ಕಬ್ಬಿನ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಪ್ರತಿದಿನ ಕಬ್ಬಿನ ಹಾಲನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳಿಂದ ದೂರ ಇರಬಹುದಾಗಿದೆ. ಬಿಸಿಲಿನ ತಾಪವನ್ನು ನಿವಾರಿಸಿ, ಆರೋಗ್ಯಕ್ಕೆ ಬೇಕಾದ ಚೈತನ್ಯ ನೀಡುವಲ್ಲಿ ಕಬ್ಬಿನ ಹಾಲಿನ ಪ್ರಾಮುಖ್ಯತೆ (uses of sugarcane juice) ಅತ್ಯಧಿಕವಾಗಿದೆ. ಕಬ್ಬಿನ ಹಾಲನ್ನು ಕುಡಿಯುವದರಿಂದಾಗುವ ಪ್ರಯೋಜನೆಗಳ ವಿವರ ಇಲ್ಲಿದೆ ನೋಡಿ.

• ಕಬ್ಬಿನ ಹಾಲಿನಲ್ಲಿ ಮೆಗ್ನೀಸಿಯಮ್(Maganesium), ಎಲೆಕ್ಟ್ರೋಲೈಟ್‍ಗಳು(Electrolytes) ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿರುತ್ತದೆ.

ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ದೇಹದಲ್ಲಿನ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

• ಬಾಯಿಯ ದುರ್ವಾಸನೆ ಪೋಷಕಾಂಶಗಳ ಕೊರತೆಯಿಂದಲೂ ಉಂಟಾಗುತ್ತದೆ. ಪ್ರತಿದಿನ ಕಬ್ಬಿನ ರಸ(Sugarcane Juice) ಕುಡಿಯುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು.

• ಒಂದು ವೇಳೆ ಅಜೀರ್ಣತೆ ತೊಂದರೆ ಇದ್ದರೆ ನಿತ್ಯವೂ ಕಬ್ಬಿನ ಹಾಲನ್ನು ಸೇವಿಸುವುದು ಒಳ್ಳೆದು. ಇದರ ವಿರೇಚಕ ಗುಣ ಜೀರ್ಣಾಂಗಗಳಲ್ಲಿ ಉಂಟಾಗಿದ್ದ ಉರಿಯೂತವನ್ನು (uses of sugarcane juice) ನಿವಾರಿಸಿ ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ.

• ಸಾಂಕ್ರಾಮಿಕ ಜ್ವರಗಳಲ್ಲಿ ಕಬ್ಬನ್ನು ದೇಹದ ಬಲ ವೃದ್ಧಿಸಲು ಹಾಗು ಪೋಷಕಾಂಶಗಳ ಕೊರತೆ ನೀಗಿಸಲು ಬಳಸಲಾಗುತ್ತದೆ.


• ಕಬ್ಬಿನ ರಸವನ್ನು ನಿಂಬೆ(Lemon) ಮತ್ತು ಶುಂಠಿ (Ginger) ರಸದೊಂದಿಗೆ ಬೆರೆಸಿ ಕುಡಿದಾಗ , ಮೂತ್ರವನ್ನು ಸುಲಭವಾಗಿ ವಿಸರ್ಜಿಸುವಂತೆ ಮಾಡುತ್ತದೆ.


• ಬೇಸಿಗೆಯಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಕಬ್ಬಿನ ಜ್ಯೂಸ್ (Sugarcane Juice) ಕುಡಿಯುವುದರಿಂದ ಮೂತ್ರ ಸೋಂಕನ್ನು ತಡೆಗಟ್ಟಬಹುದು,

• ಬೇಸಿಗೆಯಲ್ಲಿ ಕಬ್ಬಿನ ರಸ ಕುಡಿಯುವುದರಿಂದ ಮೊಡವೆ ಸಮಸ್ಯೆ ತಡೆಗಟ್ಟಬಹುದು.

• ಕಬ್ಬಿನ ಹಾಲಿನಲ್ಲಿರುವ ಫ್ಲೇವೊನ್‍ಗಳು ಕ್ಯಾನ್ಸರ್ (Cancer) ಕೋಶಗಳ ಉತ್ಪಾದನೆ ಹಾಗೂ ಹರಡುವಿಕೆಯನ್ನು ನಿಲ್ಲಿಸುವಲ್ಲಿ ಪರಿಣಾಮಕಾರಿಯಾಗಿದೆ. ಹೀಗಾಗಿ ಕಬ್ಬಿನ ಹಾಲನ್ನು ಕ್ಯಾನ್ಸರ್‌ನಿರೋಧಕ ಎನ್ನಲಾಗುತ್ತದೆ.

• ಕಬ್ಬಿ ಹಾಲಿನಲ್ಲಿ ಕಂಡು ಬರುವ ಪೋಲಿಕೋಸನಾಲ್ (Policosanol) ರಕ್ತವನ್ನು ತೆಳುವಾಗಿಸುತ್ತದೆ.

• ಕಬ್ಬಿನ ರಸವು ದೇಹದಲ್ಲಿನ ಗ್ಲೂಕೋಸ್(Glucose) ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ಇದು ಮಧುಮೇಹ ರೋಗಿಗಳಿಗೂ ಸುರಕ್ಷಿತವಾಗಿದೆ.

https://youtu.be/KBylnwmA_7U


• ಕಬ್ಬನ್ನು ಅಗಿಯುವುದು ಮತ್ತು ಅದರ ರಸವನ್ನು ಹೀರುವುದರಿಂದ ಹಲ್ಲು ಮತ್ತು ಒಸಡುಗಳು ಬಲವಾಗುತ್ತವೆ.


• ದೇಹದ ತೂಕ ಹೆಚ್ಚಿಸಲು ಶ್ರಮ ಪಡುತ್ತಿರುವವರಿಗೆ ಕಬ್ಬು ಅತಿ ಉತ್ತಮ ಆಹಾರ. ಇದು ಆರೋಗ್ಯಕರ ತೂಕವನ್ನು ಪಡೆಯಲು ಸಹಾಯ ಮಾಡುತ್ತದೆ.

• ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯ ಸೆಡೆತಗಳಿಂದಲೂ ರಕ್ಷಣೆ ನೀಡಿ, ಪೊಟ್ಯಾಶಿಯಂ ಜಠರದಲ್ಲಿ ಪಿಎಚ್ (PH) ಮಟ್ಟವನ್ನು ಸರಿಯಾಗಿರಿಸಲು ನೆರವಾಗುತ್ತದೆ.

• ಕಬ್ಬಿನ ಹಾಲು ಹೊಟ್ಟೆ, ಮೂತ್ರಪಿಂಡಗಳು, ಹೃದಯ, ಕಣ್ಣುಗಳು, ಮೆದುಳು ಮತ್ತು ಲೈಂಗಿಕ ಅಂಗಗಳನ್ನು ಬಲಪಡಿಸುತ್ತದೆ.

Exit mobile version