ಈ ವಿಚಿತ್ರ ಖಾದ್ಯಗಳ ಬಗ್ಗೆ ಕೇಳಿದರೆ, ನೀವು ಖಂಡಿತ ಅಚ್ಚರಿ ಪಡ್ತೀರಿ!

food

Food : ರುಚಿಯಾದ ಊಟ(Food) ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವೊಂದು ಆಹಾರ ಪದಾರ್ಥಗಳನ್ನ ನೆನಪಿಸಿಕೊಂಡ್ರೆ ಸಾಕು ಬಾಯಲ್ಲಿ ನೀರೂರುತ್ತದೆ.

ಆಹಾರಗಳಲ್ಲಿ ಕೋಟ್ಯಾನು ಕೋಟಿ ಬಗೆಗಳಿವೆ. ಅದು ನಾನ್ ವೆಜ್(Non Veg) ಆಗಿರಬಹುದು ವೆಜ್ ಆಗಿರಬಹುದು.

ನೋಡಿದ ತಕ್ಷಣ ತಿನ್ನಬೇಕು ಅಂತ ಅನ್ನಿಸಬೇಕು. ಆದರೆ ಪ್ರಪಂಚದಲ್ಲಿ ತುಂಬಾನೆ ವಿಚಿತ್ರ ಅಸಹ್ಯ ಎನಿಸುವಂತಹ ಹಲವಾರು ಆಹಾರಗಳಿವೆ.

ಒಂದಂತೂ ನಿಜ, ನಮ್ಮ ಭಾರತದ ಆಹಾರ ಪದ್ಧತಿಯೇ ಯಾವಾಗಲೂ ಬೆಸ್ಟ್. ಚೀನಾ(China) ಮತ್ತು ಪ್ರಪಂಚದ ಇತರೇ ರಾಷ್ಟ್ರಗಳಲ್ಲಿನ ಆಹಾರ ಪದ್ಧತಿ ಅಸಹ್ಯ ಅನಿಸಬಹುದು. ಪ್ರಪಂಚದಲ್ಲಿರುವ ಇಂತಹ ಕೆಲವು ವಿಚಿತ್ರ ಅಡುಗೆಗಳ ಬಗ್ಗೆ ತಿಳಿಯೋಣ.


ಸೊಮ್ನಿಯೋಸಿಡೆ – ಐಲ್ಯಾಂಡ್ : ಸೊಮ್ನಿಯೋಸಿಡೆ ಎನ್ನುವ ಖಾದ್ಯವನ್ನು ಶಾರ್ಕ್ನ ಕೊಳೆಯುತ್ತಿರುವ ಶವದಿಂದ ಮಾಡಲಾಗುತ್ತಂತೆ! ಕೇಳಲಿಕ್ಕೆ ಇಷ್ಟು ಅಸಹ್ಯವಾಗಿದ್ದರೆ,

ಇದನ್ನ ಜನ ಹೇಗೆ ತಿನ್ನುತ್ತಾರೆ ಅನ್ನೋದು ಇನ್ನೊಂದು ಅಚ್ಚರಿ. ಆದರೆ ಇದನ್ನ ಗ್ರೀನ್ ಲ್ಯಾಂಡ್ ನಲ್ಲಿ ಹೆಚ್ಚಾಗಿ ತಿನ್ನಲಾಗುತ್ತದೆ.

ಇದನ್ನೂ ಓದಿ : https://vijayatimes.com/milana-blockbuster-cinema/

ಪ್ರಪಂಚದ ವಿಚಿತ್ರ ಆಹಾರದಲ್ಲಿ ಇದು ಒಂದು. ಶಾರ್ಕ್ ಅನ್ನು ಕೊಂದು ಹಳ್ಳದಲ್ಲಿ ಹೂತಿಡಲಾಗುತ್ತೆ, ಬಳಿಕ ಈ ಮಾಂಸವನ್ನು ಕತ್ತರಿಸಿ ಬಡಿಸುವುದಕ್ಕೂ ಮೊದಲು ನೇತುಹಾಕಲಾಗುತ್ತದೆ. ಇದಾದ ಬಳಿಕ ಬಡಿಸಲಾಗುತ್ತದೆ!


ಶಿಯೋಕಾರಾ – ಜಪಾನ್ : ಶಿಯೋಕಾರಾ, ಜಪಾನ್ ನಲ್ಲಿ ತಯಾರಿಸುವ ಈ ಖಾದ್ಯ ನಿಜಕ್ಕೂ ಅಸಹ್ಯ ಅನ್ನಿಸುತ್ತದೆ. ಬಗೆ ಬಗೆಯ ಸಮುದ್ರ ಜೀವಿಗಳ ಮಾಂಸಗಳ ತುಂಡುಗಳಿಂದ ಈ ಖಾದ್ಯ ತಯಾರಾಗುತ್ತದೆ.

ನಿಜ ಹೇಳೋದಾದ್ರೆ ಇದನ್ನ ನೋಡುವುದಕ್ಕೆ ವಾಕರಿಕೆ ಬರುತ್ತದೆ.

ಇನ್ನೂ ಇದನ್ನ ಹಸಿಯಾಗಿಯೇ ತಿನ್ನುತ್ತಾರೆ ಎನ್ನುವುದನ್ನು ಕಲ್ಪನೆ ಮಾಡುವುದೂ ಸಾಧ್ಯವಿಲ್ಲ.

ಆದರೆ ಈ ಮಿಶ್ರಣವನ್ನ ಹಸಿಯಾಗಿಯೇ ತಿನ್ನುತ್ತಾರೆ. ಹೌದು, ಕೇಳುವುದಕ್ಕೆ ಇಷ್ಟು ಅಸಹ್ಯ ಅನ್ನಿಸುತ್ತಿದೆ. ಆದರೆ ಇದು ನಿಜವೇ!


ಸೆಂಚುರಿ ಎಗ್(100 ವರ್ಷಗಳ ಹಳೆಯ ಮೊಟ್ಟೆ ) – ಚೈನಾ : ಈ ಮೊಟ್ಟೆಯೇನು 100 ವರ್ಷಗಳ ಹಿಂದೆ ಬೇಯಿಸಿಟ್ಟಿದ್ದಲ್ಲ, ಆದರೆ ತಿಂಗಳಷ್ಟಂತೂ ಹಳೆಯದ್ದೇ.

ಹೇಳಿ ಕೇಳಿ ಚೈನಾ ಫುಡ್ ಅಂದ್ರೆ ನಮಗೆ ಅದು ಅಸಹ್ಯ ಅನ್ನಿಸದೇ ಇರೋದಿಲ್ಲ ಅಲ್ವಾ. ಇನ್ನು, ಮೊಟ್ಟೆ ಯಾರಿಗೆ ತಾನೆ ಇಷ್ಟ ಇರಲ್ಲ. ಹಾಗಂತ ಯಾರಾದರೂ ಕೊಳೆತ ಮೊಟ್ಟೆ ತಿನ್ನೋದಕ್ಕೆ ಇಷ್ಟ ಪಡುತ್ತಾರಾ?

ಇದನ್ನೂ ಓದಿ : https://vijayatimes.com/elephants-to-look-out-cheetahs/

ಹೌದು, ಚೈನಾದಲ್ಲಿ ಮೊಟ್ಟೆಯನ್ನು ಕೊಳೆಸಿ ಹಸಿರು ಬಣ್ಣಕ್ಕೆ ತಿರುಗಿದ ಮೇಲೆ ಅದನ್ನ ತಿನ್ನಲಾಗುತ್ತದೆ. ಇದು ಅಸಹ್ಯ ಎನಿಸಿದ್ರೂ ನಿಜ. ಕೆಲವು ತಿಂಗಳುಗಳವರೆಗೆ ಜೇಡಿಮಣ್ಣು, ಬೂದಿ ಮತ್ತು ಕ್ವಿಕ್‌ಲೈಮ್ ಮಿಶ್ರಣದಲ್ಲಿ ಮೊಟ್ಟೆಯನ್ನ ಸಂರಕ್ಷಿಸಲ್ಪಟ್ಟ ನಂತರ,

ಹಳದಿ ಲೋಳೆಯು ಕಡು ಹಸಿರು ಅಥವಾ ಕಪ್ಪು ಮತ್ತು ತೆಳ್ಳಗೆ ತಿರುಗುತ್ತದೆ, ಬಿಳಿ ಬಣ್ಣವು ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನ ಅಲ್ಲಿನ ಜನ ಬಹಳ ಇಷ್ಟ ಪಟ್ಟು ತಿನ್ನುತ್ತಾರಂತೆ!
Exit mobile version