ಭಾರತೀಯರು ವೀಸಾವಿಲ್ಲದೆ ಮಲೇಷ್ಯಾಗೆ ಡಿ.1 ರಿಂದ ಪ್ರಯಾಣಿಸಬಹುದು: ಪ್ರಧಾನಿ ಅನ್ವರ್ ಇಬ್ರಾಹಿಂ

Malaysia: ಡಿಸೆಂಬರ್ 1 ರಿಂದ 30 ದಿನಗಳವರೆಗೆ ಚೀನಾ (China) ಹಾಗೂ ಭಾರತದ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಮಲೇಷ್ಯಾವು ಘೋಷಿಸಿದ್ದು, ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಈ ಆದೇಶ ಹೊರಡಿಸಿದ್ದಾರೆ. ಆದರೆ ವೀಸಾ ವಿನಾಯಿತಿ ಯಾವ ದಿನಾಂಕದವರೆಗೆ ಅನ್ವಯಿಸುತ್ತದೆ ಎಂಬುವ ಮಾಹಿತಿ ನೀಡಿಲ್ಲ.

ಮಲೇಷ್ಯಾ (Malaysia) ಈ ವರ್ಷದ ಜನವರಿ ಮತ್ತು ಜೂನ್ ನಡುವೆ 9.16 ಮಿಲಿಯನ್ (Million) ಪ್ರವಾಸಿಗರನ್ನು ಕಂಡಿದೆ. ಚೀನಾದಿಂದ 498,540 ಮತ್ತು ಭಾರತದಿಂದ 283,885 ಪ್ರವಾಸಿಗರು ಆಗಮಿಸಿದ್ದಾರೆ. ಇದು 2019 ರ ಇದೇ ಅವಧಿಯಲ್ಲಿ, ಸಾಂಕ್ರಾಮಿಕ ರೋಗಕ್ಕೆ ಮೊದಲು ಚೀನಾದಿಂದ 1.5 ಮಿಲಿಯನ್ ಮತ್ತು ಭಾರತದಿಂದ 354,486 ಆಗಮಿಸಿದ್ದರು ಎಂದು ಸರ್ಕಾರದ ಅಂಕಿ ಅಂಶಗಳ ತಿಳಿಸುತ್ತದೆ.

ಪ್ರಸ್ತುತ, ಚೀನಾ ಮತ್ತು ಭಾರತೀಯ ಪ್ರಜೆಗಳು ಮಲೇಷ್ಯಾ ಪ್ರವೇಶಿಸಲು ವೀಸಾಗಳಿಗೆ (Visa) ಅರ್ಜಿ ಸಲ್ಲಿಸಬೇಕು. ಈಗಾಗಲೇ ಭಾರತೀಯರು ಥೈಲ್ಯಾಂಡ್ ಮತ್ತು ಶ್ರೀಲಂಕಾದಲ್ಲಿ (Srilanka) ವೀಸಾಮುಕ್ತ ಪ್ರವೇಶವನ್ನು ಪಡೆಯುತ್ತಿದ್ದು, ಮಲೇಷಿಯಾ ಕುವೈತ್, ಸೌದಿ ಅರೇಬಿಯಾ, ಬಹ್ರೇನ್, ಯುಎಇ (UAE), ಟರ್ಕಿ, ಜೋರ್ಡಾನ್ ಮತ್ತು ಇರಾನ್‌ಗಳಿಗೆ ಈ ವಿನಾಯಿತಿಯನ್ನು ನೀಡಿತ್ತು. ಆದರೆ, ಇವೆಲ್ಲ ಮುಸ್ಲಿಂ (Muslim) ರಾಷ್ಟ್ರಗಳಾಗಿದ್ದವು.

ಭಾರತವು ಐದನೇ ಸ್ಥಾನದಲ್ಲಿದ್ದು, ಮಲೇಷ್ಯಾಕ್ಕೆ ಹೋಗುವ ಅತಿ ಹೆಚ್ಚು ಪ್ರವಾಸಿಗರಲ್ಲಿ ಚೀನಾದ ಜನರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಾಂಕ್ರಾಮಿಕ ರೋಗದ ಮೊದಲು, 2019 ರ ಇದೇ ಅವಧಿಯಲ್ಲಿ ಚೀನಾದಿಂದ 15 ಲಕ್ಷ ಜನರು ಮತ್ತು ಭಾರತದಿಂದ 3 ಲಕ್ಷ 54 ಸಾವಿರ 486 ಜನರು ಮಲೇಷ್ಯಾಕ್ಕೆ ಹೋಗಿದ್ದರು. ಮಲೇಷ್ಯಾದ ಈ ಕ್ರಮವನ್ನು ತಮ್ಮ ಪ್ರಮುಖ ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಮತ್ತು ಅವರ ಜಡ ಆರ್ಥಿಕತೆಯನ್ನು ಉತ್ತೇಜಿಸಲು ಜಾರಿಗೆ ತರಲಾಗಿದೆ.

ಭವ್ಯಶ್ರೀ ಆರ್ ಜೆ

Exit mobile version