ಪರಿಸ್ಥಿತಿ ತುಂಬಾ ಕಷ್ಟಕರವಾಗಿದ್ದರೂ ಕೂಡ ಭಾರತೀಯರಿಗೆ ಸಹಾಯ ಮಾಡುತ್ತಿದ್ದೇವೆ: ಉಕ್ರೇನಿಯನ್ ರಾಯಭಾರಿ!

ಉಕ್ರೇನಿಯನ್ ಅಧಿಕಾರಿಗಳು ನಾವು ಅತ್ಯಂತ ಕಷ್ಟಕರ ಸ್ಥಿತಿಯಲ್ಲಿದ್ದೇವೆ! ಆದರೂ ಕೂಡ ಭಾರತೀಯರನ್ನು ತಮ್ಮ ನಾಡಿಗೆ ಕಳುಹಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸಂಕೀರ್ಣ ನೆಲದ ಪರಿಸ್ಥಿತಿಯ ಹೊರತಾಗಿಯೂ ಸಿಕ್ಕಿಬಿದ್ದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವಲ್ಲಿ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೇಶದ ರಾಯಭಾರಿ ಸೋಮವಾರ ಪ್ರಕಟಣೆಯಲ್ಲಿ ಹೇಳಿದ್ದಾರೆ. ರಾಯಭಾರಿಯಾದ ಇಗೊರ್ ಪೋಲಿಖಾ ಅವರು ಸ್ವತಃ ಉಕ್ರೇನಿಯನ್ ಭದ್ರತಾ ಪಡೆಗಳನ್ನು ತಲುಪಿದಾಗ ಸಿಕ್ಕಿಬಿದ್ದ ಭಾರತೀಯರಿಗೆ ಸಹಾಯ ಮಾಡಲು ವಿನಂತಿಸಿದ್ದೇವೆ ಎಂದು ಹೇಳಿದರು. ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ ಮತ್ತು ಅದನ್ನು ಹೇಳಲಾರದೆ ಸಂಕಷ್ಟದಲ್ಲಿದ್ದೇವೆ.

ನಮ್ಮ ಸಂಪನ್ಮೂಲಗಳು ನಮಗೆ ಮಾತ್ರ ಸೀಮಿತವಾಗಿವೆ. ನಾವು ದಿನೇ ದಿನೇ ರಷ್ಯಾದ ಆಕ್ರಮಣಕ್ಕೆ ನಲುಗುತ್ತಿದ್ದೇವೆ. ಇನ್ನೂ ನಾವು ಇತರ ದೇಶಗಳ ಜನರನ್ನು ಒಳಗೊಂಡಂತೆ ಜನರಿಗೆ ಸಹಾಯ ಮಾಡಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ರಾಜತಾಂತ್ರಿಕರು, ವಿದೇಶಿಯರು ಮತ್ತು ಉಕ್ರೇನ್ ನಾಗರಿಕರು ಸೇರಿದಂತೆ ಲಕ್ಷಾಂತರ ಜನರು ಉಕ್ರೇನ್‌ನಿಂದ ನಿರ್ಗಮಿಸಲು ಸರತಿ ಸಾಲಿನಲ್ಲಿ ನಿಂತಿರುವುದರಿಂದ ಉಕ್ರೇನ್-ಪೋಲೆಂಡ್ ಗಡಿ ದಾಟುವ ಪರಿಸ್ಥಿತಿಯು ಸವಾಲಿನದ್ದಾಗಿದೆ ಎಂದು ಪೋಲಿಖಾ ಹೇಳಿದರು. ಭಾರತೀಯ ಪ್ರಜೆಗಳ ವಿಷಯದಲ್ಲಿ, ನಾವು ಅವರಿಗೆ ಸಹಾಯ ಮಾಡಲು ನಮ್ಮ ವೈಯಕ್ತಿಕ ಸಂಪರ್ಕಗಳನ್ನು ಬಳಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಭಾರತೀಯರು ಕೂಡ ಸದ್ಯ ಯುದ್ಧದ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕು.

ನಾವು ಯುದ್ಧದಲ್ಲಿದ್ದೇವೆ ಎಂದು ಅವರು ಹೇಳಿದರು. ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಬಹುದೇ ಎಂಬ ಪ್ರಶ್ನೆಗೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತ್ರ ಆ ಭರವಸೆಯನ್ನು ನಿಮಗೆ ನೀಡಬಲ್ಲರು ಎಂದು ಪೋಲಿಖಾ ಹೇಳಿದರು. ಮೂರು ಗಂಟೆಗಳ ನಂತರ ಅಲ್ಲಿ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ, ನಾವು ಎಲ್ಲರಿಗೂ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕಳೆದ ವಾರ ಭಾರತೀಯ ಅಧಿಕಾರಿಗಳ ಪ್ರಕಾರ, ಉಕ್ರೇನ್‌ನಲ್ಲಿ ಸುಮಾರು 16,000 ಭಾರತೀಯ ಪ್ರಜೆಗಳಿದ್ದರು. ರಷ್ಯಾದ ಮಿಲಿಟರಿ ಆಕ್ರಮಣದ ನಂತರ, ಕಳೆದ ಕೆಲವು ದಿನಗಳಲ್ಲಿ 2,000 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಭಾನುವಾರ ಹೇಳಿದ್ದಾರೆ.

Exit mobile version