ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಉಪಾಯಗಳನ್ನು ತಪ್ಪದೇ ಪಾಲಿಸಿ!

Heart

ಇತ್ತೀಚಿಗೆ ನಮ್ಮ ದೇಶದಲ್ಲಿ ಹೃದಯ ಸಂಬಂಧಿತ ಸಾವುಗಳು ಸಾಮಾನ್ಯ ಎಂಬಂತಾಗಿದೆ. ಮಧುಮೇಹ(Diabities), ರಕ್ತದೊತ್ತಡ(Blood Pressure), ಅಧಿಕ ಕೊಬ್ಬು(Over Fat), ಧೂಮಪಾನ(Smoking) ಹಾಗೂ ಅನುವಂಶಿಕ ಅಂಶಗಳು ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಲು ಕಾರಣವಾಗುತ್ತಿವೆ.

ಅನಾರೋಗ್ಯಕರ ಜೀವನಶೈಲಿ ಅಭ್ಯಾಸ ಕೂಡಾ ಹೃದಯ ಸಂಬಂಧಿತ ಕಾಯಿಲೆಗೆ ಕಾರಣವಾಗಿದೆ. ಆಗ್ನೇಯ ಏಷ್ಯಾದ ಜನರಲ್ಲಿ ಅನುವಂಶಿಕ ಕಾರಣದಿಂದ ಹೃದಯ ಸಂಬಂಧಿ ರೋಗಗಳು ಮೊದಲಿಗೆ ಹೆಚ್ಚಾಗಿತ್ತು. ಆದರೆ ಆರೋಗ್ಯಕರ ಜೀವನಶೈಲಿಯಿಂದ ಇದನ್ನು ತಡೆಗಟ್ಟಬಹುದಾಗಿದೆ. ಕೆಲವೊಂದು ಅರೋಗ್ಯಕರ ಜೀವನ ಶೈಲಿ ವಿಧಾನ ಅಳವಡಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳು ಹತ್ತಿರ ಸುಳಿಯದಂತೆ ಮುನ್ನಚ್ಚರಿಕೆ ವಹಿಸಬೇಕಾಗಿದೆ.
ಆರೋಗ್ಯಕರ ಆಹಾರ ಸೇವನೆ ಅತಿ ಮುಖ್ಯವಾಗಿದೆ.

ಸಮತೋಲಿನ ಆಹಾರದಿಂದ ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶಗಳು ದೊರೆಯುತ್ತವೆ. ಆದರೆ, ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ಇರುವ ಜಂಕ್ ಪುಡ್ , ಉಪ್ಪು, ಸಕ್ಕರೆಯಿಂದ ಹೃದಯ ಕೆಡುತ್ತದೆ. ಇದರ ಬಗ್ಗೆ ಹೆಚ್ಚು ಯೋಚಿಸದೆ ಜನರು ಸೇವನೆ ಮಾಡುವುದು ದುರದೃಷ್ಟಕರ. ದೇಹಕ್ಕೆ ಅಗತ್ಯವಾದಷ್ಟು ಕ್ಯಾಲೋರಿಯ ಆಹಾರದಲ್ಲಿ ಪ್ರೋಟೀನ್, ವಿಟಮಿನ್, ಖನಿಜಾಂಶ ಹಾಗೂ ಕಡಿಮೆ ಪ್ರಮಾಣದ ಕೊಬ್ಬಿನಾಂಶ ಇರಬೇಕಾಗುತ್ತದೆ. ಅನೇಕ ಜನರು ನಿಯಮಿತವಾಗಿ ವ್ಯಾಯಾಮ ಮಾಡುವುದಿಲ್ಲ.

ನಿರರ್ಥಕ ಜಡ ಜೀವನಶೈಲಿಯೂ ಹೃದಯ ಸಂಬಂಧಿತ ರೋಗಕ್ಕೆ ಕಾರಣವಾಗಿದೆ. ಬೊಜ್ಜು ಹೆಚ್ಚಾದ್ದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಸಮಯದ ಅಭಾವದಿಂದ ಕೆಲ ಜನರು ಕಡಿಮೆ ನಿದ್ರೆ ಮಾಡುತ್ತಾರೆ. ಇಂತಹ ಅಭ್ಯಾಸದಿಂದ ದೇಹಕ್ಕೆ, ಅದರಲ್ಲೂ ವಿಶೇಷವಾಗಿ ಹೃದಯಕ್ಕೆ ತೊಂದರೆಯಾಗುತ್ತದೆ. ದಿನಕ್ಕೆ 7 ರಿಂದ 8 ಗಂಟೆ ಕಾಲ ನಿದ್ರೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಇದರಿಂದಾಗಿ ಹೃದಯ ಸಂಬಂಧಿತ ರೋಗಗಳನ್ನು ತಡೆಗಟ್ಟಬಹುದಾಗಿದೆ.


ಈಗಿನ ಜೀವನ ಶೈಲಿಯಿಂದಾಗಿ ನಗರ ಪ್ರದೇಶದಲ್ಲಿ ವಾಸಿಸುವ ಬಹುತೇಕ ಮಂದಿ ಒತ್ತಡದಿಂದ ಬಳಲುತ್ತಿರುತ್ತಾರೆ. ಇಂತಹ ಒತ್ತಡ ಸಂದರ್ಭದಲ್ಲಿ ಪ್ರತಿಯೊಂದು ಅಂಗಾಂಗಳು ಪರಿಣಾಮಕ್ಕೊಳಗಾಗುತ್ತವೆ. ಅಡ್ರಿನಲಿನ್ ನಂತಹ ಹಾರ್ಮೋನುಗಳು ದೇಹದಲ್ಲಿ ಹರಿಯುತ್ತವೆ. ಒತ್ತಡ ಉಂಟುಮಾಡುವ ಕೆಲಸದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ.
ತಂಬಾಕು ಸೇವನೆಯಿಂದ ಹೃದಯಕ್ಕೆ ದೊಡ್ಡಮಟ್ಟದ ಹಾನಿಯಾಗುತ್ತದೆ. ಧೂಮಪಾನದಿಂದ ಹೃದಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಧೂಮಪಾನ ಹೊಗೆ ಸೇವನೆ ಕೂಡಾ ಹಾನಿಕಾರಕ.

ಮಧ್ಯಪಾನದಿಂದ ಲಿವರ್ ಹಾನಿಗೊಂಡು ಬೇಗನೆ ಸಾವು ಬರಬಹುದು. ನಿಯಮಿತ ಆರೋಗ್ಯ ತಪಾಸಣೆಯಿಂದ ಪ್ರಮುಖ ರೋಗಗಳು ಬಾರದಂತೆ ತಡೆಗಟ್ಟಬಹುದು. ಆರಂಭಿಕ ಹಂತದಲ್ಲಿಯೇ ತಪಾಸಣೆ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. ಆ ಮೂಲಕ ಸಮಸ್ಯೆ ದೊಡ್ಡದಾಗದಂತೆ ಮುಂಜಾಗ್ರತೆ ವಹಿಸಬಹುದು. ನಿಯಮಿತ ತಪಾಸಣೆಯಿಂದ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.

Exit mobile version