ಹಸಿರಿನಿಂದ ಕಂಗೊಳಿಸುವ ಮಲೆನಾಡು `ಬಯಲು’ಸೀಮೆಯಾಗುವತ್ತಾ ಮುಖಮಾಡುತ್ತಿರುವುದು ಎಚ್ಚರಿಕೆಯ ಮುನ್ಸೂಚನೆ!

Western Ghats

ಮಳೆ- ಮಲೆ(ಬೆಟ್ಟ), ಗಿಡಮರಗಳು, ತೊರೆ-ನದಿಗಳು, ಹಸಿರು ಗದ್ದೆಗಳು ಸೇರಿದ ನಾಡು ಮಲೆನಾಡು! ಅವುಗಳನ್ನು ದಿನೇ ದಿನೇ ಕಳೆದುಕೊಳ್ಳುತ್ತಿರುವ ಮಲೆನಾಡು(Western Ghats) ‘ಬಯಲು’ ಸೀಮೆಯಾಗುವತ್ತಾ ದಾಪುಗಾಲಾಕುತ್ತಿರುವುದು ಬೆಳವಣಿಗೆ ಯಾರಿಗೂ ಕೂಡ ಒಳಿತ್ತಲ್ಲ!

ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಎಲ್ಲಾ ಭಾಗಕ್ಕೂ ಸೇರಿದಂತೆ ಒಟ್ಟು ಭೂಭಾಗದಲ್ಲಿ 33% ಅರಣ್ಯ ಪ್ರದೇಶ, ಪರಿಸರದ ಸಮತೋಲನಕ್ಕೆ ಅತ್ಯಗತ್ಯ ಎಂದು ಹೇಳಿದರೆ, ಅದೇ ಗುಡ್ಡಗಾಡು ಪ್ರದೇಶ/ ಘಟ್ಟಗಳಿಂದಾವೃತವಾದ ಪ್ರದೇಶಗಳಲ್ಲಿ 66% ಅರಣ್ಯ ಇರಬೇಕೆಂದು ಹೇಳಿದೆ. ಮಲೆನಾಡ ಭಾಗಗಳಲ್ಲಿ ಇಷ್ಟು ದಿನ ಇದ್ದ ಅರಣ್ಯ ಸಮತೋಲನದಿಂದ ಕೂಡಿದ್ದ ತೋಟಗಳ ಲೆಕ್ಕದಲ್ಲಿ ಬಹುತೇಕ 66% ಅರಣ್ಯ ಇತ್ತೆನ್ನಬಹುದು.

ಆದರೆ ಇತ್ತೀಚಿನ ಆ ಸಮತೋಲನ ತಪ್ಪುತ್ತಿದೆ. ಪ್ರವಾಹ, ಭೂಕುಸಿತ, ಗುಡ್ಡಕುಸಿತದಂತ ಪ್ರಾಕೃತಿಕ ವಿಕೋಪಗಳ ಪರಿಣಾಮ ಬಯಲು ಸೀಮೆಗಳಿಗೆ ಹೋಲಿಸಿದರೆ ಮಲೆನಾಡು, ಘಟ್ಟ, ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿಯೇ ತೀವ್ರವಾಗಿದ್ದನ್ನು ಕಳೆದೆರಡು ವರ್ಷಗಳಲ್ಲಿ ನಾವು ಕಣ್ಣಾರೆ ಕಂಡಿದ್ದೇವೆ. ಹಾಗಾಗಿ ರಾಷ್ಟ್ರೀಯ ಅರಣ್ಯ ನೀತಿಯ ಈ ಕನಿಷ್ಠ ಅರಣ್ಯ ಪ್ರಮಾಣದ ನಿಗದಿಯನ್ನು ನಿರ್ಲಕ್ಷಿಸುವಂತಿಲ್ಲ.

Exit mobile version