ಆಗುಂಬೆ “ಕಾಳಿಂಗ ಸರ್ಪಗಳ ರಾಜಧಾನಿ” ಎಂದು ಕರೆಯಲ್ಪಡಲು ಮುಖ್ಯ ಕಾರಣ ಇಲ್ಲಿದೆ!

ದಕ್ಷಿಣ ಭಾರತದ(South India) ಚಿರಾಪುಂಜಿ ಎಂದೇ ಕರೆಯಲ್ಪಡುವ, ಮಳೆಗಾಲದಲ್ಲಿ ಹೆಚ್ಚೆಚ್ಚು ಪ್ರವಾಸಿಗರನ್ನು ಅದರಲ್ಲೂ ಮುಖ್ಯವಾಗಿ ಟ್ರೆಕ್ಕಿಂಗ್(Trekking) ಪ್ರೇಮಿಗಳನ್ನು ಕೈಬೀಸಿ ಕರೆಯುವ ಆಗುಂಬೆ(Agumbe) ಅರಣ್ಯ ಪ್ರದೇಶವನ್ನು ಪ್ರವೇಶಿಸಲು ಅಘೋಷಿತ ನಿಷೇಧ ಹೇರಲಾಗಿದೆ. ಇದಕ್ಕೆ ಮುಖ್ಯವಾದ ಕಾರಣ ಆಗುಂಬೆ ಅರಣ್ಯ ಪ್ರದೇಶ ಕಾಳಿಂಗ ಸರ್ಪಗಳ(King Cobra) ನೆಲೆವೀಡಾಗಿರುವುದು ಹಾಗೂ ಕಾಡ್ಗಿಚ್ಚಿನ ಭಯ.


ಹೌದು, ಆಗುಂಬೆಯು ಅತಿ ಉದ್ದವಾದ ಮತ್ತು ವಿಷಪೂರಿತವಾದ ಕಾಳಿಂಗ ಸರ್ಪಗಳ ತವರಾಗಿದೆ. ಈ ಸರ್ಪಗಳೇ ಇಲ್ಲಿನ ಹೆಗ್ಗುರುತು. ಹೆಸರುವಾಸಿ ಉರಗತಜ್ಞ ರೊಮುಲುಸ್ ವಿಟೆಕರ್ ಆಗುಂಬೆಯನ್ನು “ಕಾಳಿಂಗ ಸರ್ಪಗಳ ರಾಜಧಾನಿ” ಎಂದು ವರ್ಣಿಸಿದ್ದಾರೆ. ಆದರೆ ಇತ್ತೀಚಿಗೆ ಪಶ್ಚಿಮ ಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಉರಗ ತಜ್ಞ ಗೌರಿಶಂಕರ್‌. ಅಭಿವೃದ್ಧಿ ಹೆಸರಿನಲ್ಲಿ ಕಾಡುಗಳ ವಿನಾಶದಿಂದ “ಕಾಳಿಂಗ ಸರ್ಪಗಳ ಸಂತತಿ ಕೂಡ ಕಡಿಮೆಯಾಗುತ್ತಿದೆ. ಇದು ವಿಷಾದದ ಸಂಗತಿಯಾಗಿದೆ.

ಕಾಳಿಂಗ ಸರ್ಪಗಳು ಇತರೆ ಹಾವುಗಳನ್ನು ನುಂಗುವುದರಿಂದ ಆ ಹಾವುಗಳ ಸಂತತಿ ಕಡಿಮೆಯಾಗಿ ಅದರಿಂದ ಮಾನವರು ಮರಣ ಹೊಂದುವ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ, ಕಾಳಿಂಗ ಸರ್ಪಗಳು ಮಾನವನಿಗೆ ಉಪಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಕಾಳಿಂಗ ಸರ್ಪ ಸಾಮಾನ್ಯವಾಗಿ ಕಚ್ಚುವುದಿಲ್ಲ, ಅದು ನುಂಗುತ್ತದೆ. ಯಾವುದೇ ಪ್ರಾಣಿಯನ್ನು ಇಡಿಯಾಗಿ ನುಂಗುತ್ತದೆಯೇ ಹೊರತು ಅಗಿಯುವುದಿಲ್ಲ. ಕಾಳಿಂಗ ಸರ್ಪಗಳು ಬಹಳಷ್ಟು ಮೊಟ್ಟೆಗಳನ್ನು ಇಡುತ್ತವೆಯಾದರೂ ಶೇ.2ರಷ್ಟು ಮಾತ್ರ ಮರಿಯಾಗಿ ಬದುಕುತ್ತವೆ.

ಭಾರತದಲ್ಲಿ ಕಾಳಿಂಗ ಸರ್ಪಗಳನ್ನು ಕೊಲ್ಲುವುದಿಲ್ಲ, ಆದ್ದರಿಂದ ಸಂಖ್ಯೆ ಹೆಚ್ಚಿದೆ. ಆದರೆ, ಫಿಲಿಪೈನ್ಸ್‌ ಮುಂತಾದ ಕಡೆಗಳಲ್ಲಿ ಈ ಹಾವುಗಳನ್ನು ಕೊಲ್ಲಲಾಗುತ್ತದೆ ಎಂಬುದು ವರದಿಯಾಗಿದೆ.

Exit mobile version