ಇನ್ನು ಮುಂದೆ ವಾಟ್ಸ್ಆ್ಯಪ್ ವೆಬ್ ನಲ್ಲಿ ಮೊಬೈಲ್ ನಂಬರ್ ಮೂಲಕ ಕೂಡ ಲಾಗಿನ್ ಆಗಬಹುದು

Tech News : ವಾಟ್ಸ್ಆ್ಯಪ್ ಆಂಡ್ರಾಯ್ಡ್ (Android) ಮತ್ತು ಐಒಎಸ್(WhatsApp web mobile number) ಬಳಕೆದಾರರಿಗೆ ಈ ಹಿಂದೆ ಹೆಚ್ಚು ನೂತನ ಆಯ್ಕೆಗಳನ್ನು ಬಿಡುಗಡೆ ಮಾಡುತ್ತಿತ್ತು.

ಆದರೆ ಇದೀಗ ಹೊಸ ಹೊಸ ಫೀಚರ್ಸ್ ಗಳನ್ನು ವಾಟ್ಸ್ಆ್ಯಪ್ ವೆಬ್ (WhatsApp Web) ಬಳಕೆದಾರರಿಗೆ ಕೂಡ ನೀಡುತ್ತಿದೆ. ಇದಕ್ಕೆ ಮುಖ್ಯ ಕಾರಣ ವಾಟ್ಸ್ಆ್ಯಪ್ ವೆಬ್ ಬಳಕೆದಾರರ ಸಂಖ್ಯೆ

ಗಣನೀಯವಾಗಿ ಏರಿಕೆ (WhatsApp web mobile number) ಆಗುತ್ತಿರುವುದು.

ಮೆಟಾ ಒಡೆತನದ ಪ್ರಸಿದ್ಧ ಮೆಸೀಜಿಂಗ್ ಅಪ್ಲಿಕೇಷನ್ ಇದನ್ನು ಮನಗಂಡು ಇದೀಗ ಹೊಸ ಆಯ್ಕೆಯೊಂದನ್ನು ತರಲು ಸಜ್ಜಾಗಿದೆ. ಈ ಕುರಿತ ಫೀಚರ್ ಅನ್ನು ವಾಟ್ಸ್ಆ್ಯಪ್ ತನ್ನ ಬೀಟಾ ಚಾನಲ್‌ನಲ್ಲಿ

ರಿಲೀಸ್ ಮಾಡಿದೆ. ಇದರ ಮೂಲಕ ವಾಟ್ಸ್ಆ್ಯಪ್ ವೆಬ್ ನಲ್ಲಿ ಇನ್ಮುಂದೆ ಬಳಕೆದಾರರು ಮೊಬೈಲ್ ನಂಬರ್ (Mobile Number) ನಮೂದಿಸುವ ಮೂಲಕ ಲಾಗಿನ್ ಆಗಬಹುದಾಗಿದೆ.

ಇದನ್ನೂ ಓದಿ : ಟ್ವಿಟ್ಟರ್ ಬಗ್ಗೆ ಟ್ವಿಟ್ಟರ್​ನಲ್ಲಿಯೇ ಆಕ್ರೋಶ, ಸಮಸ್ಯೆಗಳ ಆಗರವಾದ ಟ್ವಿಟ್ಟರ್ : ಮೆಟಾದಿಂದ ಟ್ವಿಟ್ಟರ್ ಮಾದರಿಯ ಥ್ರೆಡ್ಸ್‌ ಆ್ಯಪ್ ಬಿಡುಗಡೆ

ವಾಟ್ಸ್ಆ್ಯಪ್ ವೆಬ್ ನಲ್ಲಿ ಈವರೆಗೆ ಲಾಗಿನ್ ಆಗಬೇಕು ಎಂದರೆ ಮೊದಲು ನೀವು ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಬೇಕಿತ್ತು. ಆದರೆ, ಕ್ಯಾಮೆರಾ (Camera) ಇದಕ್ಕೆ ಅವಶ್ಯಕವಾಗಿತ್ತು ಆದರೆ

ಯಾರ ಮೊಬೈಲ್ ನಲ್ಲಿ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಅವರಿಗೆ ಲಾಗಿನ್ ಆಗಲು ಬಹಳ ಕಷ್ಟ ಆಗುತ್ತಿತ್ತು . ಅನೇಕರು ಈ ಬಗ್ಗೆ ದೂರು ಕೂಡ ನೀಡಿದ್ದರು. ಸದ್ಯ ಕ್ಯೂಆರ್ ಕೋಡ್ ಅಥವಾ

ಮೊಬೈಲ್ ನಂಬರ್ ಅನ್ನು ಹಾಕುವ ಮೂಲಕ ಲಾಗಿನ್ ಮಾಡಲು ಈ ಸಮಸ್ಯೆಗಳನ್ನು ಸರಿಪಡಿಸಲು ಅವಕಾಶ ನೀಡುತ್ತಿದೆ.

ಆಂಡ್ರಾಯ್ಡ್ ನ ಕೆಲ ಬೀಟಾ ಪರೀಕ್ಷಕರಿಗೆ WABetaInfo ಪ್ರಕಾರ ಈ ಫೀಚರ್ ಲಭ್ಯವಾಗುತ್ತಿದೆ.ಈ ಆಯ್ಕೆ ವರದಿಯ ಪ್ರಕಾರ ‘ 2.23.14.18’ ಆವೃತ್ತಿ ಅಪ್ಡೇಟ್ ನಲ್ಲಿ (Update) ಸಿಗಲಿದೆಯಂತೆ. ಆದರೆ

ಈ ಫೀಚರ್(Feature) ಈಗಾಗಲೇ ಕೆಲ ಅದೃಷ್ಟಶಾಲಿ ಬಳಕೆದಾರರಿಗೆ ಲಭ್ಯವಾಗುತ್ತಿದೆ. ನಿಮಗೆ ಸಹ ಈ ಆಯ್ಕೆ ಲಭ್ಯವಿದೆಯೇ ಎಂದು ನೋಡಬೇಕಾದರೆ ಗೂಗಲ್ ಪ್ಲೇ ಸ್ಟೋರ್ ಗೆ (Google play store)

ತೆರಳಿ ಅಲ್ಲಿ ವಾಟ್ಸ್ಆ್ಯಪ್ ಅಪ್ಡೇಟ್ ಮಾಡುವ ಮೂಲಕ ಪರಿಶೀಲಿಸಬಹುದು.

ವಾಟ್ಸ್ಆ್ಯಪ್ ವೆಬ್: ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಹೇಗೆ?:

ರಶ್ಮಿತಾ ಅನೀಶ್

Exit mobile version