ವಿಷವಾದ ಸೂಳೆಕೆರೆ: ಏಷ್ಯಾದ 2ನೇ ಅತಿ ದೊಡ್ಡ ಕೆರೆಗೆ ಬೇಕು ಕಾಯಕಲ್ಪ

Davanagere: ದಾವಣಗೆರೆಯ ಸೂಳೆಕೆರೆ (Asias 2nd lake polluted) ಕೆರೆಯು ಏಷ್ಯಾದ 2ನೇ ಅತಿ ದೊಡ್ಡ ಕೆರೆಯೆಂದೆನಿಸಿದ್ದು, ನೀರು ಮಲಿನಗೊಂಡಿರುವ ಕಾರಣದಿಂದ ದಾವಣಗೆರೆ

(Davanagere) ಹಾಗೂ ಚಿತ್ರದುರ್ಗ (Chitradurga) ಜಿಲ್ಲೆಗಳಿಗೆ ಅಲ್ಲಿಂದ ಸರಬರಾಜಾಗುತ್ತಿರುವ ನೀರನ್ನು ನಿಲ್ಲಿಸಲಾಗಿದೆ. ಈ ಕೆರೆಯನ್ನು ವಿಷಮುಕ್ತವಾಗಿಸಲು ಹಲವಾರು ಕ್ರಮಗಳನ್ನು ಸರ್ಕಾರ

ಕೈಗೊಳ್ಳಬೇಕಿದೆ. ಇದರಿಂದ ಈ ಕೆರೆಯ ನೀರನ್ನು ಕುಡಿಯುವ ನೀರನ್ನಾಗಿ ಮಾತ್ರ ಬದಲಾಯಿಸುವುದು ಮಾತ್ರವಲ್ಲ ಈ ತಾಣವನ್ನು ಸುಂದರ ಪ್ರವಾಸಿ ತಾಣವನ್ನಾಗಿಯೂ ಬದಲಾಯಿಸಬಹುದಾಗಿದೆ.

ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಕುಡಿಯುವ ನೀರು, ಕೃಷಿ ಹಾಗೂ ಮೀನುಗಾರಿಕೆ ಜೊತೆಯಲ್ಲಿ ಅದ್ಭುತ ಲ್ಯಾಂಡ್‌ ಸ್ಕೇಪ್‌ನೊಂದಿಗೆ (Land Scape)

ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿಗೆ ಹೆಸರಾಗಿರುವ ಚನ್ನಗಿರಿ (Channagiri) ತಾಲೂಕಿನ ಸೂಳೆಕೆರೆ ನೀರು ವಿಷವಾಗಿರುವ ಕಾರಣ ಸುದ್ದಿಯಲ್ಲಿದೆ.

ಲಕ್ಷಾಂತರ ಮಂದಿ ಕುಡಿವ ನೀರಿನ ದಾಹ ತಣಿಸುವ ಈ ಜಲಮೂಲದ ಕೆರೆಗೆ ಹೊಸ ನೀರು ಹರಿಯುವುದರ ಜೊತೆ ಬಹುಮುಖಿಯನ್ನು ಕಾಪಾಡಲು ಒಂದಷ್ಟು ಆರ್ಥಿಕ ಸಂಪನ್ಮೂಲ ಒಳಗೊಂಡ

ಮಹಾಯೋಜನೆ ಅಗತ್ಯವಿದ್ದು, ಸೂಳೆಕೆರೆ (Sulekere) ಈ ಹಿಂದಿನಿಂದಲೂ ಬಹಳ ಉಪಯುಕ್ತ ಕೆರೆಯಾಗಿದೆ. ಇದಕ್ಕಿಂತ ಮೊದಲು ಈ ಕೆರೆ ಮೀನುಗಾರಿಕೆ, ಕೃಷಿ, ಸುತ್ತಲಿನ ಹಳ್ಳಿಗಳ ಜನರು,

ಪ್ರಾಣಿ, ಪಕ್ಷಿಗಳಿಗೆ ಹಾಗೂ ಕುಡಿವ ನೀರಿಗೆ (Asias 2nd lake polluted) ಮಾತ್ರ ಆಸರೆಯಾಗಿತ್ತು.

ಆ ನಂತರ ಇದೊಂದು ಜೀವ ಜಲ ಕೆರೆಯನ್ನಾಗಿ ಬಳಸಿಕೊಳ್ಳಲಾಯಿತು. ಮೊದಲು ಇಲ್ಲಿಯೇ ಹತ್ತಿರದ ಸಂತೆಬೆನ್ನೂರಿಗೆ ಕುಡಿವ ನೀರಿಗೆ ಆಸರೆಯಾಯಿತು. ತದ ನಂತರ ಚಿತ್ರದುರ್ಗ, ಚನ್ನಗಿರಿ,

ಹೊಳಲ್ಕೆರೆ (Holalkere), ಜಗಳೂರು ತಾಲ್ಲೂಕು ಸೇರಿ ಅನೇಕ ಹಳ್ಳಿಗಳಿಗೆ ಕುಡಿವ ನೀರನ್ನು ಒದಗಿಸುತ್ತಿದೆ. ಇದರ ಜತೆ ಈಗ ಮೀನುಗಾರಿಕೆ, ಬೋಟಿಂಗ್‌ (Boating) ವ್ಯವಸ್ಥೆ ಮತ್ತು ಪ್ರಕೃತಿಯ

ಸೌಂದರ್ಯದಿಂದಾಗಿ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದ್ದು, ಸುತ್ತಲಿನ ನೂರಾರು ಎಕೆರೆಗೆ ನೀರುಣಿಸಿ ಕೃಷಿಗೂ ಆಸರೆಯಾಗಿದೆ.

ಹೀಗೆ ಬಹುಪಯೋಗಿ ಈ ಕೆರೆಯ ನೀರು ಬ್ಯಾಕ್ಟೀರಿಯ ಯುಕ್ತವಾಗಿದೆ, ಕುಡಿಯಲು ಯೋಗ್ಯವಾಗಿಲ್ಲಎಂಬ ವರದಿ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ನೀರು ವಿಷವಾಗಲು ಕಾರಣಗಳ ಪತ್ತೆ ಹಚ್ಚುವ ಕೆಲಸವೂ

ಭರದಿಂದ ಸಾಗಿದೆ. ಸುತ್ತಲಿನ ಗ್ರಾಮಗಳ ತ್ಯಾಜ್ಯ ನೀರು ಮತ್ತು ಬೂದು ನೀರು ಕೆರೆಗೆ ಹರಿದು ಬರುತ್ತಿರುವುದು ಮುಖ್ಯ ಕಾರಣವಾಗಿ ಗುರುತಿಸಿರುವ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ.

ಸುತ್ತ ಮುತ್ತಲಿನ ಭದ್ರಾ ಚಾನಲ್‌ನ (Bhadra channel) ಅಚ್ಚುಕಟ್ಟು ಪ್ರದೇಶ ಮತ್ತು ಕೆರೆಗೆ ನೈಸರ್ಗಿಕವಾಗಿ ನೀರು ಹರಿದು ಬರುವ ತಾಣಗಳಲ್ಲೂ ಹೆಚ್ಚಾಗಿ ಬೆಳೆಯುತ್ತಿರುವ ಭತ್ತದ ಬೆಳೆಗೆ ಬಳಸುತ್ತಿರುವ

ಕ್ರಿಮಿನಾಶಕ ಮತ್ತು ರಸಗೊಬ್ಬರದ ನೀರು ಬಸಿ ಮೂಲಕ ಕೆರೆ ಸೇರಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಒಟ್ಟಾರೆ ನೀರು ಕುಲಷಿತ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಾನಾ

ಕ್ರಮಗಳಿಗೆ ಮುಂದಾಗಿದೆ.

ರಜನಿ ರಿಯಾಕ್ಷನ್‌ : ಯೋಗಿ ಕಾಲಿಗೆ ಬಿದ್ದಿದ್ದೇಕೆ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟ ರಜನಿಕಾಂತ್

ಏಕೆಂದರೆ ಇದು ಇಲ್ಲಿಯ ಜನರ ಜೀವದ ಪ್ರಶ್ನೆಯಾಗಿದ್ದು, ಈ ಬಗ್ಗೆ ಶಾಸಕರು ಅಧಿಕಾರಿಗಳ ಜೊತೆಯಲ್ಲಿ ಈ ಕೆರೆಯ ಉಪಯೋಗ ಪಡೆಯುವ ಎಲ್ಲರೂ ಕೂಡ ಈ ಬಗ್ಗೆ ಧ್ವನಿಗೂಡಬೇಕಿದೆ.

ಒಂದು ಸುಂದರ ಕೆರೆಯನ್ನು ಅದರ ಸೌಂದರ್ಯವನ್ನು ಯತಾವತ್ತಾಗಿ ಉಳಿಸಿಕೊಂಡು ಅದರ ಉಪಯೋಗ ಜನರಿಗೆ ಸಿಗುವಂತೆ ಮಾಡುವ ಯೋಜನೆಯೊಂದು ಸಿದ್ಧಗೊಳ್ಳಬೇಕಿದೆ.

ಇಂತಹ ಅನಾಹುತಗಳು ಮುಂದೆಯೂ ಜರುಗದಂತೆ ಎಚ್ಚರಿಕೆ ವಹಿಸಲು ಮತ್ತು ಈ ಕೆರೆ ಬಹುಪಯೋಗಿ ಆಗಿದ್ದು ಮೀನಗಾರಿಕೆ, ಕೃಷಿ ಬಳಕೆ ಮತ್ತು ಕುಡಿವ ನೀರಿಗೆ ಧಕ್ಕೆ ಆಗದಂತೆ ಕೆರೆಯ ಹೊರಗೆ ಒಂದು

ಪ್ರವಾಸಿ ತಾಣವಾಗಿ ರೂಪಿಸುವುದು, ಇದರ ಒತ್ತುವರಿ ತಡೆದು ಗಡಿ ರೇಖೆಯನ್ನು ಗುರುತಿಸುವುದು ಸೇರಿದಂತೆ ಕೆರೆಯ ಸಂರಕ್ಷಣೆಗೆ ಒಂದು ಮೆಗಾ ಯೋಜನೆ ರೂಪಿಸುವ ತುರ್ತು ಹಿಂದೆಂದಿಗಿಂತ ಹೆಚ್ಚಿದೆ.

ಡಿಎಚ್‌ಒ ಡಾ.ನಾಗರಾಜ್‌ (DHO Dr. Nagaraj) ಅವರು ಇನ್ನು ನೀರಿನ ಪರೀಕ್ಷೆಯ ವರದಿ ಬಂದಿದ್ದು ಇದರಲ್ಲಿ ಏರೋಮಾನಸ್‌ ಸೋಬ್ರಿಯಾ (Aeromonas sobria) ಎಂಬ ಬ್ಯಾಕ್ಟೀರಿಯಾ

(Bacteria) ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಈ ಬ್ಯಾಕ್ಟಿರೀಯಾ ವಾತಾವರಣದಲ್ಲಿಇರುತ್ತದೆ. ಇದು ನೀರು ಸೇರಿ ಡೆವಲಪ್‌ (Develop) ಆಗುತ್ತೆ. ಈ ಬ್ಯಾಕ್ಟಿರಿಯಾ ಇರುವ ನೀರನ್ನು ಕುಡಿದರೆ

ಹ್ಯುಮಿನಿಟಿ (Humanity) ಕಡಿಮೆ ಇರುವವರು, ವಯಸ್ಸಾದರು ಮತ್ತು ಮಕ್ಕಳಿಗೆ ವಾಂತಿಭೇದಿ ಆಗುವ ಸಾಧ್ಯತೆ ಇರುತ್ತದೆ.

ಸುತ್ತ ಮುತ್ತಲಿನ ಗ್ರಾಮಗಳ ತ್ಯಾಜ್ಯ ಮತ್ತು ಬೂದು ನೀರು ಸೂಳೆಕೆರೆ ಸೇರುತ್ತಿದೆ ಎಂಬ ವರದಿ ಹಿನ್ನೆಲೆ ದಾವಣಗೆರೆ ಜಿಪಂ ಸಭಾಗಂಣದಲ್ಲಿಸಿಇಒ (CEO) ಅಧ್ಯಕ್ಷತೆಯಲ್ಲಿಆ.24 ರಂದು

ತಾಪಂ ಇಒ (EO), ಕೆರೆಗೆ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (Engineer), ತಾಪಂ ಎಂಜಿನಿಯರ್‌, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ

ಎಂಜಿನಿಯರ್‌ಗಳು ಮತ್ತು ಪಿಡಿಒಗಳ (PDO) ಸಭೆ ಕರೆಯಲಾಗಿದೆ.

ಭವ್ಯಶ್ರೀ ಆರ್.ಜೆ

Exit mobile version