ಯಾವ ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾರೆಲ್ಲ ಸೋತಿದ್ದಾರೆ, ಗೆದ್ದಿದ್ದಾರೆ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ ಇಲ್ಲಿದೆ

Bengaluru : 2023 ಕರ್ನಾಟಕ ವಿಧಾನಸಭಾ ಚುನಾವಣೆಯ (2023 Karnataka assembly election) ಮತ ಎಣಿಕೆಯು ಅತ್ಯಂತ ಭರದಿಂದ ನಡೆಯುತ್ತಿದೆ. ರಾಜ್ಯದ ಪ್ರತಿಯೊಂದು ಕ್ಷೇತ್ರದ ಫಲಿತಾಂಶವೂ ಅತ್ಯಂತ ಮಹತ್ವದ್ದೆನಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು, ಬಸವರಾಜ ಬೊಮ್ಮಾಯಿ (Basavaraja Bommai) ಸಚಿವ ಸಂಪುಟದ ಕೆಲವು ಸಚಿವರು ಹೀನಾಯ ಸೋಲು ಅನುಭವಿಸಿದ್ದಾರೆ.

ಮಕಾಡೆ ಮಲಗಿದ ಬಸವರಾಜ ಬೊಮ್ಮಾಯಿ ಸಂಪುಟದ ಘಟಾನುಘಟಿ ಸಚಿವರುಗಳು!

ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ, ಈಗಾಗಲೇ ಕಾಂಗ್ರೆಸ್​ ಮ್ಯಾಜಿಕ್ ನಂಬರ್ ದಾಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಈಗಾಗಲೇ ಸೋಲುಕಂಡಿದ್ದಾರೆ. ಜನರಿಗೆ ಬಿಜೆಪಿಯ (BJP) ನೇತೃತ್ವದಲ್ಲಿದ್ದ ಸರ್ಕಾರದ ವಿರುದ್ಧ ಅಸಮಾಧಾನ ಇದ್ದದ್ದು ಈ ರೀತಿ ಬಯಲಾಗಿದೆ.

ಹಾಗೂ ಸಚಿವರಾಗಿ ಅವರ ಕಾರ್ಯವೈಖರಿ ಬಗ್ಗೆ ಕೂಡ ಅಸಮಾಧಾನ ಇದ್ದಂತೆ ಕಾಣುತ್ತದೆ ಏಕೆಂದರೆ ಈ ಈ ಫಲಿತಾಂಶವನ್ನು 2018ರ ವಿಧಾನಭಾ ಚುನಾವಣೆಯಲ್ಲೂ ಸಹ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಸೋತಿದ್ದರು. ಇದೀಗ ಬೊಮ್ಮಾಯಿ ಸಂಪುಟದ ಸಚಿವರಿಗೂ ಇದೇ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ :  https://vijayatimes.com/assembly-election-result-update/

ಯಾವ ಯಾವ ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾರೆಲ್ಲ ಸೋತಿದ್ದಾರೆ, ಗೆದ್ದಿದ್ದಾರೆ ಎನ್ನುವ ವಿವರ ಇಲ್ಲಿದೆ :

1.ಚಾಮರಾಜನಗರ, ವರುಣಾ ಎರಡೂ ಕ್ಷೇತ್ರಗಳಲ್ಲಿ ಸೋತ ಸಚಿವ ಸೋಮಣ್ಣ (V. Somanna)
2.ಕನಕಪುರದಲ್ಲಿ (Kanakpur) 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಡಿ.ಕೆ.ಶಿವಕುಮಾರ್ ಗೆ ಗೆಲುವು

3.ಧಾರವಾಡದಲ್ಲಿ (Dharwad) ಜಯಭೇರಿ ಸಾಧಿಸಿದ ಕಾಂಗ್ರೆಸ್ ನ ವಿನಯ್ ಕುಲಕರ್ಣಿ
4.ಕೆ.ಆರ್.ಪೇಟೆ: ಹಾಲಿ ಸಚಿವ ನಾರಾಯಣ ಗೌಡಗೆ ಸೋಲು
ಜೆಡಿಎಸ್ (JDS) ನ ಮಂಜುಗೆ ಜಯ
5.ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆಗೆ ಜಯ


6.ಕೆಆರ್ ಪುರಂ ಬೈರತಿ ಬಸವರಾಜು ಬಿಜೆಪಿ ಗೆಲುವು 20345 ಮತಗಳಿಂದ.
7.ಹುಮ್ನಾಬಾದ್ ಬಿಜೆಪಿ ಗೆಲುವು ಸಿದ್ದು ಪಾಟೀಲ್
8.ಮಂಗಳೂರು ಉತ್ತರ ಭರತ್ ಶೆಟ್ಟಿ ಬಿಜೆಪಿ ಗೆಲುವು
9.ಬೆಳ್ತಂಗಡಿ ಬಿಜೆಪಿ ಹರೀಶ್ ಪೂಂಜಾ (Harish Poonja) ಗೆಲುವು
10.ವೇದವ್ಯಾಸ್ ಕಾಮತ್ ಮಂಗಳೂರು ದಕ್ಷಿಣ ಬಿಜೆಪಿ ಗೆಲುವು 18427 ಮತಗಳಿಂದ

ಇದನ್ನೂ ಓದಿ : https://vijayatimes.com/election-result-update-2023/


11.ಪುತ್ತೂರಿನಲ್ಲಿ ಅಶೋಕ್ ರೈ ಗೆಲ್ಲುವು, ಅರುಣ್ ಪುತ್ತಿಲಗೆ ಎರಡನೇ ಸ್ಥಾನ
12.ಹಾಲಾಡಿ ಶ್ರೀನಿವಾಸ್​​ ಶೆಟ್ಟಿ ಶಿಷ್ಯ ಕಿರಣ್ ಕುಮಾರ್​​ ಕೋಡ್ಗಿ ಗೆಲುವು
13.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ (Channapatna Assembly Constituency) ಎಲೆಕ್ಷನ್​ 2023 ರಿಸಲ್ಟ್ : ಹೆಚ್​ಡಿ ಕುಮಾರಸ್ವಾಮಿಗೆ ಭರ್ಜರಿ ಗೆಲುವು
14.ಹೀರೆಕೆರೂರಿನಲ್ಲಿ ಕಾಂಗ್ರೆಸ್​ನ ಯುಬಿ ಬಣಕರ್​ಗೆ​ ಭರ್ಜರಿ ಗೆಲುವು, ಸೋಲು ಕಂಡ ಬಿಸಿ ಪಾಟೀಲ್​
15.ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್ : ಕಾಂಗ್ರೆಸ್​ ಕೆ.ಹೆಚ್.ಮುನಿಯಪ್ಪಗೆ ಜಯ

Exit mobile version