ಈ ಬಾರಿ ನಡೆದ ಚುನಾವಣೆಯ ಮತದಾನದ ಪ್ರಮಾಣವೆಷ್ಟು? ಕಳೆದ 5 ಚುನಾವಣೆಯಲ್ಲಾದ ಪ್ರಮಾಣವೆಷ್ಟು? ಇಲ್ಲಿದೆ ಅಂಕಿ-ಅಂಶ

Karnataka : 2023 ರಾಜ್ಯ ವಿಧಾನ ಸಭಾ ಚುನಾವಣೆಯು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಒಟ್ಟು 58,545 ಮತಗಟ್ಟೆಗಳಲ್ಲಿ (voting rate statistics) ಮತದಾನ ಪ್ರಕ್ರಿಯೆಯು

ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡು ಸಂಜೆ 6 ಗಂಟೆಗೆ ಮುಕ್ತಾಯವಾಯಿತು.ವಿಧಾನಸಭೆಯ ಮತ ಎಣಿಕೆಯು ಮೇ 13ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ.

ಈ ಬಾರಿ ಒಟ್ಟು 5,30,85,566 ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದರು, ಈ ಮತದಾರರ ಪೈಕಿ ಶೇ.72.67 ರಷ್ಟು ಅಂದರೆ ಸರಿ ಸುಮಾರು ಕೇವಲ 3.85 ಕೋಟಿ ಮಂದಿ ಮಾತ್ರ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

2023 ರ ಚುನಾವಣೆಯ ಅಂಕಿ-ಅಂಶಗಳನ್ನು ನೋಡಿದರೇ ಈ ಬಾರಿ ಮತದಾನ ಪ್ರಮಾಣ ಅತೀ ಕಡಿಮೆಯಾಗಿದ್ದು, ಮತದಾರರು ಇನ್ನಷ್ಟು ಜಾಗೃತಿಯಾಗಬೇಕಿದೆ.

ಕಳೆದ 5 ವಿಧಾನ ಸಭಾ ಚುನಾವಣೆಯಲ್ಲಿ ಎಷ್ಟು ಮತದಾನವಾಗಿದೆ? ಈ ಬಾರಿ ಅಂದರೆ 2023ರಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ? ಇಲ್ಲಿದೆ ಮಾಹಿತಿ.

https://youtu.be/si13NZfZStY

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಶೇಕಡಾವಾರು ಮತದಾನ

ಜಿಲ್ಲೆ ಶೇಕಡಾವಾರು ಮತದಾನ

ಬೆಳಗಾವಿ 76.61
ಬಾಗಲಕೋಟೆ 74.63
ವಿಜಯಪುರ 70.78
ಕಲಬುರಗಿ 65.22
ಯಾದಗಿರಿ 66.66
ಬೀದರ್ 71.5
ರಾಯಚೂರು 69.79
ಕೊಪ್ಪಳ 77.51
ಗದಗ 75.21
ಧಾರವಾಡ 73.14
ಉತ್ತರ ಕನ್ನಡ 76.72
ಹಾವೇರಿ 81.17
ವಿಜಯನಗರ 77.62
ಬಳ್ಳಾರಿ 76.23
ಚಿತ್ರದುರ್ಗ 81.2
ದಾವಣಗೆರೆ 78.11
ಶಿವಮೊಗ್ಗ 77.22


ಉಡುಪಿ 78.46
ಚಿಕ್ಕಮಗಳೂರು 77.89
ತುಮಕೂರು 83.49
ಚಿಕ್ಕಬಳ್ಳಾಪುರ 85.83
ಕೋಲಾರ 81.45
ಬೆಂಗಳೂರು ನಗರ 59.98
ಬೆಂಗಳೂರು ಗ್ರಾಮಾಂತರ 83.76
ಬಿಬಿಎಂಪಿ(ಉತ್ತರ) 52.88
ಬಿಬಿಎಂಪಿ(ಕೇಂದ್ರ) 55.4
ಬಿಬಿಎಂಪಿ(ದಕ್ಷಿಣ) 52.8
ರಾಮನಗರ 84.98
ಮಂಡ್ಯ 84.36
ಹಾಸನ 81.7
ದಕ್ಷಿಣ ಕನ್ನಡ 76.15
ಕೊಡಗು 74.74
ಮೈಸೂರು 75.07
ಚಾಮರಾಜನಗರ 77.89

ಒಟ್ಟು 72.67

ಜಿಲ್ಲಾವಾರು ಮಟ್ಟದಲ್ಲಿ ಅತೀ ಗರಿಷ್ಠ ಮತದಾನ ಕಂಡ ಜಿಲ್ಲೆ:
ಚಿಕ್ಕಬಳ್ಳಾಪುರ -ಶೇ.85.83
ಜಿಲ್ಲಾವಾರು ಮಟ್ಟದಲ್ಲಿ ಅತೀ ಕನಿಷ್ಠ ಮತದಾನ ಕಂಡ ಜಿಲ್ಲೆ:
ಬೆಂಗಳೂರು ನಗರ-ಶೇ.59.98

ಕಳೆದ 5 ವರ್ಷದಲ್ಲಿ ರಾಜ್ಯದಲ್ಲಾದ ಮತದಾನ ಪ್ರಮಾಣ

ವರ್ಷ ಮತದಾನ ಮತದಾನ ಅರ್ಹತೆ ಮತದಾನ
ಪ್ರಮಾಣ ಪಡೆದಿದ್ದವರು ಮಾಡಿದವರು

1999 67.7 3,42,84,098 2,31,94,283
2004 65 3,85,86,754 2,50,88,438
2008 65.1 4,01,71.345 2,61,56,630
2013 71.08 4,36,52,789 3,13,53,0
2018 73.04 4,96,54,443 3,64,24,365
2023 72.67 5,30,85,566 3,85,00,000

ಇನ್ನು ಕ್ಷೇತ್ರವಾರು ಮಟ್ಟದಲ್ಲಿ ಗರಿಷ್ಠ ಮತದಾನ ಕಂಡ ವಿಧಾನಸಭಾ ಕ್ಷೇತ್ರ: ಮೇಲುಕೋಟೆ – ಶೇ. 90.93
ಕನಿಷ್ಠ ಮತದಾನ ಕಂಡ ವಿಧಾನಸಭಾ ಕ್ಷೇತ್ರ: ಸಿವಿರಾಮನ್ ನಗರ (ಬೆಂಗಳೂರು) – 47.43%
ಕಳೆದ ಬಾರಿಗಿಂತ ಈ ಬಾರಿ 0.73 ಪ್ರತಿಶತದಷ್ಟು ಮತದಾನ ಕಡಿಮೆಯಾಗಿದೆ.ಏಕೆಂದರೆ ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 73.04ರಷ್ಟು ಮತದಾನವಾಗಿತ್ತು.

ರಶ್ಮಿತಾ ಅನೀಶ್

Exit mobile version