ಡಿ. ಕೆ. ಶಿವಕುಮಾರ್ ಅವರು ಭ್ರಷ್ಟರಲ್ಲದಿದ್ದರೆ ಸಿಬಿಐ ತನಿಖೆ ಎದುರಿಸಿ ಹೊರಬರಲಿ – ವಿಜಯೇಂದ್ರ ಸವಾಲ್

ಡಿ.ಕೆ.ಶಿವಕುಮಾರ (Vijayendra Challenge for DKS) ಮೇಲೆ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ತೀರ್ಮಾನ ಸಂಪೂರ್ಣವಾಗಿ ಕಾನೂನು, ಸಂವಿಧಾನಕ್ಕೆ ವಿರುದ್ಧವಾದುದು.

ಈ ತೀರ್ಮಾನವನ್ನು ಬಿಜೆಪಿ (BJP) ಬಲವಾಗಿ ಖಂಡಿಸುತ್ತದೆ. ಡಿ. ಕೆ. ಶಿವಕುಮಾರ್ ಅವರನ್ನು ರಕ್ಷಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಡಿ. ಕೆ. ಶಿವಕುಮಾರ್ ಅವರು ಭ್ರಷ್ಟರಲ್ಲದಿದ್ದರೆ

ಸಿಬಿಐ ತನಿಖೆ ಎದುರಿಸಿ ಹೊರಬರಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ (Vijayendra Challenge for DKS) ಸವಾಲು ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಹಿಂದಿನ ಬಿಜೆಪಿ ಸರ್ಕಾರ ಸೇಡಿನ ಭಾಗವಾಗಿ ತಮ್ಮ ವಿರುದ್ಧ ಸಿಬಿಐ(CBI) ತನಿಖೆಗೆ ಅನುಮತಿ ನೀಡಿದ್ದು ಕೇಸ್ ವಜಾಗೊಳಿಸುವಂತೆ ಡಿ.ಕೆ.ಶಿವಕುಮಾರ

ಅವರು ಮಾಡಿದ್ದ ಮನವಿಯನ್ನು ಘನ ಉಚ್ಚ ನ್ಯಾಯಾಲಯ ಈಗಾಗಲೇ ತಿರಸ್ಕರಿಸಿ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ. ಆದಾಗ್ಯೂ ಕಾನೂನು ಸಚಿವ ಎಚ್.ಕೆ.ಪಾಟೀಲ (H K Patil)

ಅವರು ತಮ್ಮ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಪೋಷಣೆಯ ಕ್ರಮವನ್ನು ಸಮರ್ಥಿಸಲು ವ್ಯರ್ಥ ಪ್ರಯತ್ನ ನಡೆಸಿರುವುದು ಅವರ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ.

ಸಂವಿಧಾನದ ಘನತೆ, ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ತನ್ನದಲ್ಲದ ತಪ್ಪಿಗೂ ನೈತಿಕ ಹೊಣೆ ಹೊತ್ತು ಅಧಿಕಾರ ತ್ಯಾಗಮಾಡಿದ ಹಲವು ಮಹನೀಯರು ಗೌರವದ ರಾಜಕಾರಣಕ್ಕೆ

ಇತಿಹಾಸ ಬರೆದು ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

ಕರ್ನಾಟಕದ (Karnataka) ರಾಜಕಾರಣಕ್ಕೆ ಕರಾಳ ಇತಿಹಾಸ ಬರೆಯಲೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ (Congress) ಸರ್ಕಾರ ತನ್ನ ಸಂಪುಟ ಸದಸ್ಯ ಡಿ.ಕೆ.ಶಿವಕುಮಾರವರ ಮೇಲಿರುವ

ಸಿಬಿಐ ತನಿಖೆಯ ಕೇಸ್ ಹಿಂತೆಗೆದು ಕೊಳ್ಳುವ ನಿಲುವು ತಳೆದಿರುವುದು ಸಾಂವಿಧಾನಿಕ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಸವಾರಿ ಮಾಡಿದ ಕ್ರಮವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ

ಅವರ ಅಕ್ರಮ ಆಸ್ತಿಯ ಸಿಬಿಐ ತನಿಖೆಯನ್ನು ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ ಸಾರಸಗಟಾಗಿ ಹಿಂಪಡೆದು, ರಾಜ್ಯವನ್ನು ಗೂಂಡಾ, ಭ್ರಷ್ಟಚಾರಿಗಳ ಅಡುಗುದಾಣ ಮಾಡುತ್ತಿದೆ.

ನ್ಯಾಯ, ಪ್ರಾಮಾಣಿಕತೆ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯರವರೇ, ಡಿ. ಕೆ. ಶಿವಕುಮಾರ್ 5 ವರ್ಷಗಳಲ್ಲಿ 380 ಪಟ್ಟು ಅಕ್ರಮ ಆಸ್ತಿಯ ಗಂಟು ಮಾಡಿಕೊಂಡರೂ ಚಕಾರ ಎತ್ತದ ನೀವು, ಈಗ

ಅವರ ಮೇಲಿನ ಸಿಬಿಐ ತನಿಖೆಯನ್ನೇ ಹಿಂಪಡೆದು ಭ್ರಷ್ಟರ ಮಹಾಪೋಷಣೆ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ: ಕೇಂದ್ರ ಗುಪ್ತಚರ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ

Exit mobile version