ಮೈತ್ರಿ ನಿಲುವಿನ ಬಗ್ಗೆ ಸ್ಪಷ್ಟಪಡಿಸ್ತಾರಾ ಎಚ್.ಡಿ.ದೇವೇಗೌಡ, ಕುತೂಹಲ ಮೂಡಿಸಿದ ಪತ್ರಿಕಾಗೋಷ್ಠಿ:

Bengaluru: ಮೈತ್ರಿ ಕುರಿತಾಗಿ ಬಿಜೆಪಿ ಜೊತೆ ಜೆಡಿಎಸ್‌ನ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ (will hdd join bjp) ಅಧಿಕೃತ ನಿರ್ಧಾರ ಏನೆಂಬುದು ಸಾಕಷ್ಟು ಕುತೂಹಲಮೂಡಿಸಿದೆ.ಜೆಡಿಎಸ್ ಹಾಗೂ

ಬಿಜೆಪಿ ನೈಸ್‌ ರಸ್ತೆ ಹಗರಣ ಹಾಗೂ ಶಾಸಕರ ಅಮಾನತು ವಿಚಾರವಾಗಿ ಜಂಟಿ ಹೋರಾಟ ಮಾಡಿತ್ತು. ಇವತ್ತಿನ ದೇವೇಗೌಡರ ಪತ್ರಿಕಾಗೋಷ್ಟಿಯಲ್ಲಿ ಅವರ ನಿಲುವೇನೆಂಬುದನ್ನು ಸ್ಪಷ್ಟ ಪಡಿಸುವ ಸಾಧ್ಯತೆ ಇದೆ

ಎನ್ನಲಾಗುತ್ತಿದೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬಿಜೆಪಿ ಜೊತೆಗಿನ ಜೆ.ಡಿ.ಎಸ್(J.D.S) ಮೈತ್ರಿ ಕುರಿತಾಗಿ ಪಕ್ಷದ ನಿಲುವು ಏನು ಎಂಬುದರ ಬಗ್ಗೆ ಅಧಿಕೃತ ನಿರ್ಧಾರ ಏನು ಎಂಬುವುದು ಸಾಕಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.

ಇದರ ಮಧ್ಯ ಮಂಗಳವಾರ ಪತ್ರಿಕಾಗೋಷ್ಠಿಯನ್ನು ದೇವೇಗೌಡರು ಕರೆದಿದ್ದು, ಮೈತ್ರಿ ಅಥವಾ ಹೊಂದಾಣಿಕೆಯ ಬಗ್ಗೆ ಜನತಾ ದಳದ ನಿರ್ಧಾರದ ಕುರಿತಾಗಿ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ, ಶಾಸಕರ ಅಮಾನತು ಮತ್ತು ನೈಸ್ ರಸ್ತೆ ಹಗರಣದ ವಿಷಯವಾಗಿ ಜಂಟಿ ಹೋರಾಟವನ್ನು ನಡೆಸಿದೆ. ಬಿ.ಜೆ.ಪಿ ಶಾಸಕಾಂಗ ಪಕ್ಷದ ಲೆಟರ್ ಹೆಡ್(Letter Head) ನಲ್ಲಿ ಎಚ್ ಡಿ ಕೆ

ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬಸವರಾಜ ಬೊಮ್ಮಾಯಿ (Basavaraj Bommai) ಪತ್ರಿಕಾಗೋಷ್ಠಿ ಭವಿಷ್ಯದ ಮೈತ್ರಿ ಸುಳಿವನ್ನು ನೀಡಿದೆ.

ಜೆಡಿಎಸ್ ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಅಪಸ್ವರ ಕೇಳಿಬಂದಿದ್ದು, ಇನ್ನು ಜೆಡಿಎಸ್ ನ ಕೆಲವು ಶಾಸಕರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಚ್.ಡಿ ದೇವೇಗೌಡರ ಬಳಿ ಈ ವಿಚಾರವಾಗಿ ತಮ್ಮ

ಮನಸ್ತಾಪವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಎಚ್.ಡಿ ದೇವೇಗೌಡ ಅವರು ಶಾಸಕರ ಜೊತೆಗೆ ಸಭೆಯನ್ನು (will hdd join bjp) ನಡೆಸಿದರು.

ನಂತರ ಬಿಜೆಪಿ ಹಾಗೂ ಕಾಂಗ್ರೆಸ್ (Congress) ಜೊತೆಗೆ ಸಮಾನ ಹೋರಾಟ ನಿರೂಪಿಸುವುದಾಗಿ ತಿಳಿಸಿದರು‌. ಆದರೆ ಅದರ ಮರುದಿನವೇ ಎಚ್ ಡಿ ಕುಮಾರಸ್ವಾಮಿ (H.D.Kumaraswamy) ಹಾಗೂ

ಬಸವರಾಜ ಬೊಮ್ಮಾಯಿ ನೈಸ್ ಅಕ್ರಮಗಳ ಬಗ್ಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಇನ್ನು ಈ ಸಂದರ್ಭದಲ್ಲಿ ಮೈತ್ರಿ ಕುರಿತಾದ ದೇವೇಗೌಡರ ನಿಲುವಿನ ಪ್ರಶ್ನೆಗೆ ಈ ವಿಚಾರವಾಗಿ ದೇವೇಗೌಡರು ಕೊನೆಯ

ನಿಲುವನ್ನು ನನಗೆ ಬಿಟ್ಟಿದ್ದಾರೆ ಎಂಬ ಅರ್ಥದಲ್ಲಿ ಹೇಳಿಕೊಂಡಿದ್ದರು.

ಎಚ್.ಡಿ ದೇವೇಗೌಡರು ಮೈತ್ರಿ ಕುರಿತಾಗಿ ಪಕ್ಷದ ನಿಲುವು ಏನು ಎಂಬುದರ ಕುರಿತು ಮಾತನಾಡುವ ಎಲ್ಲಾ ಲಕ್ಷಣವಿದೆ. ಇದಷ್ಟಲ್ಲದೆ ಮುಂದಿನ ದಿನಗಳಲ್ಲಿ ಕೈಗೊಂಡಿರುವ ಪಕ್ಷ ಸಂಘಟನೆಯ ಕ್ರಮಗಳ ಕುರಿತು

ದೇವೇಗೌಡರು ತಿಳಿಸುವ ಚಾನ್ಸ್ (Chance) ಇದೆ. ಇವೆಲ್ಲದರ ಹಿನ್ನೆಲೆಯಲ್ಲಿ ಅವರ ಇವತ್ತಿನ ಪತ್ರಿಕಾಗೋಷ್ಠಿ ಕುತೂಹಲಕ್ಕೆ ಕಾರಣವಾಗಿದೆ.

ಭವ್ಯಶ್ರೀ ಆರ್.ಜೆ

Exit mobile version