2023ನೇ ಸಾಲಿನ ದೊಡ್ಡ ಸಂಖ್ಯೆಯ ಗ್ರಾಮೀಣ ಡಾಕ್ ಸೇವಕ್ (vacancy in post office) ಹುದ್ದೆಗಳ ಭರ್ತಿಗೆ ಭಾರತೀಯ ಅಂಚೆ ಇಲಾಖೆಯು ಎರಡನೇ ನೋಟಿಫಿಕೇಶನ್
(Notification) ಬಿಡುಗಡೆ ಮಾಡಿದೆ. ಬರೋಬ್ಬರಿ 30,041 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಭಾರತೀಯ
ಅಂಚೆ ಇಲಾಖೆಯು ಪ್ರಸಕ್ತ ವರ್ಷದ ಎರಡನೇ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಬಾರಿ ಸುಮಾರು 30,041 ಜಿಡಿಎಸ್ (GDS) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

ಎಸ್‌ಎಸ್‌ಎಲ್‌ಸಿ (SSLC)/ 10ನೇ ತರಗತಿ ಉತ್ತೀರ್ಣರಾದವರು ಗ್ರಾಮೀಣ ಡಾಕ್ ಸೇವಕ್, ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (Branch Post Master), ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್
ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಅಪ್ಲಿಕೇಶನ್ (Application) ಸಲ್ಲಿಸಿದವರನ್ನು ಅವರ ವಿದ್ಯಾರ್ಹತೆ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ
ಮಾಡಲಾಗುತ್ತದೆ. ಯಾವುದೇ ಪರೀಕ್ಷೆ ಇರುವುದಿಲ್ಲ. ಆಸಕ್ತರು ಹೆಚ್ಚಿನ ವಿವರ (vacancy in post office) ಕೆಳಗಿನಂತೆ ಓದಿಕೊಂಡು ಅರ್ಜಿ ಹಾಕಿರಿ.
ನೇಮಕಾತಿ ಪ್ರಾಧಿಕಾರ : ಭಾರತೀಯ ಅಂಚೆ ಇಲಾಖೆ
ಹುದ್ದೆ : ಗ್ರಾಮೀಣ ಡಾಕ್ ಸೇವಕ್, ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (Assistant branch Post Master)
ಭಾರತದಾದ್ಯಂತ ಹುದ್ದೆಗಳ ಸಂಖ್ಯೆ : 30,041
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 1,678
ವೇತನ ಮಾಹಿತಿ:
ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ (BPM) : ರೂ. 12,000 ರಿಂದ 29,380 ವರೆಗೆ.
ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM): ರೂ.10,000 ರಿಂದ 24,470.
ಡಾಕ್ ಸೇವಕ್ (Dak Sevak): ರೂ.10,000-24,470.
ಅರ್ಹತೆಗಳು:
ಎಸ್‌ಎಸ್‌ಎಲ್‌ಸಿ (SSLC)/10ನೇ ತರಗತಿ ಪಾಸಾಗಿರಬೇಕು.
ಕರ್ನಾಟಕ (karnataka) ಅಭ್ಯರ್ಥಿಗಳಿಗೆ ಅಧಿಕೃತ ಭಾಷೆ ಅಂದರೆ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಬರಬೇಕು.
ಅಭ್ಯರ್ಥಿಗಳು ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.
ಜೊತೆಗೆ ಕಂಪ್ಯೂಟರ್ (Computer) ಜ್ಞಾನವನ್ನು ಹೊಂದಿದ್ದು, ಪ್ರಮಾಣ ಪತ್ರ ಪಡೆದಿರಬೇಕು.

ವಯಸ್ಸು:
ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷಮೀರಿರಬಾರದು. ಇನ್ನು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ 5 ವರ್ಷ ಆಗಿರಬೇಕು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿವೆ.
ಆಯ್ಕೆ ಪ್ರಕಾರ:
ಆನ್‌ಲೈನ್‌ನಲ್ಲಿ (Online) ಸಲ್ಲಿಸಿದ ಅರ್ಜಿಗಳನ್ನು ನಿಯಮಾನುಸಾರ ಅಂದರೆ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರು ಮಾಡುವ ಮೂಲಕ, ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ
ಪರಿಶೀಲನೆಯನ್ನು ನಡೆಸಿ, ನೇಮಕಾತಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಹುದ್ದೆಗೆ ವರದಿ ಮಾಡಿಕೊಳ್ಳದಿದ್ದಲ್ಲಿ, ಮತ್ತೆ ಎರಡನೇ ಅರ್ಹತಾ ಪಟ್ಟಿ
ಬಿಡುಗಡೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 03-08-2023 ಹಾಗೂ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆ ದಿನಾಂಕ 23-08-2023
ಅಪ್ಲಿಕೇಶನ್ ತಿದ್ದುಪಡಿಗೆ ಇರುವ ಕೊನೆಯ ಅವಕಾಶ : 24-08-2023 ರಿಂದ 26-08-2023
ಅರ್ಜಿ ಸಲ್ಲಿಕೆ:
ವೆಬ್‌ಸೈಟ್ ವಿಳಾಸ https://indiapostgdsonline.gov.in/Reg_validation.aspx ಕ್ಕೆ ಮೊದಲಿಗೆ ಲಾಗಿನ್ (Login) ಮಾಡಿ ರಿಜಿಸ್ಟ್ರೇಷನ್ ಪಡೆಯಬೇಕು. ನಂತರ ಮತ್ತೆ ಭೇಟಿ ನೀಡುವ
ಮೂಲಕ ಅರ್ಜಿ ಹಾಗೂ ಶುಲ್ಕ ಪಾವತಿಸಿ, ಅರ್ಜಿ ಪೂರ್ಣಗೊಳಿಸಬೇಕು.
ಭವ್ಯಶ್ರೀ ಆರ್.ಜೆ