Bengaluru : ರಾಜಧಾನಿ ಬೆಂಗಳೂರಿನಲ್ಲಿ (Vegetables prices rised Bangalore) ಸೊಪ್ಪು ಸೇರಿದಂತೆ ತರಕಾರ) ಬೆಲೆಗಳು ಕೂಡಾ ಗಗನ ಮುಟ್ಟಿವೆ. ನುಗ್ಗೆಕಾಯಿ ಈಗ ಪೆಟ್ರೋಲ್ ರೇಟ್ ಬಂದಿದೆ.
ಬೀನ್ಸ್ ಶತಕ ಬಾರಿಸಿದೆ.ಬದನೇಕಾಯಿ ಕೂಡ ಶತಕದ ಬಳಿ ಬಂದು (Vegetables prices rised Bangalore) ನಿಂತಿದೆ
ಅಷ್ಟಕ್ಕೂ ಮಾರುಕಟ್ಟೆಗೆ ತರಕಾರಿ ಖರೀದಿಸಲು ತೆರಳಿದ್ದ ಬೆಂಗಳೂರಿಗರು ಬೆಚ್ಚಿಬಿದ್ದಿದ್ದು, ತರಕಾರಿಗಳ ಬೆಲೆ ಕೇಳಿ ಮಹಿಳೆಯರೂ ಬೆಚ್ಚಿಬಿದ್ದಿದ್ದಾರೆ. ಮಾರ್ಕೆಟ್ಗೆ ಎಂಟ್ರಿ ಕೊಟ್ರೆ ಎದೆ ಬಡಿತ ಹೆಚ್ಚಾಗುತ್ತೆ.
ಏಕೆಂದರೆ ಬೀನ್ಸ್, ಬದನೆ, ಕ್ಯಾರೆಟ್ ಸೇರಿದಂತೆ ಯಾವ ತರಕಾರಿ ಕೇಳಿದ್ರೂ 50ರಿಂದ 100 ರೂ.ಗೆ ಮುಟ್ಟಿದೆ . ಸದ್ಯ ಈರುಳ್ಳಿ (Onion) ಮಾತ್ರ ಕೈಗೆಟುಕುತ್ತಿದೆ.

ತರಕಾರಿ ಬೆಲೆ ದಿಢೀರ್ ಏರಿಕೆಯಾಗಲು ಭಾರೀ ಮಳೆಯೇ ಕಾರಣ. ಕೆಲ ದಿನಗಳ ಹಿಂದೆ ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapura), ಬೆಂಗಳೂರು ಗ್ರಾಮಾಂತರ,
ರಾಮನಗರ ಸೇರಿದಂತೆ ಬೆಂಗಳೂರು ಸುತ್ತಮುತ್ತ ಮಳೆಯಿಂದ ತರಕಾರಿ ಬೆಳೆ ಹಾನಿಯಾಗಿತ್ತು. ಇದರಿಂದ ಉತ್ಪಾದನೆ ಕುಸಿದು ಪೇಟೆಗೆ ಸರಬರಾಜಾಗುವ ತರಕಾರಿಗಳ ಬೆಲೆ ಏರಿಕೆಯಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಧಾನ್ಯಗಳು ಮತ್ತು ತರಕಾರಿಗಳ ಬೆಲೆಗಳು ತೀವ್ರಗತಿಯಲ್ಲಿ ಏರುತ್ತಿವೆ. ದೇಶದ ನಿರುದ್ಯೋಗ ದರವು 45 ವರ್ಷಗಳಲ್ಲೇ ಅತ್ಯಧಿಕವಾಗಿದೆ.
ಕೋವಿಡ್ (Covid) ಮಹಾಮಾರಿಯ ಆಘಾತದಿಂದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಬೆಲೆ ಏರಿಕೆಯ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಅಥವಾ ಗಮನ ಹರಿಸುವುದು ಅನಗತ್ಯ ಎಂದು ಭಾವಿಸುತ್ತದೆ.

ಕೆ.ಆರ್.ಮಾರುಕಟ್ಟೆ,ಕಲಾಸಿಪಾಳ್ಯ ಮಾತ್ರವಲ್ಲದೇ ಕೆಲ ತರಕಾರಿಗಳ ಬೆಲೆ ಹಾಪ್ ಕಾಮ್ಸ್‌ನಲ್ಲೂ ನೂರರ ಗಡಿ ದಾಟಿದೆ.
ಒಂದು ಕೆಜಿ ಬೀನ್ಸ್ ಬೆಲೆ ಈ ಹಿಂದೆ 40 ರಿಂದ 50 ರೂಪಾಯಿವರೆಗೂ ಇತ್ತು ಆದರೆ ಇದೀಗ 100 ರ ಗಡಿದಾಟಿದೆ.ಮೈಸೂರು ಬದನೆ ಈ ಹಿಂದೆ ಕೆಜಿಗೆ 30 ಸಿಗುತಿತ್ತು ಇದೀಗ 60 ರಿಂದ 80 ರೂಪಾಯಿ ಆಗಿದೆ.
ಈ ಹಿಂದೆ 30ರೂ ಗೆ ಸಿಗುತ್ತಿದ್ದ ಕ್ಯಾರೆಟ್ ಈಗ 60 ಕ್ಕೆ ಜಿಗಿದಿದೆ.40 ರೂಪಾಯಿ ಇದ್ದಿದ್ದ ನುಗ್ಗಿಕಾಯಿಯಂತೂ 100 ರೂಪಾಯಿ ತಲುಪಿದೆ. ಕೇವಲ ತರಕಾರಿ ಮಾತ್ರವಲ್ಲದೇ ಪಾಲಕ್ ಸೊಪ್ಪು,ಕೊತ್ತಂಬರಿ,
ಮೆಂತ್ಯೆ ಸೇರಿದಂತೆ ಸೊಪ್ಪಿನ ದರಗಳು ಕೂಡಾ ಹೆಚ್ಚಾಗಿವೆ. ಒಟ್ಟಿನಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ತರಕಾರಿಗಳ ದರ 10 ರಿಂದ 25 ರಷ್ಟು ದುಪ್ಪಟ್ಟು ಆಗಿದೆ.
ರಶ್ಮಿತಾ ಅನೀಶ್