Karnataka: ಲೋಕಸೇವಾ ಆಯೋಗವು ವಿವಿಧ ತಾಂತ್ರಿಕ ಹುದ್ದೆಗಳ ಭರ್ತಿಗೆ ತನ್ನ ಗಣಕಕೇಂದ್ರಕ್ಕೆ ಅಗತ್ಯ ಇರುವ ಭರ್ತಿಗೆ ನೋಟಿಫಿಕೇಶನ್ (2023 jobcall for kpsc) ಬಿಡುಗಡೆ ಮಾಡಿದೆ.
ಜೂನಿಯರ್ ಪ್ರೋಗ್ರಾಮರ್, ಡಾಟಾ ಬೇಸ್ ಅಡ್ಮಿನ್, ನೆಟ್ವರ್ಕ್ ಅಡ್ಮಿನ್ ಕೆಲಸಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ಕುರಿತು ಸಂಪೂರ್ಣ ವಿಚಾರವನ್ನು ಕೆಳಗಿನಂತೆ
ತಿಳಿದು ಅಪ್ಲಿಕೇಶನ್ (2023 jobcall for kpsc) ಸಲ್ಲಿಸಬಹುದು.

ಗುತ್ತಿಗೆ ಆಧಾರದ ಮೇಲೆ ಗಣಕಕೇಂದ್ರಕ್ಕೆ ಕೇವಲ ವಿದ್ಯಾರ್ಹತೆ ಮತ್ತು ನೈಪುಣ್ಯತೆಗಳ ಮೇಲೆ 03 ಹುದ್ದೆಗಳನ್ನು ಜೂನಿಯರ್ ಪ್ರೋಗ್ರಾಮರ್ (Junior Programmer), ಡಾಟಾ ಬೇಸ್ ಅಡ್ಮಿನ್
(Data Base Admin), ನೆಟ್ವರ್ಕ್ ಅಡ್ಮಿನ್ ಆಯೋಗದಿಂದ ನೇರವಾಗಿ ಆಯ್ಕೆ ಮಾಡಿಕೊಳ್ಳಲು ಹಾಗೂ ಹೊರಗುತ್ತಿಗೆ ಮೂಲಕ 01 ಹಾರ್ಡ್‌ವೇರ್ ಟೆಕ್ನೀಷಿಯನ್ (Hardware Technician)
ಹುದ್ದೆಯನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿರುತ್ತದೆ. ಹುದ್ದೆಗಳ ಸ್ವವಿವರ ಈ ಕೆಳಕಂಡಂತಿರುತ್ತದೆ.
ಹುದ್ದೆಗಳ ಸ್ವವಿವರ
ನೆಟ್‌ವರ್ಕ್ ಅಡ್ಮಿನ್ (Network Admin) : 01
ಹಾರ್ಡ್‌ವೇರ್ ಟೆಕ್ನೀಷಿಯನ್ (Hardware Technician) : 01
ಡಾಟಾ ಬೇಸ್ ಅಡ್ಮಿನ್ (Data Base Admin): 01
ಜೂನಿಯರ್ ಪ್ರೋಗ್ರಾಮರ್ (Junior Programmer): 01
ಈ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್ (Computer Science),ಕಂಪ್ಯೂಟರ್ ಅಪ್ಲಿಕೇಶನ್, ಇನ್ಫಾರ್ಮೇಶನ್ ಸೈನ್ಸ್ (Information Science), ಇನ್ಫಾರ್ಮೇಶನ್ ಟೆಕ್ನಾಲಜಿ (Information Technology),
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ (Electronics And Communication), ಎಂಎಸ್ಸಿ ಇನ್ ಇನ್ಫಾರ್ಮೇಶನ್ ಸೈನ್ಸ್ (Msc In Information Science), ಟೆಕ್ನಾಲಜಿ (Technology), ಕಂಪ್ಯೂಟರ್ ಸೈನ್ಸ್
ಇಂಜಿನಿಯರಿಂಗ್ (Computer Science Engineering) ಅಥವಾ ಎಂಇ (ME), ಎಂ.ಟೆಕ್ (M.tech) ಪಾಸ್ ಮಾಡಿರಬೇಕು.
ಇದನ್ನು ಓದಿ: ಭರದಿಂದ ಸಾಗುತ್ತಿರುವ ಅಯೋಧ್ಯಾ ರಾಮ ಮಂದಿರ ನಿರ್ಮಾಣ : 2024ರ ಜ.1ರಂದು ರಾಮಮಂದಿರ ಲೋಕಾರ್ಪಣೆ
ಅಲ್ಲದೆ ASP.net ಮತ್ತು ಡಾಟಾಬೇಸ್ (MS-SQL) ಅಭ್ಯರ್ಥಿಯು ಈ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು. ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ (Karanataka Public Services Commission)
ನಡೆಸುವ ಆಯ್ಕೆ ವಿಧಾನದಲ್ಲಿ ಸ್ಕಿಲ್ ಟೆಸ್ಟ್ ಅನ್ನು ಪಾಸ್ ಮಾಡಬೇಕು
ಷರತ್ತುಗಳು / ನಿಬಂಧನೆಗಳು
ನೇಮಕಗೊಂಡಂದಿನಿಂದ ಮೊದಲ 3 ತಿಂಗಳವರೆಗೆ ಪರೀಕ್ಷಾರ್ಥ ಅವಧಿಯೆಂದು ಪರಿಗಣಿಸಲಾಗುವುದಲ್ಲದೆ. ಸೇವೆಯನ್ನು 03 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, 01 ವರ್ಷದ ನಂತರ ಅವರ
ಕಾರ್ಯನಿರ್ವಹಣೆಯ ಆಧಾರದ ಮೇಲೆ ನಂತರದ ಅವಧಿ ವಿಸ್ತರಣೆ ಕುರಿತು ನಿರ್ಧರಿಸಲಾಗುವುದು.

ಅರ್ಜಿ ಸಲ್ಲಿಸುವ ಬಗೆ :
ಅರ್ಜಿದಾರರು ಅವರ ಅರ್ಜಿಯೊಂದಿಗೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾವಿದ್ಯಾರ್ಹತೆ ಮತ್ತು ಅಗತ್ಯ ಸೇವಾನುಭವ ಹೊಂದಿರುವ ಅಭ್ಯರ್ಥಿಗಳು, ಸೇವಾ ವಿವರಗಳನ್ನೊಳಗೊಂಡ
ಅಗತ್ಯ ದಾಖಲೆಗಳನ್ನು ಹಾಗೂ ಸಂಪೂರ್ಣ ಮಾಹಿತಿ ಲಗತ್ತಿಸಬೇಕು.
ಅರ್ಜಿಯ ಅಧಿಸೂಚನೆಯ ಪ್ರಕಟಣಾ ದಿನಾಂಕದಿಂದ 07 ದಿನಗಳ ಒಳಗಾಗಿ ‘To be opened by Secretary only’ ಎಂದು ನಮೂದಿಸಿದ ಮುಚ್ಚಿದ ಎನ್ವಲಪ್ ನಲ್ಲಿ, ಶ್ರೀ ಸುರಳ್ಕರ್ ವಿಕಾಸ್ ಕಿಶೋರ್
(Shree Suralkar Vikas Kishor), ಭಾ.ಆ.ಸೇ, ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು – 560001 ಎಂದು ಇವರಿಗೆ ಸಲ್ಲಿಸಬೇಕು.
ಅಲ್ಲದೆ ಆಗಸ್ಟ್ (August) 30 ಕೊನೆ ದಿನವಾಗಿದ್ದು, ಅಂಚೆ ಮೂಲಕ ಅಥವಾ ಕೊರಿಯರ್ (Courier) ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ನೇರವಾಗಿ ಅರ್ಜಿ ಸಲ್ಲಿಸಬಹುದು.
ಭವ್ಯಶ್ರೀ ಆರ್.ಜೆ