ಹೆಣ್ಣು ಮಕ್ಕಳ ಪ್ರಾಣಕ್ಕೆ ಕುತ್ತಾಗುತ್ತಿದೆ ಗರ್ಭಕೋಶದ ಕ್ಯಾನ್ಸರ್ !

Health: ಗರ್ಭಕೋಶದ ಕ್ಯಾನ್ಸರ್(Uterine Cancer) ಅಥವಾ ಗರ್ಭಕಂಠದ ಕ್ಯಾನ್ಸರ್ ಹೆಣ್ಣುಮಕ್ಕಳ ಪ್ರಾಣಕ್ಕೆ ಕಂಟಕವಾಗುತ್ತಿರುವ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾರಣಾಂತಿಕ (Uterine Cancer Symptoms Treatments) ಕಾಯಿಲೆ ಕಾಣಿಸಿಕೊಳ್ಳುತ್ತಿದೆ.

ಅಲ್ಲದೆ ಈ ಬಗ್ಗೆ ಹೆಣ್ಣು ಮಕ್ಕಳು ಭಾರೀ ಆತಂಕಿತರಾಗಿದ್ದಾರೆ. ಹಾಗಾಗಿ ಈ ಕಾಯಿಲೆ ಜನರಲ್ಲಿ ಜಾಗೃತಿ ಮೂಡಿಸಿ ಅಪಾಯದಿಂದ ತಪ್ಪಿಸಿಕೊಳ್ಳುವ ಉಪಾಯ ಕಂಡುಹಿಡಿಯಬೇಕಾಗಿದೆ.

ಗರ್ಭಕೋಶದ ಕ್ಯಾನ್ಸರ್ ಅಂದ್ರೆ ಗರ್ಭಕೋಶದ ಸುತ್ತಮುತ್ತ ಕಂಡುಬರುವ ತೀವ್ರ ಸ್ವರೂಪದ ಗೆಡ್ಡೆ ಯಾಗಿದೆ. ಇದು ಕಾಣಿಸಿಕೊಂಡಾಗ ಮಹಿಳೆಯರ ಆರೋಗ್ಯದಲ್ಲಿ ಹಲವಾರು ರೀತಿಯ ತೊಂದರೆಗಳು ಕಂಡುಬರುತ್ತವೆ.

ಗರ್ಭಕೋಶದ ಕ್ಯಾನ್ಸರ್ ಅನ್ನು ಆರಂಭದ ದಿನಗಳಲ್ಲೇ ಪತ್ತೆಹಚ್ಚದಿದ್ದರೆ ಹಲವಾರು ರೀತಿಯ ಸಮಸ್ಯೆಗಳು (Uterine Cancer Symptoms Treatments) ಕಾಡಲಾರಂಭಿಸುತ್ತದೆ.

ಹಾಗಾಗಿ ಆರಂಭದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡಬೇಕು. ಆದರೆ ಅದನ್ನು ಪತ್ತೆ ಹಚ್ಚುವುದೇ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಯಾಕೆಂದರೆ ಈ ಮಹಾಮಾರಿ ಕೊನೆ ಹಂತಕ್ಕೆ ತಲುಪಿದ ಮೇಲೆಯೇ ಲಕ್ಷಣಗಳನ್ನು ತೋರಿಸಲು ಆರಂಭಿಸುತ್ತದೆ.

ಪತ್ತೆಹಚ್ಚಲು ಕಷ್ಟವಾದರೂ ಕೆಲವೊಂದು ಲಕ್ಷಣಗಳ ಮುಖಾಂತರ ಪತ್ತೆ ಹಚ್ಚಬಹುದು ಇದಕ್ಕೆ ಕಾರಣ ಇವತ್ತಿಗೂ ನಿಖರವಾಗಿ ಪತ್ತೆಯಾಗಿಲ್ಲ.

ಮಹಿಳೆಯರ ಸಂತಾನೋತ್ಪತ್ತಿಯ ವ್ಯವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್(Cancer) ಇದಾಗಿದೆ.

ಗರ್ಭಕೋಶದ ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆ ಆದರೆ ಹೆಣ್ಣು ಮಕ್ಕಳ ನಿರ್ಲಕ್ಷ್ಯ ಹಾಗೂ ಮಾಹಿತಿಯ ಕೊರತೆಯಿಂದ ದೊಡ್ಡ ಅಪಾಯಕ್ಕೆ ತುತ್ತಾಗುತ್ತಿದ್ದಾರೆ.

ಈ ಕಾರಣಕ್ಕಾಗಿ ಕ್ಯಾನ್ಸರ್ ನ ವ್ಯಾಕ್ಸಿನೇಷನ್(Vaccination) ಹಾಗೂ ನಿಯಮಿತ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.

ಮುಟ್ಟು ನಿಲ್ಲುವಂತಹ ಮಹಿಳೆಯರ ಗರ್ಭಕೋಶದಲ್ಲಿ ಮೊಟ್ಟ ಮೊದಲನೆಯದಾಗಿ ಊತ ಕಾಣಿಸಿಕೊಳ್ಳುತ್ತದೆ. ಇದು ಸುಮಾರು 40 ರಿಂದ 55-60 ವರ್ಷದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಗರ್ಭಕೋಶದ ಕ್ಯಾನ್ಸರ್ ಗೆ ಪ್ರಮುಖ ಕಾರಣಗಳು:

ಗರ್ಭಕೋಶದ ಕ್ಯಾನ್ಸರ್ ನ ಲಕ್ಷಣಗಳು:

ಗರ್ಭಕೋಶದ ಕ್ಯಾನ್ಸರನ್ನು ಪತ್ತೆ ಹಚ್ಚಿದ ನಂತರ ಅದರ ಹಂತಗಳನ್ನು ನಿರ್ಧರಿಸಲಾಗುತ್ತದೆ:

ಚಿಕಿತ್ಸೆಗಳು :
ಗರ್ಭಕೋಶದ ಕ್ಯಾನ್ಸರ್ ಗೆ ಶಸ್ತ್ರ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ.ಸಾಮಾನ್ಯ ವಾಗಿ ಅತಿ ಚಿಕ್ಕ ಕ್ಯಾನ್ಸರ್ ಗಡ್ಡೆಯನ್ನು ಲೇಸರ್ ಮೂಲಕ ತೆಗೆಯಬಹುದು ಆದರೆ ಕ್ಯಾನ್ಸರ್ ಅಂಗಾಂಶದೊಳಗೆ ಗರ್ಭಕೋಶದೊಳಗೆ ಅರಳಿದರೆ ಗರ್ಭಾಶಯ ಮತ್ತು ಗರ್ಭಕೋಶವನ್ನು ತೆಗೆದು ಹಾಕುತ್ತಾರೆ.

ಗರ್ಭಾಶಯವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಹಾಕಿದಾಗ ಶಾಶ್ವತ ಬಂಜೆತನವು ಉಂಟಾಗುತ್ತದೆ. ಗರ್ಭಕೋಶದ ಕ್ಯಾನ್ಸರ್ ಗರ್ಭಾಶಯದ ಆಚೆಗೆ ಹರಡಿದಾಗ ಕೀಮೋ ಥೆರಪಿಯನ್ನು ಬಳಸಲಾಗುತ್ತದೆ.

ಸಲಹೆಗಳು:

ಸೂಚನೆ: ಯಾವುದೇ ರೋಗಗಳಾದರೂ ಹರಡುವುದಕ್ಕಿಂತ ಅಥವಾ ಬರುವುದಕ್ಕಿಂತ ಮುಂಚೆ ಅದನ್ನು ತಡೆಗಟ್ಟುವಿಕೆ ಬಗ್ಗೆ ಕುರಿತು ಯೋಚಿಸುವುದು ಒಳ್ಳೆಯದು. ಅದಕ್ಕೆ ಹೇಳುವುದು “prevention is better than cure ” ಪರೀಕ್ಷಿಸಿ ಸುರಕ್ಷಿತವಾಗಿರಿ.


Exit mobile version