ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಕ್ಲೀನ್‌ ಸ್ವೀಪ್‌ ಮಾಡಿದ ಯೋಗಿ ಸರ್ಕಾರ

Lucknow : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲಿನ ಹಿನ್ನಡೆಯ ನಡುವೆಯೇ (Yogi government clean sweep) ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ನೇತೃತ್ವದ ಬಿಜೆಪಿ ಸ್ವೀಪ್ ಮಾಡಿರುವುದು ಪಕ್ಷಕ್ಕೆ ಸ್ವಲ್ಪ ಹುರುಪು ತಂದಿದೆ. ಬಿಜೆಪಿ (BJP) ಎಲ್ಲಾ 17 ಮೇಯರ್ ಸ್ಥಾನಗಳನ್ನು ಗೆದ್ದು ಬೀಗಿದೆ.

Yogi Adityanath

ಇನ್ನು ಸಮಾಜವಾದಿ ಪಕ್ಷ ಎಲ್ಲಾ ಮೇಯರ್ (Mayor) ಸ್ಪರ್ಧೆಗಳಲ್ಲಿ ಸೋತರೆ, ನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳನ್ನು ಮತ್ತು ನಗರ ಪಂಚಾಯತ್ ಚುನಾವಣೆಯಲ್ಲಿ 78 ಸ್ಥಾನಗಳನ್ನು ಗೆದ್ದಿದೆ.

ಬಹುಜನ ಸಮಾಜವಾದಿ ಪಕ್ಷ 15 ನಗರ ಪಾಲಿಕೆ ಸ್ಥಾನಗಳನ್ನು ಮತ್ತು 37 ನಗರ ಪಂಚಾಯತ್ ಸ್ಥಾನಗಳನ್ನು ಗೆದ್ದಿದೆ.

ಕಾಂಗ್ರೆಸ್ (Congress) ನಾಲ್ಕು ನಗರ ಪಾಲಿಕೆ ಮತ್ತು 14 ನಗರ ಪಂಚಾಯತ್ ಸ್ಥಾನಗಳನ್ನು ಗೆದ್ದಿದೆ. ಉಳಿದ ಸ್ಥಾನಗಳನ್ನು ಸಣ್ಣ ಪಕ್ಷಗಳು ಅಥವಾ ಪಕ್ಷೇತರರು ಗೆದ್ದಿದ್ದಾರೆ.

ಮೂರು ಹಂತದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮೇ 4 ಮತ್ತು 11 ರಂದು ಎರಡು ಹಂತಗಳಲ್ಲಿ (Yogi government clean sweep) ನಡೆಯಿತು. ಚುನಾವಣಾ ಆಯೋಗದ ಪ್ರಕಾರ,

https://youtu.be/si13NZfZStY

43.2 ಮಿಲಿಯನ್ (Million) ಅರ್ಹ ಮತದಾರರಲ್ಲಿ ಸುಮಾರು 53 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

BJP

ಯುಪಿಯಲ್ಲಿ ನಗರ ಭಾಗಗಳಲ್ಲಿ ಬಿಜೆಪಿ ತನ್ನ ಪ್ರಬಲ ಹಿಡಿತವನ್ನು ಉಳಿಸಿಕೊಂಡಿದೆ. ಮೇಯರ್ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವು ಕ್ಲೀನ್ ಸ್ವೀಪ್ (Sweep) ಮಾಡಿದ್ದು ಇದೇ ಮೊದಲು.

2017 ರಲ್ಲಿ 16 ಮೇಯರ್ ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿತ್ತು. ನಗರ ಪಾಲಿಕೆ ಮತ್ತು ನಗರ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ (BJP) ತನ್ನ ಸಾಧನೆಯನ್ನು ಸುಧಾರಿಸಿಕೊಂಡಿದೆ.

ಬಿಜೆಪಿ ಪ್ರಚಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 13 ದಿನಗಳಲ್ಲಿ 50 ಜಿಲ್ಲೆಗಳಲ್ಲಿ 200ಕ್ಕೂ ಹೆಚ್ಚು ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು.

ಬಿಜೆಪಿಯ ಗೆಲುವು ಯುಪಿಯಲ್ಲಿ (UP) “ಉತ್ತಮ ಆಡಳಿತ, ಅಭಿವೃದ್ಧಿ, ಭಯ-ಮುಕ್ತ ವಾತಾವರಣ” ಮತ್ತು ‘ಡಬಲ್ ಇಂಜಿನ್’ (Double Engine) ಬೆಳವಣಿಗೆಯ ಫಲಿತಾಂಶವಾಗಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

Exit mobile version