ಜೂನ್‌ 14ಕ್ಕೆ ಬಿಡುಗಡೆಗೊಳ್ಳಲಿದೆ ವೋಲ್ವೋ C40 ರೀಚಾರ್ಜ್‌ ಎಲೆಕ್ಟ್ರಿಕ್ SUV : ಒಮ್ಮೆ ಚಾರ್ಜ್ ಮಾಡಿದ್ರೆ 341 KM ಮೈಲೇಜ್ !

Volvo C40: ಜೂನ್ 14 ರಂದು ವೋಲ್ವೋ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ವೋಲ್ವೋ C40 (Volvo electric car launch) ಎಂಬ ರೀಚಾರ್ಜ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ.

ಈ ಕಾರನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಸರಿ ಸುಮಾರು 371 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ವೋಲ್ವೋ C40 ಕಾರ್ ಬೆಲೆ ಬರೋಬ್ಬರಿ 60 ಲಕ್ಷ ರೂ. (ದೆಹಲಿ, ಎಕ್ಸ್ ಶೋ ರೂಂ).

ವೋಲ್ವೋ ಕಂಪನಿಯ ಇದು ದೇಶದ ಎರಡನೇ ಎಲೆಕ್ಟ್ರಿಕ್ ಕಾರು (Electric Car). ಈ ಮೊದಲು ಜುಲೈ 2022 ರಲ್ಲಿ ರೂ 56.90 ಲಕ್ಷದ ಆರಂಭಿಕ ಬೆಲೆಯ ವೋಲ್ವೋ XC40 ರೀಚಾರ್ಜ್ EV ಕಾರನ್ನು ಬಿಡುಗಡೆ ಮಾಡಿತ್ತು.

ಇದನ್ನು ಓದಿ: ಗೂಗಲ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡೋದು ಹೇಗೆ? ಯಾವೆಲ್ಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಗೆ ಈ ಸೇವೆ ಲಭ್ಯ?

ವೋಲ್ವೋ C40 ರೀಚಾರ್ಜ್ ಇವಿ ಕಾರನ್ನು ಕಂಪನಿಯು ಪ್ರಸ್ತುತ ಬೆಂಗಳೂರಿನ (Bengaluru) ಬಳಿಯಿರುವ ತನ್ನ ಹೊಸಕೋಟೆ (Hoskote) ಘಟಕದಲ್ಲಿ ಜೋಡಿಸುತ್ತದೆ.

ಇನ್ನು ಮುಂದೆ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರು ಆಡಿ (Audi), ಹ್ಯುಂಡೈನ ಐಯಾನ್‌ 5,ಮರ್ಸಿಡಿಸ್ ಬೆಂಜ್‌ ಮತ್ತು ಬಿಎಂಡಬ್ಲ್ಯೂಗಳೊಂದಿಗೆ (BMW) ಸ್ಪರ್ಧಿಸಲಿದೆ.

ವೋಲ್ವೋ C40 ರೀಚಾರ್ಜ್ ಮತ್ತು ಬ್ಯಾಟರಿ ವಿಶೇಷತೆಗಳು

ವೋಲ್ವೋ C40 ರೀಚಾರ್ಜ್ ಕಾರ್ 235bhp ಪವರ್ ಮತ್ತು 420Nm ಟಾರ್ಕ್ ಅನ್ನು ಸಿಂಗಲ್ ಮೋಟಾರ್ ರೂಪಾಂತರವು ಉತ್ಪಾದಿಸುತ್ತದೆ. EV 78kWh ಲಿಥಿಯಂ-ಐಯಾನ್ ಬ್ಯಾಟರಿ (Battery)

ಪ್ಯಾಕ್‌ನಿಂದ ಈ ಕಾರ್ ಚಾಲಿತವಾಗಿದೆ.ಈ ಕಾರನ್ನು 10 ರಿಂದ 80% ರಷ್ಟು ಚಾರ್ಜ್ ಮಾಡಲು ಒಟ್ಟು 37 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸಂಪೂರ್ಣವಾಗಿ ಈ ಕಾರನ್ನು ಚಾರ್ಜ್ ಮಾಡಬೇಕೆಂದರೆ

11kW ಮಟ್ಟದ 2 ಚಾರ್ಜರ್‌ನೊಂದಿಗೆ 7-8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ಈ ಕಾರ್ ಪೂರ್ಣ ಚಾರ್ಜ್‌ನಲ್ಲಿ ಒಟ್ಟು 371 ಕಿಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.

ವೋಲ್ವೋ C40 ವಿನ್ಯಾಸ :

ವೋಲ್ವೋ C40 ಕಾರ್ ಆಕರ್ಷಕ ಮತ್ತು ಆಧುನಿಕವಾಗಿದೆ. ಈ ಕಾರಿನಲ್ಲಿ ಕಂಪನಿಯ ಸಿಗ್ನೇಚರ್ ಸ್ಟೈಲಿಂಗ್ ಕಂಡುಬರುತ್ತವೆ. ಪ್ರೊಜೆಕ್ಟರ್ ಎಲ್ಇಡಿ(Projector LED) ಹೆಡ್‌ಲ್ಯಾಂಪ್‌ಗಳು,

ರೇಡಿಯೇಟರ್ ಗ್ರಿಲ್ ಸಾಮಾನ್ಯವಾಗಿವೆ.ಈ ಕಾರಿನಲ್ಲಿ ಕ್ಯಾಬಿನ್ ಲೆದರ್ ಸೀಟ್‌ ಇದ್ದು ಉತ್ತಮ (Volvo electric car launch) ವೈಶಿಷ್ಟ್ಯಗಳನ್ನ ಹೊಂದಿವೆ

ವೋಲ್ವೋ C40 ವೈಶಿಷ್ಟ್ಯಗಳು :

ಈ ಕಾರಿನಲ್ಲಿ ಕ್ಯಾಬಿನ್ ಏರ್ ಕ್ಲೀನರ್,ಹರ್ಮನ್ ಕಾರ್ಡನ್ ಪ್ರೀಮಿಯಂ ಸೌಂಡ್ ಸಿಸ್ಟಮ್‌, ಸನ್‌ರೂಫ್, ಪಿಕ್ಸೆಲ್ ಲೈಟ್‌ಗಳು ಮತ್ತು ರಿಮೋಟ್ ಸೇವೆನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಅಷ್ಟೇ ಅಲ್ಲದೆ 12-ಇಂಚಿನ ಇನ್‌ಸ್ಟ್ರುಮೆಂಟ್ ಪ್ಯಾನೆಲ್ ಮತ್ತು 9-ಇಂಚಿನ ಸೆಂಟರ್ ಡಿಸ್‌ಪ್ಲೇ ಕಾರಿನ ಡ್ಯಾಶ್‌ಬೋರ್ಡ್ ನಲ್ಲಿದೆ.ಗೂಗಲ್ ಪ್ಲೇ ಸ್ಟೋರ್‌, ಗೂಗಲ್ ಅಸಿಸ್ಟೆಂಟ್‌ ಮತ್ತು ಗೂಗಲ್

ಮ್ಯಾಪ್ಸ್‌ (Google Map) ನಂತಹ ಸೇವೆಗಳನ್ನು ಫೀಚರ್ ಗಳನ್ನು ಹೊಂದಿದೆ.

ವೋಲ್ವೋ C40 ರೀಚಾರ್ಜ್ ಸುರಕ್ಷತಾ ವೈಶಿಷ್ಟ್ಯಗಳು :

ಈ ಕಾರ್ ಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು 2022 Euro NCAP ಮೂಲಕನೀಡಲಾಗಿದೆ ಅಷ್ಟೇ ಅಲ್ಲದೆ ವೋಲ್ವೋ ಕಂಪನಿಯ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಈ ಕಾರು ಒಂದಾಗಿದೆ.

ಪಾರ್ಕಿಂಗ್ ವೀಕ್ಷಣೆ,ಕ್ರಾಸ್-ಟ್ರಾಫಿಕ್ ಅಲರ್ಟ್,360 ಡಿಗ್ರಿ ರಿವರ್ಸ್ ಪಾರ್ಕಿಂಗ್,ಬ್ಲೈಂಡ್ ಸ್ಪಾಟ್ ಮಾಹಿತಿ ವ್ಯವಸ್ಥೆ (BLIS),ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ತುರ್ತು ಬ್ರೇಕಿಂಗ್

ಮುಂತಾದ ಹಲವಾರು ಸುರಕ್ಷತಾ ವೈಶಿಷ್ಟ್ಯಗಳು ಈ ಕಾರಿನಲ್ಲಿ ಲಭ್ಯವಿದೆ.

ರಶ್ಮಿತಾ ಅನೀಶ್

Exit mobile version