ಕಣ್ಣು ಮತ್ತು ಬಾಯಿ ಒಣಗಿ ಹೋಗುತ್ತದೆ, ಅತ್ತರೂ ಕಣ್ಣೀರು ಬರುವುದಿಲ್ಲ ; ಇದು ಯಾವ ಖಾಯಿಲೆ ಇಲ್ಲಿದೆ ಮಾಹಿತಿ

Health : ಸ್ಜೋಗ್ರೆನ್ಸ್(Sjogrens) ಎಂಬುವುದು ಅಟೋ ಇಮ್ಯೂನ್ ಕಾಯಿಲೆಯಾಗಿದೆ. ಈ ಕಾಯಿಲೆ(Disease) ಬಂದಾಗ ಕಣ್ಣುಗಳು ಒಣಗುವುದು, ಬಾಯಿ ಒಣಗುವುದು ಈ ರೀತಿಯ ಲಕ್ಷಣಗಳು ಕಂಡು ಬರುವುದು. ಇದು ಲೂಪಸ್, ರುಮಾಟೈಡ್‌ ಸಂಧಿವಾತ, ಪಿತ್ತರಸದ ಕೋಲಾಂಜೈಟಿಸ್ ಈ ರೀತಿಯ ಸಮಸ್ಯೆಗಳ ಜೊತೆ ಸಂಬಂಧ ಹೊಂದಿದೆ.

ಈ ರೀತಿಯ ಸಮಸ್ಯೆ ವಿಶ್ವದಲ್ಲಿ 0.1 ರಿಂದ ಶೇ.4ರಷ್ಟು ಜನರಲ್ಲಿ ಕಂಡು ಬರುವುದು. ಸ್ಜೋಗ್ರೆನ್ಸ್ ಸಿಂಡ್ರೋಮ್‌(Sjogrens Syndrome) ಎಂಬುವುದು ಅಟೋ ಇಮ್ಯೂನ್ ಕಾಯಿಲೆಯಾಗಿದ್ದು, ತಮ್ಮ ದೇಹದ ರೋಗ ನಿರೋಧಕಗಳು ತಪ್ಪಾಗಿ ನಮ್ಮ ಜೀವ ಕಣಗಳು ಹಾಗೂ ನರಗಳಿಗೆ ಹಾನಿಯುಂಟಾಗುವುದು.

ಆದರೆ ಈ ರೀತಿ ಆಗಲು ಕಾರಣವೇನು ಎಂಬುವುದು ತಿಳಿದು ಬಂದಿಲ್ಲ, ಬ್ಯಾಕ್ಟಿರಿಯಾ ಅಥವಾ ವೈರಸ್‌ ಸೋಂಕಿನಿಂದ ಈ ರೀತಿ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ದೇಹದ ಪ್ರತಿಕಾಯಗಳು ಮೊದಲಿಗೆ ಎಂಜಲು ಹಾಗೂ ಕಣ್ಣೀರಿನ ಗ್ರಂಥಿಗಳನ್ನು ಬಾದಿಸುತ್ತವೆ, ಇದರಿಂದಾಗಿ ಎಂಜಲು ಕಡಿಮೆಯಾಗುವುದು.

ಇದನ್ನೂ ಓದಿ : https://vijayatimes.com/nithish-kumar-jdu-gets-shock/

ಕಣ್ಣಿನಲ್ಲಿ ನೀರು ಕಡಿಮೆಯಾಗುವುದು. ಇದು ದೇಹದ ಇತರ ಭಾಗಗಳಾದ ಕಿಡ್ನಿ, ಲಿವರ್‌, ಶ್ವಾಸಕೋಶ, ಮೂಳೆಗಳು, ಥೈರಾಯ್ಡ್‌ ಗ್ರಂಥ, ನರಗಳಿಗೆ ಹಾನಿಯುಂಟು ಮಾಡುವುದು. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ಸ್ಜೋಗ್ರೆನ್ಸ್ ಸಿಂಡ್ರೋಮ್‌ ಅನ್ನು ವೈದ್ಯರು ಪ್ರೈಮರಿ ಹಾಗೂ ಸೆಕೆಂಡರಿ ಸ್ಜೋಗ್ರೆನ್ಸ್ ಸಿಂಡ್ರೋಮ್‌ ಆಗಿ ವಿಂಗಡಿಸಿದ್ದಾರೆ. ಪ್ರೈಮರಿ ಸ್ಜೋಗ್ರೆನ್ಸ್ ಸಿಂಡ್ರೋಮ್‌ನಲ್ಲಿ ಸಂಧಿವಾತ ಇರಲ್ಲ, ಸೆಕೆಂಡರಿ ಸ್ಜೋಗ್ರೆನ್ಸ್ ಸಿಂಡ್ರೋಮ್‌ನಲ್ಲಿ ಸಂಧಿವಾತ ಉಂಟಾಗುವುದು.
ಈ ಸಮಸ್ಯೆಯ ಲಕ್ಷಣಗಳು ಇತರ ಕಾಯಿಲೆಯ ಲಕ್ಷಣಗಳಂತೆ ಕಂಡು ಬರುವುದರಿಂದ ಗುರುತಿಸುವುದು ಕಷ್ಟವಾಗಬಹುದು.

ಈ ಕೆಳಗಿನ ಪರೀಕ್ಷೆ ಮಾಡಿಸಿದರೆ ಪತ್ತೆ ಹಚ್ಚಬಹುದು. ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ, ಎಂಜಲು ಪರೀಕ್ಷೆ. ಪ್ರಾರಂಭದ ಹಂತದಲ್ಲಿ ಆದರೆ ಔ‍ಷಧಗಳಿಂದ ಗುಣಪಡಿಸಬಹುದು. ಔಷಧಗಳಿಂದ ಎಂಜಲು ಉತ್ಪತ್ತಿ ಹೆಚ್ಚಿಸಬಹುದು, ಕಣ್ಣುಗಳು ಒಣಗುವುದನ್ನು ತಡೆಗಟ್ಟಬಹುದು. ಆದರೆ ಸಮಸ್ಯೆ ಸ್ವಲ್ಪ ಅಧಿಕವಾಗಿದ್ದರೆ ಚಿಕ್ಕದಾದ ಸರ್ಜರಿ ಮಾಡಿ ಸರಿಪಡಿಸಲಾಗುವುದು.

Exit mobile version