ಜೈಶಂಕರ್ : “ಟೂರ್ನಮೆಂಟ್‌ಗಳು ಬರುತ್ತಲೇ ಇರುತ್ತವೆ, ಸರ್ಕಾರದ ನಿಲುವು ನಿಮಗೆ ತಿಳಿದಿದೆ?”

Delhi: ಗಡಿಯಾಚೆಗಿನ ಭಯೋತ್ಪಾದನೆಯನ್ನು ಎಂದಿಗೂ ಸಾಮಾನ್ಯಗೊಳಿಸಬಾರದು, ಟೂರ್ನಮೆಂಟ್‌ಗಳು ಬರುತ್ತಲೇ ಇರುತ್ತವೆ ಮತ್ತು ಸರ್ಕಾರದ ನಿಲುವು ನಿಮಗೆ ತಿಳಿದಿದೆ,
ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (Asia Cup Tournament Jaishankar) ಹೇಳಿದ್ದಾರೆ.

2023ರ ಏಷ್ಯಾ ಕಪ್ ಟೂರ್ನಿಗಾಗಿ (Asia Cup Tournament Jaishankar) ಭಾರತೀಯ ಆಟಗಾರರು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ ಘೋಷಿಸಿದ ನಂತರ ಈ ಕುರಿತು ಸ್ಪಷ್ಟನೆ ನೀಡಿರುವ ಅವರು,

ಗಡಿಯಾಚೆಗಿನ ಭಯೋತ್ಪಾದನೆಯನ್ನು ಎಂದಿಗೂ ಸಾಮಾನ್ಯಗೊಳಿಸಬಾರದು.

ಇದನ್ನೂ ನೋಡಿ: https://fb.watch/hjRbTXMq8_/

ಒಂದು ದೇಶಕ್ಕೆ ಭಯೋತ್ಪಾದನೆಯ ಹಕ್ಕಿದೆ ಎಂಬುದನ್ನು ನಾವು ಎಂದಿಗೂ ಒಪ್ಪಿಕೊಳ್ಳಬಾರದು ಎಂದು ನಾನು ಪುನರಾವರ್ತಿಸಲು ಬಯಸುತ್ತೇನೆ.

ನಾವು ಅದನ್ನು ಕಾನೂನುಬಾಹಿರಗೊಳಿಸಬೇಕಾಗಿದೆ ಮತ್ತು ಅದಕ್ಕಾಗಿ ಅಂತಹ ದೇಶದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೇರಬೇಕು.

ಭಯೋತ್ಪಾದನೆಯಿಂದಾಗಿ ನಾವು ಸಾಕಷ್ಟು ನೋವುಂಡಿದ್ದೇವೆ. ಹೀಗಾಗಿ ನಾವು ಭಯೋತ್ಪಾದನೆಯ (Terrorism) ವಿರುದ್ದದ ಹೋರಾಟದ ನಾಯಕತ್ವವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆ ಪುನರಾರಂಭದ ವಿಷಯದ ಕುರಿತು

https://vijayatimes.com/chandrababu-2024-last-election/

ಪ್ರತಿಕ್ರಿಯಿಸಿದ ಜೈಶಂಕರ್,”ಇದೊಂದು ಸಂಕೀರ್ಣ ವಿಷಯವಾಗಿದೆ. ನಾನು ನಿಮ್ಮ ತಲೆಯ ಮೇಲೆ ಬಂದೂಕು ಇಟ್ಟರೆ ನೀವು ನನ್ನೊಂದಿಗೆ ಮಾತನಾಡುತ್ತೀರಾ?

ನಿಮ್ಮ ನೆರೆಹೊರೆಯವರು ಬಹಿರಂಗವಾಗಿ ಭಯೋತ್ಪಾದನೆಗೆ ಸಹಾಯ ಮಾಡಿದರೆ ಮಾತನಾಡುತ್ತೀರಾ?  

ಇದನ್ನೂ ಓದಿ: https://vijayatimes.com/ct-ravi-statement-about-dattapeeta/ 

ಉಗ್ರರ ನಾಯಕರು ಯಾರು? ಅವರ ಶಿಬಿರಗಳು ಎಲ್ಲಿವೆ? ಎಂಬ ಸಂಗತಿ ನಿಗೂಢವಾಗಿಲ್ಲ, ನೆರೆಹೊರೆಯವರು ಇನ್ನೊಬ್ಬರ ವಿರುದ್ಧ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದ್ದಾರೆ ಎಂಬುದಕ್ಕೆ ಇನ್ನೊಂದು ಉದಾಹರಣೆ ನೀಡಬೇಕಾಗಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನದ (Pakisthan) ವಿರುದ್ದ ವಾಗ್ದಾಳಿ ನಡೆಸಿದರು.

ಇನ್ನು ಏಷ್ಯಾಕಪ್‌ ಟೂರ್ನಿಯಾಗಿ ಭಾರತ ತಂಡ (Team India) ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಬಿಸಿಸಿಐ ಹೇಳಿದ್ದು, ತಟಸ್ಥ ಸ್ಥಳದಲ್ಲಿ ಮಾತ್ರ ನಾವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುತ್ತೇವೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.
Exit mobile version