ಆರ್ಯನ್ ಖಾನ್ ಮತ್ತು ಕಾಜೋಲ್ ಮಗಳು ಡೇಟಿಂಗ್! ಬೀಗರಾಗುವ ಬಗ್ಗೆ ಶಾರುಖ್, ಕಾಜೋಲ್ ಮಾತು

Bollywood : ಬಾಲಿವುಡ್ನಲ್ಲಿ ಶಾರುಖ್ (Shahrukh)-ಕಾಜೋಲ್ (Kajol) ಜೋಡಿ ಅಭಿಮಾನಿಗಳಿಗೆ ಫೇವರಿಟ್ ಆಗಿದೆ. ಸಿನೆಮಾದಲ್ಲಿ ಶಾರುಖ್-ಕಾಜೋಲ್ ಮಾಡಿದ ಮೋಡಿ ಅಭಿಮಾನಿಗಳಿಗೆ ಈಗಲೂ ಮರೆಯಲು ಆಗಲ್ಲ. ಇದೀಗ ಈ ಇಬ್ಬರು ಸ್ಟಾರ್​ಗಳ ಮಕ್ಕಳು ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ (Social media) ಸುದ್ದಿಯಾಗಿದೆ ಏಕೆಂದರೆ ಅವರಿಬ್ಬರೂ ಕ್ಲೋಸ್ ಆಗಿದ್ದಾರೆ (AryanKhan NyasaDevgan dating) ಮತ್ತು ಆಗಾಗ ಪಾರ್ಟಿಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ತಾ ಇದ್ದಾರೆ.

ಇಬ್ಬರ ಡೇಟಿಂಗ್ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಮತ್ತು

ಕಾಜೋಲ್ ಮಗಳು ನ್ಯಾಸಾ ದೇವಗನ್ (Nyasa Devgan) ನಡುವೆ ಕುಚ್ ಕುಚ್ ಹೋತಾ ಹೈ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಸೋಶಿಯಲ್ (AryanKhan NyasaDevgan dating) ಮೀಡಿಯಾದಲ್ಲಿ ಇನ್ನಷ್ಟು ಚರ್ಚೆಗಳಾಗುತ್ತಿವೆ.

ಒಮ್ಮೆ ಕರಣ್ ಜೋಹರ್, ನ್ಯಾಸಾ ದೇವಗನ್ ಅವರ ಹೆಸರನ್ನು ಆರ್ಯನ್ ಖಾನ್ ಜೊತೆ ಸೇರಿಸಿದಾಗ ಶಾರುಖ್ ಖಾನ್ ಟೆನ್ಯನ್ ಆಗಿದ್ದರಂತೆ.

ಶಾರುಖ್-ಕಾಜೋಲ್ ಬರೀ ಚಿತ್ರರಂಗ ಅಲ್ಲದೆ ನಿಜ ಜೀವನದಲ್ಲಿ ಅ ಆತ್ಮೀಯ ಸ್ನೇಹಿತರಾಗಿದ್ದಾರೆ. ಆರ್ಯನ್ ಖಾನ್ ಮತ್ತು ನ್ಯಾಸಾ ದೇವಗನ್ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/pakistani-cricketer-wasimakram-statement/

ಸದ್ಯ ಕಾಜೋಲ್ ಮಗಳು ನ್ಯಾಸಾ ಲಂಡನ್‌ನಲ್ಲಿ ಓದುತ್ತಿದ್ದಾರೆ. ಮತ್ತು ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ನಿರ್ದೇಶಕರಾಗಿ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

2007ರಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಕರಣ್ ಜೋಹರ್ ನಡೆಸಿ ಕೊಡುತ್ತಿರುವ ಟಿವಿ ಶೋ ಕಾಫಿ ವಿತ್ ಕರಣ್ (Koffee With Karan) ಕಾರ್ಯಕ್ರಮದಲ್ಲಿ ಜೊತೆಯಾಗಿ ಭಾಗವಸಿದ್ದರು.

ಈ ಸಂದರ್ಭದಲ್ಲಿ 10 ವರ್ಷಗಳ ನಂತರ ಆರ್ಯನ್ ಖಾನ್ ಮತ್ತು ನ್ಯಾಸಾ ದೇವಗನ್ ಡೇಟಿಂಗ್ ಮಾಡಲು ಪ್ರಾರಂಭಿಸಿದರೆ ನಿಮ್ಮ ಪ್ರತಿಕ್ರಿಯೆ ಏನಿರುತ್ತದೆ ಎಂದು ಕೇಳಿದ್ದರು.

ಆಗ ಈ ಸಂಬಂಧದ ಕುರಿತು ಶಾರುಖ್ ಖಾನ್ ಫುಲ್ ಟೆನ್ನನ್ ಆಗಿದ್ರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾರುಖ್ ಖಾನ್, ಕಾಜೋಲ್ ಅವರ ಸಂಬಂಧಿಯಾಗಲು ನನಗೆ ಭಯವಾಗ್ತಿದೆ,

ಇಂತಹ ಒಂದು ಆಲೋಚನೆಯೇ ನನ್ನ ಮನಸ್ಸನ್ನು ನಡುಗಿಸುತ್ತದೆ. ಎಂದು ತಮಾಷೆ ಮಾಡಿದ್ದರು ಆದರೆ ವರದಿಗಳ ಪ್ರಕಾರ ಇವರಿಬ್ಬರ ಸಂಬಂಧದ ವಿಚಾರದಲ್ಲಿ ಬಾಲಿವುಡ್ ಕಿಂಗ್ ಟೆನ್ನನ್ನಲ್ಲಿದ್ದರಂತೆ.

ಕರಣ್ ಜೋಹರ್ ಅದೇ ಪ್ರಶ್ನೆಯನ್ನು ಕಾಜೋಲ್‌ಗೆ ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಕಾಜೋಲ್ ತುಂಬಾ ಕಂಫರ್ಟಬಲ್ ಆಗಿ ಇದ್ದರು ಮತ್ತು ದಿಲ್ವಾಲೇ ದುಲ್ಲನಿಯಾ ಲೇ ಜಾಯೇಂಗೇ ಎಂದು ಈ ಸಂಬಂಧದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ನಗುತ್ತಲೇ ಹೇಳಿದ್ದರು.

Exit mobile version