ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ 94 ವರ್ಷದ ಭಗವಾನಿ ದೇವಿ!

india

ಭಾರತೀಯ ಯುವಕರು ಕ್ರೀಡಾರಂಗದಲ್ಲಿ ವಿಶ್ವಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಿದ್ದಾರೆ.

ಆದ್ರೆ, ಭಾರತೀಯ ಹಿರಿಯ ನಾಗರಿಕರು ಕೂಡ ಯುವಕರಿಗಿಂತ ಕಡಿಮೆಯೇನಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ, ಇತ್ತೀಚೆಗಷ್ಟೇ ಹರಿಯಾಣ(Haryana) ಮೂಲದ ಭಗವಾನಿ ದೇವಿ(Bhagwani Devi) ತಮ್ಮ 94ನೇ ವಯಸ್ಸಿನಲ್ಲಿ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಕಂಚು ಗೆಲ್ಲುವ ಮೂಲಕ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ.


ಮಹತ್ತರವಾದ ಸಾಧನೆಗಳಿಗೆ ವಯಸ್ಸು ಅಡ್ಡಿಯಲ್ಲ, ಛಲವೊಂದಿದ್ದರೆ ಸಾಕು ಎನ್ನುವುದನ್ನು ಭಾರತ ಮೂಲದ ಭಗವಾನಿ ದೇವಿ ನಿರೂಪಿಸಿದ್ದಾರೆ.

ಭಾರತದ 94 ವರ್ಷದ ಓಟಗಾರ್ತಿ ಭಗವಾನಿ ದೇವಿ (94 year old wins gold medal)ಅವರು ಟಂಪೆರೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 24.74 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿರುವ ಭಗವಾನಿ ದೇವಿ ಶಾಟ್‌ಪುಟ್‌ನಲ್ಲಿ ಕೂಡ ಕಂಚಿನ ಪದಕ ಪಡೆಯುವ ಮೂಲಕ ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

“100 ಮೀ ಸ್ಪ್ರಿಂಟ್ ಈವೆಂಟ್‌ನಲ್ಲಿ 24.74 ಸೆಕೆಂಡುಗಳಲ್ಲಿ ಓಡಿ ಅವರು ಚಿನ್ನದ ಪದಕವನ್ನು ಗೆಲ್ಲುವುದರ ಜೊತೆಗೆ, ಶಾಟ್‌ಪುಟ್‌ನಲ್ಲಿ ಕಂಚಿನ ಪದಕವನ್ನೂ ಪಡೆದಿರುವುದು ನಿಜವಾಗಿಯೂ ಶ್ಲಾಘನೀಯ ಪ್ರಯತ್ನ” ಎಂದು ಕ್ರೀಡಾ ಇಲಾಖೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಟ್ವೀಟ್(Tweet) ಮಾಡಿದೆ.

https://vijayatimes.com/state-congress-tweets-against-bc-nagesh/

ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಜೂನ್‌ 29 ರಿಂದ ಜುಲೈ 10 ರವರೆಗೆ ಫಿನ್‌ಲ್ಯಾಂಡ್‌ನ ಟಾಂಪೆರೆಯಲ್ಲಿ ನಡೆದಿತ್ತು. 25 ವರ್ಷಕ್ಕಿಂತ ಅಧಿಕ ವಯಸ್ಸಿನವರು ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು. 
https://vijayatimes.com/psuedo-belief-in-snake-nature/
ಒಟ್ಟಿನಲ್ಲಿ 94 ವರ್ಷದ ವಯಸ್ಸಿನಲ್ಲಿ ಇವರ ಸಾಧನೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.
Exit mobile version