Mumbai: ಸಾಮಾನ್ಯವಾಗಿ ನಮಗೆಲ್ಲಾ ಭಿಕ್ಷುಕರು ಎಂದರೆ ದಿನದ ಮೂರು ಹೊತ್ತು ಊಟ ಸಿಗದೇ, ಬಿಡಿಗಾಸಿಗೆ ಇಡೀ (worlds richest beggar bharat jain) ದಿನವೆಲ್ಲ ರಸ್ತೆ ಬದಿಗಳಲ್ಲಿ,
ದೇವಸ್ಥಾನದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಾ, ಸಿಕ್ಕಿದ್ದನ್ನೆ ತಿನ್ನುತ್ತಾ, ಸ್ನಾನವಿಲ್ಲದೆ , ಸರಿಯಾಗಿ ಊಟ ಮತ್ತು ಮನೆ, ಕುಟುಂಬಗಳಿಲ್ಲದೆ ಓಡಾಡುತ್ತಿರುತ್ತಾರೆ ಎಂದು ಭಾವಿಸುತ್ತೇವೆ.
ಅಷ್ಟೇ ಅಲ್ಲದೆ ಉದ್ದುದ್ದ ತಲೆಗೂದಲೂ-ಗಡ್ಡ ಬಿಟ್ಟುಕೊಂಡು, ರಸ್ತೆ ಬದಿ, ಬಸ್-ರೈಲು ನಿಲ್ದಾಣಗಳಲ್ಲಿ ಮಲಗಿರುವವರು ವಸತಿ, ಊಟಕ್ಕೂ ಸಹ ಗತಿ ಇಲ್ಲದವರ ಆರ್ಥಿಕ ಸ್ಥಿತಿಗತಿ ಚೆನ್ನಾಗಿರಲು
ಹೇಗೆ ಸಾಧ್ಯ? ಎಂಬ ಆಲೋಚನೇ ಕೂಡ ನಮ್ಮಲ್ಲಿ (worlds richest beggar bharat jain) ಮೂಡುವುದು ಸಹಜ.

ಆದ್ರೆ ಈಗ ನಾನು ಹೇಳಲು ಹೊರಟಿರುವ ಈ ಭಿಕ್ಷುಕನ ಕತೆಯೇ ಬೇರೆಯಾಗಿದ್ದು ಆಗಾಗ ಸುದ್ದಿಯಲ್ಲಿರುವ ಈ ಭಿಕ್ಷುಕ ಅವರಿವರು ಕೊಡುವ ಧಾರಾಳ ಭೀಕ್ಷೆಯಿಂದಲೇ ಬದುಕು ನಡೆಸುವ ಜೊತೆಗೆ
‘ವಿಶ್ವದ ಶ್ರಿಮಂತ ಭಿಕ್ಷುಕ’ ಎನ್ನಿಸಕೊಂಡಿದ್ದಾನೆ. ಈತ ತಿಂಗಳಿಗೆ ಸಾವಿರಾರು ರೂಪಾಯಿ ಸಂಗ್ರಹಿಸುವುದಲ್ಲದೆ ಈತ ಕೋಟ್ಯಂತರ ರೂಪಾಯಿಯ ನಿವ್ವಳ ಆದಾಯ ಹೊಂದಿದ್ದಾನೆ. ಭಿಕ್ಷೆ ಬೇಡಿ
ನಮ್ಮ ಹೊಟ್ಟೆಗಾದರೆ ಸಾಕು ಎನ್ನುವವರ ಮಧ್ಯೆ ಕೆಲವರು ತಮ್ಮ ಭಿಕ್ಷಾಟನೆಯಲ್ಲಿಯೇ ಯಶಸ್ಸು ಸಾಧಿಸಿ, ಅದನ್ನು ಲಾಭದಾಯಕ ವ್ಯವಹಾರವನ್ನಾಗಿಸಿ ಅದನ್ನು ಹೊಸ ಹಂತಕ್ಕೆ ಕೊಂಡೊಯ್ದಿದ್ದಾರೆ.
ಅಂಥವರ ಸಾಲಿನಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನಾದ ‘ಭರತ್ ಜೈನ್’ (Bharat Jain) ಕೂಡ ಒಬ್ಬ.
ಮುಂಬೈನಲ್ಲಿ ಕುಟುಂಬ ಹೊಂದಿರುವ ಭರತ್ ಜೈನ್
ಮುಂಬೈ (Mumbai) ಭಿಕ್ಷುಕ ಮಾಧ್ಯಮಗಳ ವರದಿ ಪ್ರಕಾರ ಭರತ್ ಜೈನ್ ಮುಂಬೈನಲ್ಲಿ ಕುಟುಂಬ ಹೊಂದಿದ್ದು, ಮಹಾರಾಷ್ಟ್ರದ ರಾಜಧಾನಿ ಮುಂಬೈನ ಜನನಿಬಿಡ ಬೀದಿಗಳಲ್ಲಿ ಭಿಕ್ಷೆ ಬೇಡಿಕೊಂಡು
ಬದುಕು ಸಾಗಿಸುತ್ತಿದ್ದಾನೆ. ಈತನನ್ನು ಮುಂಬೈನ ಬೀದಿಗಳಲ್ಲಿ ಕಾಣಬಹುದು. ಈತ ಒಬ್ಬಂಟಿಯಾಗಿಲ್ಲ ಬದಲಾಗಿ ಈತ ವಿವಾಹಿತನಾಗಿದ್ದು, ಈತನಿಗೆ ಕುಟುಂಬವು ಸಹ ಇದೆ. ಇವನಿಗೆ ಪತ್ನಿ ಹಾಗೂ
ಇಬ್ಬರು ಗಂಡು ಮಕ್ಕಳು, ಅವರ ಸಹೋದರ ಮತ್ತು ಅವರ ತಂದೆ ಇವನೊಂದಿಗೆ ಇದ್ದಾರೆ. ಅಲ್ಲದೆ ಜೈನ್ ಬಾಲ್ಯದಲ್ಲಿದ್ದಾಗ ಆತನಿಗೆ ಬಂದೊದಗಿದ ಹಣಕಾಸಿನ ತೊಂದರೆಯಿಂದಾಗಿ ಆತ ಬಾಲ್ಯದಲ್ಲಿ
ಔಪಚಾರಿಕ ಶಿಕ್ಷಣ ಮುಂದುವರೆಸಲು ಸಾಧ್ಯವಾಗಲಿಲ್ಲ.
ವರದಿಗಳ ಪ್ರಕಾರ:
ಭರತ್ ಜೈನ್ ಸದ್ಯ 7.5 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದು, ಈತನಿಗೆ ಭಿಕ್ಷಾಟನೆಯಿಂದ ತಿಂಗಳಿಗೆ 60,000 ರಿಂದ 75,000 ರೂಪಾಯಿವರೆಗೆ ಆದಾಯ ಇದೆ ಎಂದು ವರದಿಗಳು ತಿಳಿಸಿವೆ.
ಇನ್ನು ಮುಂಬೈನ ಥಾಣೆಯಲ್ಲಿ 30,000 ರೂಪಾಯಿಯ ಎರಡು ಚಿಲ್ಲರೆ ಸಂಸ್ಥೆಗಳನ್ನು ಹೊಂದಿದ್ದಾನೆ. ಅಷ್ಟೇ ಅಲ್ಲದೇ ಮುಂಬೈನಲ್ಲಿ 1.2 ಕೋಟಿ ಮೌಲ್ಯದ 2BHK ಮನೆ (ಫ್ಲಾಟ್) ಹೊಂದಿದ್ದಾನೆ.
ಮತ್ತು 8 ಫ್ಲ್ಯಾಟ್ (Flat) ಗಳಿಗೆ ಈತ ಮಾಲೀಕನಾಗಿದ್ದಾನೆ.

ಭರತ್ ಜೈನ್ ಇಷ್ಟೊಂದು ಆಸ್ತಿ ಮಾಲೀಕರಾಗಿದ್ದರೂ ಮುಂಬೈನ ಆಜಾದ್ ಮೈದಾನ ಅಥವಾ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಂತಹ ಪ್ರಸಿದ್ಧ ಪ್ರದೇಶಗಳಲ್ಲಿ ಭಿಕ್ಷೆ ಬೇಡುವುದನ್ನು
ಮುಂದುವರಿಸಿದ್ದಾನೆ. ನಗರದಲ್ಲಿ ಹಲವರಿಗೆ ದೀರ್ಘಾವಧಿ ಕೆಲಸ ಮಾಡಿ ನೂರು ರೂಪಾಯಿ ಗಳಿಸುವುದು ಕಷ್ಟವಾಗಿದ್ದರೆ ಜೈನ್ ಮಾತ್ರ ಭಾರತೀಯರ ದಯೆಯಿಂದ ದಿನಕ್ಕೆ 10 ರಿಂದ 12 ಗಂಟೆಗಳಲ್ಲಿ
2,000 ರಿಂದ 2,500 ರೂಪಾಯಿ ಗಳಿಸುತ್ತಾನೆ ಎಂದು ತಿಳಿದು ಬಂದಿದೆ.
ಇಲ್ಲಿನ ಪರೇಲ್ನಲ್ಲಿರುವ (Parel) 1 BHK ಡ್ಯುಪ್ಲೆಕ್ಸ್ (Duplex) ನಿವಾಸದಲ್ಲಿ ಜೈನ್ ಕುಟುಂಬವು ವಾಸವಿದ್ದು, ಆತನ ಮಕ್ಕಳು ಕಾನ್ವೆಂಟ್ (Convent) ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ
ಮತ್ತು ಜೈನ್ ಸಂಬಂಧಿಕರು ಸ್ಟೇಷನರಿ (Stationary) ಅಂಗಡಿ ಮಾಲೀಕರಾಗಿದ್ದಾರೆ. ಮಕ್ಕಳು, ಕುಟುಂಸ್ಥರು ಭಿಕ್ಷೆ ಬೇಡುವುದನ್ನು ನಿಲ್ಲಿಸುವಂತೆ ಪರಿ ಪರಿಯಾಗಿ ಹೇಳಿದರೂ ಸಹಿತ ತಮ್ಮ
ಕಾಯಕ ಬಿಡದೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ
ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್ ಸುದ್ದಿಯಲ್ಲಿರುವುದು ಇದೇ ಮೊದಲಲ್ಲ. 2015 ರಲ್ಲಿ ಸಹ ಮಾಧ್ಯಮಗಳಲ್ಲಿ ಜೈನ್ ಮೊದಲ ಬಾರಿಗೆ ಸುದ್ದಿ ಆದ ವೇಳೆ ಆತನ ಮಾಸಿಕ ಆದಾಯ
ಸುಮಾರು 70,000 ರೂ. ಆಗಿತ್ತು. ಈ ಕಾರಣದಿಂದ ಈತ ಆಗಾಗ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬರುತ್ತಿದ್ದಾನೆ.
ಇದನ್ನು ಓದಿ :ಧಾರವಾಡ ಕೃಷಿಮೇಳಕ್ಕೆ ಕ್ಷಣಗಣನೆ! ಬರದ ಹಿನ್ನೆಲೆಯಲ್ಲಿ ರೈತರಿಗೆ ಸಿಗಲಿದೆ ಭರಪೂರ ಮಾಹಿತಿ
- ಭವ್ಯಶ್ರೀ ಆರ್.ಜೆ