Bengaluru: ಕರ್ನಾಟಕ (Karnataka) ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇನ್ನೂ 20,000 ಹುದ್ದೆಗಳು ಖಾಲಿ ಇದ್ದು, 16,000 ಪೊಲೀಸ್ ಕಾನ್ಸ್‌ಟೇಬಲ್ (vacancy in police dept) ಹುದ್ದೆಗಳು ರಾಜ್ಯದಲ್ಲಿ
ಖಾಲಿ ಇವೆ. ಇವುಗಳೆಲ್ಲವನ್ನೂ ಸದ್ಯದಲ್ಲಂತೂ ಸರ್ಕಾರ ನೇಮಕಾತಿ ಮಾಡಿಕೊಳ್ಳುವುದಿಲ್ಲ. ಆದರೆ (vacancy in police dept) ಪ್ರಸ್ತುತ ಯಾವ್ಯಾವ ಹುದ್ದೆಗಳನ್ನು,

ಎಷ್ಟು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದ್ದು, ಇವುಗಳ ಪೈಕಿ ಸದ್ಯ ಬೆಂಗಳೂರು (Bengaluru) ನಗರಕ್ಕೆ ಆರ್ಥಿಕ ಇಲಾಖೆ 2500 ಪೇದೆಗಳ ನೇಮಕಕ್ಕೆ
ಆದ್ಯತೆ ನೀಡಿದೆ. ಈ ಹುದ್ದೆಗಳ ನೇಮಕ ಪ್ರಕ್ರಿಯೆ ತಕ್ಷಣವೇ ಆರಂಭವಾಗಲಿದೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ರವರು ಹೇಳಿದ್ದಾರೆ.
ಇದನ್ನು ಓದಿ: ಇನ್ಮುಂದೆ ಭಾರತದಲ್ಲಿ ಸಿಗಲಿದೆ 15 ರೂಪಾಯಿಗೆ ಪೆಟ್ರೋಲ್ ! ಅದು ಹೇಗೆ ಸಾಧ್ಯ? ಓದಿ ಈ ವರದಿ
ಕರ್ನಾಟಕದ (Karnataka) ಇತರೆ ಭಾಗಗಳಿಗೆ 3500 ಪೊಲೀಸ್ ಕಾನ್ಸ್‌ಟೇಬಲ್ (ಪೇದೆಗಳು) ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ.
ಸರ್ಕಾರವು 2500 ಮತ್ತು 3500 ಒಟ್ಟು 6000 ಪೇದೆಗಳ ನೇಮಕಕ್ಕೆ ಮುಂದಾಗಿದೆ. ಇನ್ನು ಖಾಲಿ ಉಳಿದಿರುವ 10,000 ಪೇದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಸಚಿವರು ಮಾಹಿತಿ ನೀಡಿದ್ದು,
ಆದರೆ ಅದು ಯಾವಾಗ ಎಂದು ಗೃಹಸಚಿವರು ಮಾಹಿತಿ ನೀಡಿಲ್ಲ.

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (Sub Inspector) ಹುದ್ದೆಗಳ ಪೈಕಿ 400 ಪಿಎಸ್‌ಐ ನೇಮಕಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ. ಆದರೆ 545 ಪಿಎಸ್‌ಐಗೆ (PSI) ಪರೀಕ್ಷೆ ಬರೆದವರು ಸೇವಾ ಹಿರಿತನ ಹೋಗುತ್ತದೆ
ಎನ್ನುವ ಕಾರಣದಿಂದ ಮತ್ತೆ ನ್ಯಾಯಾಲಯಕ್ಕೆ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಈ ಪ್ರಕ್ರಿಯೆ ತಡೆ ಹಿಡಿದಿದ್ದೇವೆ. ಈ ಕೊರತೆ ನೀಗಿಸಲು ಎಎಸ್‌ಐಗಳಿಗೆ ಬಡ್ತಿ ನೀಡಲು ಕಡತ ಸಿದ್ಧವಾಗುತ್ತಿದೆ.
700 ಎಎಸ್‌ಐಗಳಿಗೆ (ASI) ಬಡ್ತಿ ಸಿಕ್ಕಲ್ಲಿ ಅವರ ಕೆಳಹಂತದ ಮುಖ್ಯ ಪೇದೆ ಹಾಗೂ ಪೇದೆಗಳಿಗೂ ಬಡ್ತಿ ಸಿಗಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಇನ್ನು 545 ಪಿಎಸ್‌ಐ (PSI) ಅಕ್ರಮ ಪರೀಕ್ಷೆಯಿಂದಾಗಿ ನೇಮಕಾತಿ ಸ್ಥಗಿತಗೊಂಡಿದ್ದು, ಪರೀಕ್ಷೆಯನ್ನು ಒಟ್ಟು 50,000 ಅಭ್ಯರ್ಥಿಗಳು ಬರೆದಿದ್ದಾರೆ. ಮರು ಪರೀಕ್ಷೆಗೆ ಅನುಮತಿ ನೀಡುವಂತೆ ಅಡ್ವೋಕೇಟ್ ಜನರಲ್
(Advocate General) ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ನ್ಯಾಯಾಲಯದ ತೀರ್ಪಿನಂತೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಭವ್ಯಶ್ರೀ ಆರ್.ಜೆ