ಲಿಫ್ಟ್‌ನಲ್ಲಿ ಕಣ್ಣಾಮುಚ್ಚಾಲೆ ಆಡಲು ಹೋಗಿ 16 ವರ್ಷದ ಬಾಲಕಿ ಸಾವು!

Mumbai : ಶುಕ್ರವಾರ ಮುಂಬೈನ ಮನ್‌ಖುರ್ದ್ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ 16 ವರ್ಷದ ಬಾಲಕಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಆಯಾತಪ್ಪಿ ಸಾವನ್ನಪ್ಪಿದ್ದಾಳೆ. ಬಾಲಕಿ ತನ್ನ ತಲೆಯನ್ನು ಲಿಫ್ಟ್‌(16 year girl dies in Lift) ಹೋಗುವ ಜಾಗದಲ್ಲಿ ಅಳವಡಿಸಿದ್ದ ಕಿಟಕಿಯೊಳಗೆ ಡೋರ್ ತೆರೆಯುವ ಸಮಯದಲ್ಲಿ ಇಣುಕಿದ್ದಾಳೆ.

ಲಿಫ್ಟ್ ಕೆಳಗಿಳಿದು ಬಾಲಕಿಯ ತಲೆಗೆ ಬಡಿದು, ತಕ್ಷಣವೇ ಆಕೆಯ ಪ್ರಾಣವನ್ನು ಕಸಿದುಕೊಂಡಿದೆ. ಮೃತ ಬಾಲಕಿಯನ್ನು (16 year girl dies in Lift ) ರೇಷ್ಮಾ ಖಾರವಿ ಎಂದು ಗುರುತಿಸಲಾಗಿದ್ದು,

https://vijayatimes.com/non-bailable-warrant/

ಈ ಘಟನೆ ಸಂಭವಿಸುವ ಮುನ್ನ ಬಾಲಕಿ ರೇಷ್ಮಾ ಖಾರವಿ ತನ್ನ ಅಜ್ಜಿಯನ್ನು ಭೇಟಿ ಮಾಡಲು ಅಜ್ಜಿ ಮನೆಗೆ ಬಂದಿದ್ದಳು ಎನ್ನಲಾಗಿದೆ. ಈ ವೇಳೆ ರೇಷ್ಮಾ ತನ್ನ ಸ್ನೇಹಿತರ ಜೊತೆ ಮನೆಯ ಸುತ್ತಮುತ್ತ ಸ್ಥಳದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದಳು.

ಲಿಫ್ಟ್‌ನಲ್ಲಿ ಕಿಟಕಿಯ ಜಾಗದಲ್ಲಿ ಅವಳು ತನ್ನ ಸ್ನೇಹಿತರನ್ನು ಹುಡುಕುತ್ತಿದ್ದಾಗ, ಕಿಟಕಿಯ ಜಾಗದಲ್ಲಿ ಇಣುಕಿ ನೋಡಿದ್ದಾಳೆ. ಆ ವೇಳೆ ಲಿಫ್ಟ್ ಏಕಾಏಕಿ ಬಾಲಕಿಯ ತಲೆ ಮೇಲೆ ಅಪ್ಪಳಿಸಿದೆ.

ಈ ದುರ್ಘಟನೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯ ಪೋಷಕರು ಹೌಸಿಂಗ್ ಸೊಸೈಟಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ! ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

https://youtu.be/cZaD2xSJotQ ಸಾಲು ಸಾಲು ಸಮಸ್ಯೆಗಳಿಂದ ಕೂಡಿದೆ ಅಜ್ಜೀಪುರ ಗ್ರಾಮ.

ಇಂತ ಅಪಘಾತ ತಪ್ಪಿಸಲು ಹೌಸಿಂಗ್ ಸೊಸೈಟಿ ಅಧಿಕಾರಿಗಳು ಕಿಟಕಿಗೆ ಗಾಜು ಅಳವಡಿಸಬೇಕು.

ನನ್ನ ಮಗಳಿಗೆ ಬಂದಂತ ದುರ್ಗತಿ ಬೇರೆ ಯಾರಿಗೂ ಬಾರದಿರಲಿ ಎಂದು ಮೃತ ಬಾಲಕಿಯ ತಂದೆ ರವಿ ಖಾರವಿ ಹೇಳಿದರು. ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯನ್ನು ಆಧಾರಿಸಿ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಪ್ರಕರಣದಲ್ಲಿ ಹೌಸಿಂಗ್ ಸೊಸೈಟಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಖುರ್ದ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಮಹಾದೇವ ಕೋಳಿ ಸ್ಥಳೀಯ ಸುದ್ದಿಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Exit mobile version