ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.

ಮೆಟಾ ಕಂಪನಿಯು (Meta Company) ವಾಟ್ಸಾಪ್‌ ಬಳಕೆದಾರರಿಗೆ ಶಾಕ್‌ ನೀಡಿದ್ದು, 18 ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್‌ ವರ್ಕ್ (WhatsApp stop on Smartphones)

ಆಗುವುದಿಲ್ಲ ಎಂದಿದೆ. ಈ ಕುರಿತ (WhatsApp stop on Smartphones) ಸಂಪೂರ್ಣ ವರದಿ ಇಲ್ಲಿದೆ.

ಜನಪ್ರಿಯವದ ಬಹುಬೇಡಿಕೆಯ ಪರ್ಸನಲ್ ಮೆಸೇಜಿಂಗ್ ಅಪ್ಲಿಕೇಶನ್‌ (Personal Messaging Application) ಆಗಿರುವ ವಾಟ್ಸಾಪ್‌ ನಿರಂತರವಾಗಿ ಐಓಎಸ್‌, ಆಂಡ್ರಾಯ್ಡ್‌ಗಳಿಗೆ ಹೊಸ ಹೊಸ

ಫೀಚರ್‌ಗಳನ್ನು ಜಾರಿಗೊಳಿಸುವಲ್ಲಿ ನಿರತವಾಗಿದೆ. ಅದೇ ರೀತಿ ಹಲವು ಹೊಸ ಫೀಚರ್‌ಗಳ ಬಳಕೆಗೆ ಅಡ್ಡಿಯಾಗುವ ಓಎಸ್‌ ವರ್ಷನ್‌ಗಳಲ್ಲಿ (OS Version) ತನ್ನ ಸಪೋರ್ಟ್‌ ಅನ್ನು ಸ್ಥಗಿತ ಮಾಡುತ್ತಿದೆ.

ಅದಕ್ಕೆ ಪೂರಕವಾಗಿ ಈಗ ಹೊಸ ಅಪ್‌ಡೇಟ್‌ ಅನ್ನು ವಾಟ್ಸಾಪ್‌ ನೀಡಿದ್ದು, ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವ ವಿಚಾರವನ್ನು ಬಹಿರಂಗಪಡಿಸಿದೆ.

ಇನ್ನುಮುಂದೆ ಕೇವಲ ಆಂಡ್ರಾಯ್ಡ್‌ (Android) 5.0 ಹಾಗೂ ಅದಕ್ಕಿಂತ ಮೇಲ್ಪಟ್ಟ ಓಎಸ್‌ ಆಧಾರಿತ ಸ್ಮಾರ್ಟ್‌ಗಳಲ್ಲಿ ಮಾತ್ರ ವರ್ಕ್‌ ಆಗುವ ಕುರಿತು ಮಾಹಿತಿ ನೀಡಿದ್ದು, ಆಂಡ್ರಾಯ್ಡ್‌ 4.0 ಹಾಗೂ

ಅದಕ್ಕಿಂತ ಕೆಳಹಂತದ ಓಎಸ್‌ ಕಾರ್ಯಾಚರಣೆಯಲ್ಲಿನ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ವಾಟ್ಸಾಪ್‌ ಸಪೋರ್ಟ್‌ ಆಗುವುದನ್ನು ಸ್ಥಗಿತಗೊಳಿಸಲಾಗುತ್ತದೆ.

ವಾಟ್ಸಾಪ್‌ ವರ್ಕ್‌ ಆಗಲಿರುವ ಡಿವೈಸ್‌ಗಳ ಅರ್ಹತೆ:
4.1 ಮತ್ತು ಅದಕ್ಕಿಂತ ಮೇಲ್ಪಟ್ಟ ಓಎಸ್‌ ಆಧಾರಿತ ಡಿವೈಸ್‌ಗಳು.
ಐಓಎಸ್ (IOS) 12 ಹಾಗೂ ಮೇಲ್ಪಟ್ಟ ಓಎಸ್‌ ಐಫೋನ್‌ಗಳು.
KaiOS 2.5.0 ಮತ್ತು ಅದಕ್ಕಿಂತ ಮೇಲ್ಪಟ್ಟ ಓಎಸ್‌ ಡಿವೈಸ್‌ಗಳು (OS Device), ಜಿಯೋಫೋನ್‌ ಮತ್ತು ಜಿಯೋಫೋನ್‌ 2.

ವಾಟ್ಸಾಪ್‌ ಶೀಘ್ರದಲ್ಲಿಯೇ ಯಾವೆಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆಯೋ ಆ ಎಲ್ಲ ಡಿವೈಸ್‌ಗಳಿಗೆ ನೋಟಿಫಿಕೇಶನ್‌ ಕಳುಹಿಸಲಿದೆ.

ಅಲ್ಲದೇ ನಿಮ್ಮ ಡಿವೈಸ್‌ ಅಪ್‌ಗ್ರೇಡ್‌ (Device Upgrade) ಮಾಡಲು ಸಹ ಸೂಚಿಸುತ್ತದೆ.

ಯಾವೆಲ್ಲ ಡಿವೈಸ್‌ಗಳಲ್ಲಿ ವಾಟ್ಸಾಪ್‌ ಸಪೋರ್ಟ್‌ ಸ್ಥಗಿತಗೊಳ್ಳಲಿದೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 2
ಹೆಚ್‌ಟಿಸಿ ಒನ್.
ನೆಕ್ಸಸ್ 7 ( ಆಂಡ್ರಾಯ್ಸ್‌ 4.2 ಗೆ ಅಪ್‌ಗ್ರೇಡ್‌ ಮಾಡಬಹುದು)
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌2
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೆಕ್ಸಸ್

ಸೋನಿ ಎಕ್ಸ್‌ಪೀರಿಯಾ ಜಡ್
ಎಲ್‌ಜಿ ಆಪ್ಟಿಮಸ್ ಜಿ ಪ್ರೊ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 10.1
ಏಸಸ್ Eee ಪ್ಯಾಡ್ ಟ್ರಾನ್ಸ್‌ಫಾರ್ಮರ್
ಏಸರ್ ಐಕೋನಿಯಾ ಟ್ಯಾಬ್ A5003

ಹೆಚ್‌ಟಿಸಿ ಸೆನ್ಸೇಷನ್
ಮೊಟೊರೋಲಾ ಕ್ಸೂಮ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್
ಮೊಟೊರೊಲಾ ಡ್ರಾಯ್ಡ್‌ ರೇಜರ್
ಸೋನಿ ಎಕ್ಸ್‌ಪೀರಿಯಾ ಎಸ್‌2
ಹೆಚ್‌ಟಿಸಿ ಡಿಸೈರ್ ಹೆಚ್‌ಡಿ
ಎಲ್‌ಜಿ ಆಪ್ಟಿಮಸ್ 2x

ಇದನ್ನು ಒದಿ: ಕರ್ನಾಟಕ ಬಂದ್: ಶುಕ್ರವಾರ ಕರ್ನಾಟಕ ಬಂದ್ಗೆ ಬೆಂಬಲ ಕೊಟ್ಟ ಸಂಘಟನೆಗಳು ಯಾವುವು?

ಭವ್ಯಶ್ರೀ ಆರ್.ಜೆ

Exit mobile version