• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಹೆಣ್ಣು ಮಕ್ಕಳ ಪ್ರಾಣಕ್ಕೆ ಕುತ್ತಾಗುತ್ತಿದೆ ಗರ್ಭಕೋಶದ ಕ್ಯಾನ್ಸರ್ !

Rashmitha Anish by Rashmitha Anish
in ಆರೋಗ್ಯ
ಹೆಣ್ಣು ಮಕ್ಕಳ ಪ್ರಾಣಕ್ಕೆ ಕುತ್ತಾಗುತ್ತಿದೆ ಗರ್ಭಕೋಶದ ಕ್ಯಾನ್ಸರ್ !
0
SHARES
140
VIEWS
Share on FacebookShare on Twitter

Health: ಗರ್ಭಕೋಶದ ಕ್ಯಾನ್ಸರ್(Uterine Cancer) ಅಥವಾ ಗರ್ಭಕಂಠದ ಕ್ಯಾನ್ಸರ್ ಹೆಣ್ಣುಮಕ್ಕಳ ಪ್ರಾಣಕ್ಕೆ ಕಂಟಕವಾಗುತ್ತಿರುವ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾರಣಾಂತಿಕ (Uterine Cancer Symptoms Treatments) ಕಾಯಿಲೆ ಕಾಣಿಸಿಕೊಳ್ಳುತ್ತಿದೆ.

ಅಲ್ಲದೆ ಈ ಬಗ್ಗೆ ಹೆಣ್ಣು ಮಕ್ಕಳು ಭಾರೀ ಆತಂಕಿತರಾಗಿದ್ದಾರೆ. ಹಾಗಾಗಿ ಈ ಕಾಯಿಲೆ ಜನರಲ್ಲಿ ಜಾಗೃತಿ ಮೂಡಿಸಿ ಅಪಾಯದಿಂದ ತಪ್ಪಿಸಿಕೊಳ್ಳುವ ಉಪಾಯ ಕಂಡುಹಿಡಿಯಬೇಕಾಗಿದೆ.

ಗರ್ಭಕೋಶದ ಕ್ಯಾನ್ಸರ್ ಅಂದ್ರೆ ಗರ್ಭಕೋಶದ ಸುತ್ತಮುತ್ತ ಕಂಡುಬರುವ ತೀವ್ರ ಸ್ವರೂಪದ ಗೆಡ್ಡೆ ಯಾಗಿದೆ. ಇದು ಕಾಣಿಸಿಕೊಂಡಾಗ ಮಹಿಳೆಯರ ಆರೋಗ್ಯದಲ್ಲಿ ಹಲವಾರು ರೀತಿಯ ತೊಂದರೆಗಳು ಕಂಡುಬರುತ್ತವೆ.

ಗರ್ಭಕೋಶದ ಕ್ಯಾನ್ಸರ್ ಅನ್ನು ಆರಂಭದ ದಿನಗಳಲ್ಲೇ ಪತ್ತೆಹಚ್ಚದಿದ್ದರೆ ಹಲವಾರು ರೀತಿಯ ಸಮಸ್ಯೆಗಳು (Uterine Cancer Symptoms Treatments) ಕಾಡಲಾರಂಭಿಸುತ್ತದೆ.

ಹಾಗಾಗಿ ಆರಂಭದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡಬೇಕು. ಆದರೆ ಅದನ್ನು ಪತ್ತೆ ಹಚ್ಚುವುದೇ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಯಾಕೆಂದರೆ ಈ ಮಹಾಮಾರಿ ಕೊನೆ ಹಂತಕ್ಕೆ ತಲುಪಿದ ಮೇಲೆಯೇ ಲಕ್ಷಣಗಳನ್ನು ತೋರಿಸಲು ಆರಂಭಿಸುತ್ತದೆ.

ಪತ್ತೆಹಚ್ಚಲು ಕಷ್ಟವಾದರೂ ಕೆಲವೊಂದು ಲಕ್ಷಣಗಳ ಮುಖಾಂತರ ಪತ್ತೆ ಹಚ್ಚಬಹುದು ಇದಕ್ಕೆ ಕಾರಣ ಇವತ್ತಿಗೂ ನಿಖರವಾಗಿ ಪತ್ತೆಯಾಗಿಲ್ಲ.

ಮಹಿಳೆಯರ ಸಂತಾನೋತ್ಪತ್ತಿಯ ವ್ಯವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್(Cancer) ಇದಾಗಿದೆ.

ಗರ್ಭಕೋಶದ ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆ ಆದರೆ ಹೆಣ್ಣು ಮಕ್ಕಳ ನಿರ್ಲಕ್ಷ್ಯ ಹಾಗೂ ಮಾಹಿತಿಯ ಕೊರತೆಯಿಂದ ದೊಡ್ಡ ಅಪಾಯಕ್ಕೆ ತುತ್ತಾಗುತ್ತಿದ್ದಾರೆ.

ಈ ಕಾರಣಕ್ಕಾಗಿ ಕ್ಯಾನ್ಸರ್ ನ ವ್ಯಾಕ್ಸಿನೇಷನ್(Vaccination) ಹಾಗೂ ನಿಯಮಿತ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.

ಮುಟ್ಟು ನಿಲ್ಲುವಂತಹ ಮಹಿಳೆಯರ ಗರ್ಭಕೋಶದಲ್ಲಿ ಮೊಟ್ಟ ಮೊದಲನೆಯದಾಗಿ ಊತ ಕಾಣಿಸಿಕೊಳ್ಳುತ್ತದೆ. ಇದು ಸುಮಾರು 40 ರಿಂದ 55-60 ವರ್ಷದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಗರ್ಭಕೋಶದ ಕ್ಯಾನ್ಸರ್ ಗೆ ಪ್ರಮುಖ ಕಾರಣಗಳು:

  • ಅನಿಯಂತ್ರಿತ ಕ್ಯಾನ್ಸರ್ ಕೋಶಗಳ ಉತ್ಪಾದನೆ.
  • ಅಸಹಜ ಬೆಳವಣಿಗೆ, ಅತಿ ಹೆಚ್ಚು ಕೊಲೆಸ್ಟ್ರಾಲ್,ಇದು ಕ್ರಮೇಣ ಗೆಡ್ಡೆಗಳಾಗಿ ಮಾರ್ಪಡಬಹುದು.
  • ಎಚ್ ಪಿ ವಿ(HPV) ಸೋಂಕು,ಅಸುರಕ್ಷಿತ ಲೈಂಗಿಕತೆ ಹಾಗೂ ಸ್ವಚ್ಛತೆಯ ಕೊರತೆಯಿಂದ ವೈರಾಣು ದೇಹ ಪ್ರವೇಶಿಸಿ ಗರ್ಭಕೋಶದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.
  • ಜನನ ನಿಯಂತ್ರಣ ಮಾತ್ರೆಗಳು. ಹಲವು ವರದಿಗಳ ಪ್ರಕಾರ ಜನನ ನಿಯಂತ್ರಣ ಮಾತ್ರೆಗಳನ್ನು ಹೆಚ್ಚು ಸೇವಿಸುವವರಲ್ಲಿ ಗರ್ಭಕೋಶದ ಕ್ಯಾನ್ಸರ್ ಬೇಗ ತಗಲುವ ಸಾಧ್ಯತೆ ಹೆಚ್ಚು.
  • ರೋಗನಿರೋಧಕ ಶಕ್ತಿಯ ಕೊರತೆ.
  • ಧೂಮಪಾನ ಹಾಗೂ ಮಧ್ಯಪಾನ.

ಗರ್ಭಕೋಶದ ಕ್ಯಾನ್ಸರ್ ನ ಲಕ್ಷಣಗಳು:

  • ಗರ್ಭಕೋಶದ ಊತ
  • ಪಾಲಿಸಿಟಿಕ್ ಒವೇರಿಯನ್ ಮತ್ತು ಗರ್ಭಧಾರಣೆ ವೇಳೆ ಕೂಡ ಗರ್ಭಕೋಶ ಊದಿಕೊಳ್ಳುತ್ತದೆ.
  • ಋತುಚಕ್ರದ ಹೊರತಾಗಿ ರಕ್ತಸ್ರಾವಾಗುತ್ತಲಿದ್ದರೆ ಅಥವಾ ರಕ್ತದ ಹೊರತಾಗಿ ದ್ರವದ ರೀತಿಯಲ್ಲಿ ಸ್ರಾವ ಉಂಟಾಗುತ್ತಿದ್ದರೆ ಅದು ಕೂಡ ಒಂದು ಲಕ್ಷಣ.
  • ಋತುಬಂಧದ ನಂತರವೂ ರಕ್ತಸ್ರಾವ ವಾಗುವುದು.
  • ಋತುಚಕ್ರದ ವೇಳೆ ಮಹಿಳೆಯರಲ್ಲಿ ಹೆಚ್ಚು ಹೊಟ್ಟೆ ನೋವು, ಅತೀ ಹೆಚ್ಚು ರಕ್ತಸ್ರಾವ ವಾಗುವುದು,ಋತುಚಕ್ರದ ಏರಿಳಿತ, ಕೆಳ ಹೊಟ್ಟೆಯಲ್ಲಿ ನೋವು ಹಾಗೂ ಊತ.
  • ನಿಶ್ಯಕ್ತಿ ಹಾಗೂ ದೇಹದ ನಿರ್ಜಲೀಕರಣ.
  • ಸೊಂಟದ ಸುತ್ತಲೂ ಹೆಚ್ಚುವರಿ ಕೊಬ್ಬು.
  • ಕಾಲುಗಳಲ್ಲಿ ನೋವು ಸೆಳೆತ ಊತ
  • ಲೈಂಗಿಕ ಕ್ರಿಯೆ ವೇಳೆ ಅತಿಯಾದ ನೋವು ರಕ್ತಸ್ರಾವ,ಅಸ್ವಸ್ಥತೆ.
  • ಹಾರ್ಮೋನ್ ಅಸಮತೋಲನ ಮತ್ತು ಅತಿಯಾದ ಕೂದಲು ಉದುರುವಿಕೆ.

ಗರ್ಭಕೋಶದ ಕ್ಯಾನ್ಸರನ್ನು ಪತ್ತೆ ಹಚ್ಚಿದ ನಂತರ ಅದರ ಹಂತಗಳನ್ನು ನಿರ್ಧರಿಸಲಾಗುತ್ತದೆ:

  • ಹಂತ ಪ್ರಾರಂಭಿಕವಾಗಿದ್ದರೆ ಕಾರ್ಸಿನೋಮ ಇನ್ ಸಿಟು ಎನ್ನುತ್ತಾರೆ. ಇದು ಗರ್ಭಕೋಶದ ಎಪಿತೀಲಿಯಲ್ ಕೋಶಗಳಿಗೆ ಸೀಮಿತ.
  • ಮೊದಲನೆ ಹಂತದಲ್ಲಿ ಎಪಿತೇಲಿಯಂಗ್ ಒಳಪಟ್ಟಿರುವ ಸಂಯೋಜಕ ಅಂಗಾಂಶಕ್ಕೆ ಹರಡುತ್ತದೆ.
  • ಎರಡನೆಯ ಹಂತ ಗರ್ಭಕೋಶವನ್ನು ಮೀರಿ ಜನನಾಂಗದ ಮೇಲಿನ ಭಾಗಕ್ಕೆ ಹತ್ತಿರದ ಅಂಗಾಂಶಗಳಿಗೆ ಹರಡುತ್ತದೆ.
  • ಮೂರನೆಯ ಹಂತ ಜನನಾಂಗದ ಕೆಳಗಿನ ಭಾಗ ಅಥವಾ ಸೊಂಟದ ಸುತ್ತಲೂ ಹರಡುತ್ತದೆ.
  • ನಾಲ್ಕನೆಯ ಅಂತ ಶ್ವಾಸಕೋಶಗಳು ಮೂತ್ರಕೋಶ ಅಥವಾ ಮೂಳೆಯಂತಾದ ದೂರದ ಅಂಗಾಂಗಗಳಿಗೂ ಹರಡುತ್ತದೆ.

ಚಿಕಿತ್ಸೆಗಳು :
ಗರ್ಭಕೋಶದ ಕ್ಯಾನ್ಸರ್ ಗೆ ಶಸ್ತ್ರ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ.ಸಾಮಾನ್ಯ ವಾಗಿ ಅತಿ ಚಿಕ್ಕ ಕ್ಯಾನ್ಸರ್ ಗಡ್ಡೆಯನ್ನು ಲೇಸರ್ ಮೂಲಕ ತೆಗೆಯಬಹುದು ಆದರೆ ಕ್ಯಾನ್ಸರ್ ಅಂಗಾಂಶದೊಳಗೆ ಗರ್ಭಕೋಶದೊಳಗೆ ಅರಳಿದರೆ ಗರ್ಭಾಶಯ ಮತ್ತು ಗರ್ಭಕೋಶವನ್ನು ತೆಗೆದು ಹಾಕುತ್ತಾರೆ.

ಗರ್ಭಾಶಯವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಹಾಕಿದಾಗ ಶಾಶ್ವತ ಬಂಜೆತನವು ಉಂಟಾಗುತ್ತದೆ. ಗರ್ಭಕೋಶದ ಕ್ಯಾನ್ಸರ್ ಗರ್ಭಾಶಯದ ಆಚೆಗೆ ಹರಡಿದಾಗ ಕೀಮೋ ಥೆರಪಿಯನ್ನು ಬಳಸಲಾಗುತ್ತದೆ.

ಸಲಹೆಗಳು:

  • ಗರ್ಭಕೋಶದ ಕ್ಯಾನ್ಸರ್ ಗೆ ಮುನ್ನೆಚ್ಚರಿಕೆಯ ಮದ್ದು.
  • ಮಹಿಳೆಯರು ತಮ್ಮ ಮೊದಲ ಪ್ಯಾಪ್ ಮತ್ತು ಪೆಲ್ವಿಕ್ ಪರೀಕ್ಷೆಯನ್ನು 21ನೇ ವಯಸ್ಸಿನಲ್ಲಿಯೇ ಮಾಡಬೇಕೆಂದು ವೈದ್ಯರು ಸೂಚಿಸುತ್ತಾರೆ.
  • ಎರಡು ವರ್ಷಗಳಿಗೊಮ್ಮೆ ಪ್ಯಾಪ್ ಪರೀಕ್ಷೆಗಳೊಂದಿಗೆ ಡಾಕ್ಟರ್ ಗಳ ಸಲಹೆ ಮೇರೆಗೆ ಹಲವು ಪರೀಕ್ಷೆಗಳಿಗೆ ಒಳಪಟ್ಟಾಗ ನೆಗೆಟಿವ್ ಎಂದು ಬಂದರೆ ಪ್ಯಾಪ್ ಪರೀಕ್ಷೆಗಳನ್ನು ನಿಲ್ಲಿಸಬಹುದು.

ಸೂಚನೆ: ಯಾವುದೇ ರೋಗಗಳಾದರೂ ಹರಡುವುದಕ್ಕಿಂತ ಅಥವಾ ಬರುವುದಕ್ಕಿಂತ ಮುಂಚೆ ಅದನ್ನು ತಡೆಗಟ್ಟುವಿಕೆ ಬಗ್ಗೆ ಕುರಿತು ಯೋಚಿಸುವುದು ಒಳ್ಳೆಯದು. ಅದಕ್ಕೆ ಹೇಳುವುದು “prevention is better than cure ” ಪರೀಕ್ಷಿಸಿ ಸುರಕ್ಷಿತವಾಗಿರಿ.

  • ಯಶಸ್ವಿನಿ ಗೌಡ. ಆರ್


Tags: healthupdateshealthytipsuterinecancer

Related News

ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?
Lifestyle

ನಿಮಗೆ ಅಂಗೈ ಬೆವರೋ ಸಮಸ್ಯೆ ಇದೆಯಾ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣನಾ?

March 18, 2023
ನಿಮ್ಮ ಇಮ್ಯುನಿಟಿ ಬೂಸ್ಟ್‌ ಆಗ್ಬೇಕಾ? ಹಾಗಾದ್ರೆ ಈ ಹಣ್ಣು ತಿನ್ನಿ ಚಮತ್ಕಾರ ನೋಡಿ
Lifestyle

ನಿಮ್ಮ ಇಮ್ಯುನಿಟಿ ಬೂಸ್ಟ್‌ ಆಗ್ಬೇಕಾ? ಹಾಗಾದ್ರೆ ಈ ಹಣ್ಣು ತಿನ್ನಿ ಚಮತ್ಕಾರ ನೋಡಿ

March 17, 2023
ಪಪ್ಪಾಯ ಹಣ್ಣು ನಮ್ಮ ತ್ವಚೆಗೆ, ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ? ; ಇಲ್ಲಿದೆ ಮಾಹಿತಿ ತಿಳಿಯಿರಿ
ಆರೋಗ್ಯ

ಪಪ್ಪಾಯ ಹಣ್ಣು ನಮ್ಮ ತ್ವಚೆಗೆ, ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ? ; ಇಲ್ಲಿದೆ ಮಾಹಿತಿ ತಿಳಿಯಿರಿ

March 17, 2023
ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಕಾಯಿಲೆಗಳಿಗೆ ರಾಮಬಾಣ ದಂಟಿನ ಸೊಪ್ಪು
ಆರೋಗ್ಯ

ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಕಾಯಿಲೆಗಳಿಗೆ ರಾಮಬಾಣ ದಂಟಿನ ಸೊಪ್ಪು

March 16, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.