತ ಪುಸ್ತಕ ಮಳಿಗೆಯಲ್ಲಿ ಖರೀದಿಸುವಂತೆ ಶಿಫಾರಸ್ಸು ಮಾಡಿದರೆ ಅದನ್ನು ತಿಳಿದುಕೊಂಡು ದಾಖಲಿಸಿದರೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡುವುದನ್ನು ತಪ್ಪಿಸಬಹುದು. .

ಅನಧಿಕೃತ ಶಾಲೆಗಳ ಪಟ್ಟಿ ಇನ್ನೂ ಬಹಿರಂಗಪಡಿಸಿಲ್ಲ:

ರಾಜ್ಯದಲ್ಲಿ ಒಟ್ಟು 17,269 ಬಾನಗಿ (ರಾಜ್ಯ ಪಠ್ಯಕ್ರಮ), 704 CBSE, 300 ICSE ಮತ್ತು 9 ಅಂತರರಾಷ್ಟ್ರೀಯ ಶಾಲೆಗಳನ್ನು ಹೊಂದಿದೆ. ಶಿಕ್ಷಣ ಇಲಾಖೆಯ ಪ್ರಕಾರ, ಶಾಲಾ ಶಿಕ್ಷಣ ಇಲಾಖೆಯ ಉಲ್ಲಂಘನೆಗಾಗಿ 1,600 ಕ್ಕೂ ಹೆಚ್ಚು ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

ಆದರೆ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಶಾಲೆಗಳು ತಮ್ಮ ಮಾನ್ಯತೆಯನ್ನು ನವೀಕರಿಸದಿರುವುದು, ನೋಂದಾಯಿಸದ ಶಾಲೆಗಳನ್ನು ನಡೆಸುವುದು, ರಾಷ್ಟ್ರೀಯ ಪಠ್ಯಕ್ರಮದಿಂದ ಅನುಮೋದಿಸಿದ ನಂತರ ಕೇಂದ್ರ ಪಠ್ಯಕ್ರಮವನ್ನು

ಬೋಧಿಸುವುದು ಮತ್ತು ಕೇಂದ್ರೀಯ ಪಠ್ಯಕ್ರಮದ ಅನುಮೋದನೆಯಿಲ್ಲದೆ ಕೋರ್ಸ್‌ಗಳನ್ನು ಬೋಧಿಸುವುದು ಸೇರಿದಂತೆ ಹಲವಾರು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಟ್ಟಿ ಮಾಡಲಾಗಿದೆ.

ಶಾಲೆಗಳು ಪ್ರಕಟಿಸಬೇಕಿರುವ ಮುಖ್ಯವಾದ ಮಾಹಿತಿಗಳು :

ರಾಜ್ಯ ಪಠ್ಯಕ್ರಮ ಶಾಲೆ, ಶಾಲಾ ನೋಂದಣಿ, ಅನುಮೋದಿತ ಬೋಧನಾ ಮಾಧ್ಯಮ,ಮಾನ್ಯತೆ ಪಡೆದ ವಿವರಗಳು,ಪಠ್ಯಕ್ರಮ ಮತ್ತು ತರಗತಿ, ಅನುಮತಿ ಪಡೆದಿರುವಂತೆ ತರಗತಿವಾರು ಲಭ್ಯವಿರುವ ಸೀಟುಗಳ ಸಂಖ್ಯೆ,

ಸಿಬಿಎಸ್‌ಇ (CBSE) ಐಸಿಎಸ್‌ಇ (ICSE) ಸೇರಿ ಇತರೆ ಪಠ್ಯಕ್ರಮ ಶಾಲೆಗಳಾಗಿದ್ದರೆ,ಪಠ್ಯಕ್ರಮ ಮತ್ತು ತರಗತಿ,ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದ ಮಾನ್ಯತಾ ಸಂಖ್ಯೆ,

ತರಗತಿವಾರು ಲಭ್ಯವಿರುವ ಸೀಟುಗಳ ಸಂಖ್ಯೆ,ನಿಗದಿಪಡಿಸಿದ ಶುಲ್ಕ ಮತ್ತು ಶಿಕ್ಷಕ/ ಪಾಲಕರ ಸಂಘ ರಚಿಸಿರುವ ಮಾಹಿತಿ,ನಿರಪೇಕ್ಷಣಾ ಪತ್ರದ (ಎನ್‌ಒ) ಸಂಖ್ಯೆ ಮತ್ತು ದಿನಾಂಕ ಮುಂತಾದ ಮಾಹಿತಿ ನೀಡಬೇಕು.

ರಶ್ಮಿತಾ ಅನೀಶ್

Exit mobile version