ಸಮಸ್ಯೆಗಳ ಸಾಗರದಲ್ಲಿ ನಲುಗಿ ಹೋಗಿರುವ ಪಾಕಿಸ್ತಾನದಲ್ಲಿ ಇದೀಗ ಸಂಸತ್ ವಿಸರ್ಜನೆ, ಮುಂದಿನ ಕಥೆ ಏನು?

Pakistan : ಸಮಸ್ಯೆಗಳ ಸಾಗರದಲ್ಲಿ ಪಾಕಿಸ್ತಾನ (about Pakistan Parliament dissolved) ನಲುಗಿ ಹೋಗಿದೆ, ಪಾಕ್ ತನ್ನ ಭಾರತ (India) ವಿರೋಧಿ ನಿಲುವನ್ನು ಇಷ್ಟೆಲ್ಲಾ ಆದರೂ

ಕೂಡ ಬಿಟ್ಟಿಲ್ಲ.ಕಂಡ ಕಂಡ ದೇಶಗಳ ಎದುರು ಸಾಲಕ್ಕೆ ಕೈಚಾಚುವ ಪರಿಸ್ಥಿತಿ ಇದೆ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕವಾಗಿ ದಿವಾಳಿಯಾಗಿ ಉಳಿದಿದೆ. ಪಾಕಿಸ್ತಾನ ಸಂಸತ್

(Parliament) ವಿಸರ್ಜನೆಗೆ ಇಂತಹ ಸ್ಥಿತಿಯಲ್ಲೇ ಮಹತ್ವದ ಘೋಷಣೆ ಮೊಳಗಿದೆ. ಹಾಗಾದರೆ ಯಾವಾಗ ಪಾಕಿಸ್ತಾನ ಚುನಾವಣೆ ನಡೆಯುತ್ತೆ? ಬನ್ನಿ ತಿಳಿಯೋಣ.

ಪಾಕಿಸ್ತಾನದಲ್ಲಿ ಮಹತ್ವದ ಬೆಳವಣಿಗೆ ನಿನ್ನೆ ತಡರಾತ್ರಿ ನಡೆದಿದ್ದು,ಸಂಸತ್‌ ವಿಸರ್ಜನೆಗಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ (shehbaz sharif) ಅಧಿಸೂಚನೆ ಕಳುಹಿಸಿದ್ದಾರೆ.

ಪಾಕ್‌ನ ಸಂಸತ್ ಹೀಗಾಗಿ ಈಗಾಗಲೇ ವಿಸರ್ಜನೆಯಾಗಿದ್ದು,ಮತ್ತೆ 90 ದಿನದ ಒಳಗಾಗಿ ಚುನಾವಣೆ ನಡೆವ ನಿರೀಕ್ಷೆ ಇದೆ. ಪಾಕಿಸ್ತಾನದ ಹಾಲಿ ಸರ್ಕಾರದ ಅವಧಿ ಆಗಸ್ಟ್‌ 12ಕ್ಕೆ ಮುಗಿಯುತ್ತಿದ್ದು,

ಪಾಕಿಸ್ತಾನ ಪ್ರಧಾನಿ ಸಂಸತ್ ವಿಸರ್ಜನೆ ಕುರಿತು ಕೆಲವು ದಿನಗಳ ಹಿಂದಷ್ಟೇ ಮಹತ್ವದ ಮಾತುಕತೆ ನಡೆಸಿದ್ದರು. ಹೀಗೆ ಮಾತುಕತೆ ನಡೆದ ಬಳಿಕ ದಿಢೀರ್ ಪಾಕಿಸ್ತಾನದ ಅಧ್ಯಕ್ಷ ಶೆಹಬಾಜ್‌

ಷರೀಫ್‌ ನಿನ್ನೆ ತಡರಾತ್ರಿ ಸಂಸತ್ (about Pakistan Parliament dissolved) ವಿಸರ್ಜನೆಗೆ ಶಿಫಾರಸು ಮಾಡಿದ್ದಾರೆ

ಪಾಕಿಸ್ತಾನದ ಮುಂದಿನ ಕಥೆ ಏನು?

ಭಾರತದ ನೆರೆ ದೇಶವಾದ ಪಾಕಿಸ್ತಾನದಲ್ಲಿ ರಾಜಕೀಯ ಅಸ್ತಿರತೆ ನಡುವೆ ಇದೀಗ ಮಹತ್ವದ ಬೆಳವಣಿಗೆ ನಡೆದಿದೆ. ಪಾಕಿಸ್ತಾನದಲ್ಲೂ ಭಾರತದ ರೀತಿಯೇ 5 ವರ್ಷಗಳ ಅಧಿಕಾರವಧಿ ಇರುತ್ತದೆ.

ಪಾಕಿಸ್ತಾನ ಲೋಕಸಭೆ(Lok Sabha) ಒಟ್ಟು ಸದಸ್ಯ ಬಲ 342. ಅದರೆ ಆಗಸ್ಟ್ 12ಕ್ಕೆ ಈ ಅವಧಿಯು ಕೊನೆಗೊಳ್ಳಲಿದ್ದು, ಪಾಕ್ ಪ್ರಧಾನಿ ಸಂಸತ್ ವಿಸರ್ಜನೆಗೆ ಅವಧಿಗೆ ಮುನ್ನ ಅಂದರೆ ಆಗಸ್ಟ್‌

9ರಂದು ಶಿಫಾರಸು ಕಳುಹಿಸಿದ್ದಾರೆ. ಹಾಲಿ ಸರ್ಕಾರದ ಅಧಿಕಾರದ ಅವಧಿ ಪಾಕಿಸ್ತಾನದಲ್ಲಿ ಮುಗಿಯುತ್ತಿರುವ ಕಾರಣ,ಪಾಕ್‌ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗುವುದು. ನಂತರ ಜವಾಬ್ದಾರಿಯನ್ನು

ಮಧ್ಯಂತರ ಸರ್ಕಾರವು ವಹಿಸಿಕೊಳ್ಳಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್ ತಿಳಿಸಿದ್ದಾರೆ.

ಇದನ್ನೂ ಓದಿ : ಶಾಕಿಂಗ್ ನ್ಯೂಸ್ : ಬೆಂಗಳೂರಿನಲ್ಲಿ ಗಗನಕ್ಕೇರುತ್ತಿದೆ ಮನೆಗಳ ಬಾಡಿಗೆ, ಮುಂಬೈಯನ್ನೇ ಮೀರಿಸುತ್ತಿರುವ ಸಿಲಿಕಾನ್‌ ಸಿಟಿ

ಪಾಕಿಸ್ತಾನದ ಹಾಲಿ ಸರ್ಕಾರ ಇದೀಗ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಮಧ್ಯಂತರ ಸರ್ಕಾರವನ್ನು ರಚಿಸಲಾಗುತ್ತದೆ. ಆಡಳಿತ ಪಕ್ಷ & ವಿರೋಧ ಪಕ್ಷದ ನಾಯಕರು ಇದಕ್ಕಾಗಿ ಜೊತೆಯಾಗಿ ಸಭೆ ನಡೆಸಲಿದ್ದಾರೆ.

ಹಂಗಾಮಿ ಪ್ರಧಾನಿ ನೇಮಕವಾಗಿ, ಪಾಕಿಸ್ತಾನದ ಅಧಿಕಾರ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಅನ್ವಯ ನೋಡಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಪರಮಾಣು ಅಸ್ತ್ರವಾಗಿರುವ ಇಂತಹ ಚುನಾವಣೆ

ಮತ್ತಷ್ಟು ತಡವಾಗುವ ಭಯ ಎಲ್ಲರಿಗೂ ಇದೆ ಒಂದು ವೇಳೆ ಚುನಾವಣೆ ತಡ ಆಗಿದ್ದೇ ಆದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಏಕೆಂದರೆ ಪಾಕಿಸ್ತಾನ ಇದೀಗ ಇಮ್ರಾನ್ ಖಾನ್

(Imran Khan) ಜೈಲು ಸೇರಿರುವ ಕಾರಣ ಕೊತ ಕೊತ ಕುದಿಯುತ್ತಿದೆ.

ಇಮ್ರಾನ್ ಖಾನ್ ಚುನಾವಣೆಗೆ ಸ್ಪರ್ಧಿಸಲ್ಲ!

ಈಗಾಗಲೇ ಪಾಕಿಸ್ತಾನ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಕೂಡ ಇಮ್ರಾನ್ ಖಾನ್ ಬಂಧನದ ಬಳಿಕ ತಿಕ್ಕಾಟ ಜೋರಾಗಿದೆ. ಈಗಾಗಲೇ ಸಂಸತ್‌ ವಿಸರ್ಜನೆ ಮಾಡುವ ತೀರ್ಮಾನ ಕೈಗೊಂಡು

ಚುನಾವಣೆಗೆ (Election) ಸಿದ್ಧತೆ ನಡೆಸಲಾಗಿದೆ. ಶೆಹಬಾಜ್‌ ಅಧ್ಯಕ್ಷ ಆರೀಫ್ ಅಲವಿಗೆ ಸಂಸತ್‌ ವಿಸರ್ಜನೆ ಬಗ್ಗೆ ಪ್ರಧಾನಿ ಶಿಫಾರಸು ಮಾಡಿದ ಬಳಿಕ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ.

ಪಾಕ್ ಚುನಾವಣಾ ಆಯೋಗ (Election Commission) ಇಷ್ಟೆಲ್ಲದರ ನಡುವೆ ಇದೀಗ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದೆ ಎನ್ನಲಾಗುತ್ತಿದೆ. ಪಾಕಿಸ್ತಾನ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು

ನೀಡಿದೆ ಏಕೆಂದರೆ ಈ ಮಧ್ಯೆ ಆಂತರಿಕವಾಗಿ ಗಲಭೆ ಹಾಗೂ ಹಿಂಸಾಚಾರ ಭುಗಿಲೇಳುವ ಭಯ ಎಲ್ಲೆಡೆ ಆವರಿಸಿದೆ.

ಇದನ್ನೂ ಓದಿ : ಬ್ಯಾಂಕ್ ಸಾಲ ಪಡೆದವರಿಗೆ ಗುಡ್‌ನ್ಯೂಸ್‌ : ಆರ್‌ಬಿಐ ಸಿಹಿ ಸುದ್ದಿ ! ರೆಪೋ ದರದಲ್ಲಿ ಬದಲಾವಣೆ ಇಲ್ಲ, 6.5% ಮುಂದುವರಿಕೆ!

ಇದು ಪಾಕಿಸ್ತಾನ ದೇಶದ ಕಥೆ ಮತ್ತು ವ್ಯಥೆ.ಜಾಗತಿಕ ಮಟ್ಟದಲ್ಲಿ ಒಂದು ದೇಶವಾಗಿ ಪಾಕ್‌ಗೆ ಬೆಲೆಯೇ ಇಲ್ಲವಾಗಿದೆ. ಪಾಕಿಸ್ತಾನದ ರಾಜಕಾರಣಿಗಳ ವರ್ತನೆ ಬಗ್ಗೆ ಅದರಲ್ಲೂ ತುಂಬಾನೇ

ಟೀಕೆಯು ಕೇಳಿಬರುತ್ತಿದೆ. ಇಮ್ರಾನ್ ಖಾನ್ ಅವರನ್ನು ಇಂತಹ ಪರಿಸ್ಥಿತಿಯಲ್ಲಿ ಟಾರ್ಗೆಟ್ ಮಾಡಿದ ಆರೋಪ ಕೇಳಿಬರುತ್ತಿದೆ. ಹೀಗಾಗಿ ಬೇರೆ ಏನೋ ಉಪಾಯ ಮಾಡಿ ಹಾಲಿ ಸರ್ಕಾರ ಅವಧಿ

ಮುಗಿಯುವ ಮೊದಲೇ ಸಂಸತ್ ವಿಸರ್ಜನೆ ಮಾಡಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಎಲ್ಲಾ ಚರ್ಚೆಗೂ ಪಾಕಿಸ್ತಾನದ ಪ್ರಜೆಗಳು ಚುನಾವಣೆ ಮೂಲಕ ಉತ್ತರ ನೀಡಲು ಸಿದ್ಧತೆ ನಡೆಸಿದ್ದಾರೆ.

ರಶ್ಮಿತಾ ಅನೀಶ್

Exit mobile version