English English Kannada Kannada

Preetham Kumar P

ಪಾಕ್‌ ವಿರುದ್ದ ಭಾರತ ಸೋತ ಹಿನ್ನಲೆ, ಅಭಿಮಾನಿ ಹೃದಯಾಘಾತದಿಂದ ಸಾವು

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮದ ಉದಯ್ (55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಟಗಾರರಾಗಿದ್ದ ಉದಯ್ ಅವರು ನಿನ್ನೆ ರಾತ್ರಿ ಭಾರತ ಮತ್ತು ಪಾಕ್ ಪಂದ್ಯವನ್ನು ನೋಡುತ್ತಿದ್ದು. ಭಾರತ ತಂಡ ಸೋಲನುಭವಿಸಿದ 10 ನಿಮಿಷಗಳಲ್ಲಿ ಉದಯ್ ಅವರಿಗೆ ಹೃದಯಾಘಾತವಾಗಿದೆ.

ಪ್ರಾಥಮಿಕ ಶಾಲೆ ಆರಂಭ ಹಿನ್ನಲೆ, ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಿದ ಶಿಕ್ಷಕರು

ಕೊರೊನಾ ಹಿನ್ನಲೆಯಲ್ಲಿ ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿರಬೇಕು ಎಂದು ಸೂಚಿಸಲಾಗಿದ್ದ ಹಿನ್ನೆಲೆಯಲ್ಲಿ ಪೋಷಕರ ಒಪ್ಪಿಗೆ ಪತ್ರ ನೀಡಿದ ಮಕ್ಕಳು ಸಾಲಾಗಿ ನಿಂತು ಅದನ್ನು ಶಾಲಾ ಸಿಬ್ಬಂದಿಗೆ ತೋರಿಸಿ ಒಳ ಬರುತ್ತಿದ್ದರು. ಬಹುತೇಕ ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಗಳನ್ನು ಆರಂಭಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಆರಂಭವಾದ ಬಹುತೇಕ ತರಗತಿಗಳಿಗೆ ಬಹುತೇಕ ಹಾಜರಾತಿ ಕಂಡುಬಂದಿದೆ

ಬೈಕಿಗೆ ಟಿಪ್ಪರ್ ಡಿಕ್ಕಿ ತಾಯಿ-ಮಗು ಸ್ಥಳದಲ್ಲೇ ಸಾವು

ಮಾರತ್ ಹಳ್ಳಿ ಬೈಕ್ ನಲ್ಲಿ ಹೋಗುವಾಗ ಹಿಂಬದಿಯಿಂದ ಟಿಪ್ಪರ್ ಲಾರಿ ವೇಗವಾಗಿ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ಬೈಕ್ ಗೆ ಗುದ್ದಿದೆ. ಪರಿಣಾಮ ರಸ್ತೆಯಲ್ಲಿ ಕೆಳಗೆ ಬಿದ್ದು ರಕ್ತಸ್ರಾವವಾಗಿ ಬಿದ್ದಿದ್ದಾನೆ. ಶ್ರೀದೇವಿ ಹಾಗೂ ದೀಕ್ಷಿತ್ ಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ‌. ಹೆಲ್ಮೆಟ್ ಧರಿಸಿದ್ದರಿಂದ ಶಿವಕುಮಾರ್ ದುರ್ಘಟನೆಯಿಂದ ಪಾರಾಗಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಆರಂಭಿಕ ಆಘಾತವೇ ಪಂದ್ಯ ಸೋಲಿಗೆ ಕಾರಣ – ವಿರಾಟ್‌ ಕೊಹ್ಲಿ

10 ಓವರ್ ನಂತರ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಕಾರಣ ನಮಗೆ ಬೇಕಾಗಿದ್ದ 15ರಿಂದ 20 ಅಧಿಕ ರನ್ ಪಡೆದುಕೊಳ್ಳಲಾಗಲಿಲ್ಲ. ಇನ್ನು ಪಾಕ್ ಬ್ಯಾಟಿಂಗ್ ವೇಳೆ ಅವರ ಮೊದಲ 3 ವಿಕೆಟ್‍ಗಳನ್ನು ವೇಗವಾಗಿ ಪಡೆಯಬೇಕಾಗಿದ್ದ ಅನಿವಾರ್ಯತೆ ಇತ್ತು. ಆದರೆ ಆ ಅವಕಾಶವನ್ನು ಎದುರಾಳಿ ತಂಡ ನಮಗೆ ನೀಡಲೇ ಇಲ್ಲ, ಅವರು ಉತ್ತಮ ಕ್ರಿಕೆಟ್ ಆಡಿದರು ಎಂದು ನಾಯಕ ಕೊಹ್ಲಿ ತಿಳಿಸಿದರು

ಪಾಕ್ ವಿರುದ್ದ ಭಾರತ ಸೋಲು ಹಿನ್ನಲೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ನಿನ್ನೆ ಭಾರತ ಮತ್ತು ಪಾಕಿಸ್ತಾನ ನಡುವೆ ಏರ್ಪಟ್ಟ ಟಿ -20 ಪಂದ್ಯಾಟದಲ್ಲಿ ಭಾರತ ಸೋತ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಪ್ರಸಕ್ತ ಪಂಜಾಬ್ ಭಾಯಿ ಗುರುದಾಸ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

azam siddique

ಪಾಕ್‌ ಗೆಲುವು ದಾಖಲಿಸಿದ್ದಕ್ಕೆ ಗಳಗಳನೆ ಅತ್ತ ಅಜಂ ಸಿದ್ದಿಕ್ಕಿ. ಯಾರು ಈ ಅಜಂ ?

ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಪದೇ ಪದೇ ಸೋಲು ಕಾಣುತ್ತಿದ್ದ ಪಾಕಿಸ್ತಾನ ತಂಡಕ್ಕೆ ಬಾಬರ್ ಅಜಂ ನಾಯಕತ್ವದಲ್ಲಿ ಐತಿಹಾಸಿಕ ಗೆಲುವು ದಕ್ಕಿದೆ. ಇದೇ ಖುಷಿಯಲ್ಲಿ ಬಾಬರ್ ಅಜಂ ತಂದೆ ಅಜಂ ಸಿದ್ದಕಿ ಕ್ರೀಡಾಂಗಣದಲ್ಲಿಯೇ ಆನಂದಭಾಷ್ಪ ಹರಿಸಿದ್ದಾರೆ.

ಸರ್ಕಾರಕ್ಕೆ ತಲೆನೋವಾಗಿರುವ ಶಿಕ್ಷಕರ ಪ್ರತಿಭಟನೆ

ಇನ್ನೂ ಶಾಲೆ ಪ್ರಾರಂಭವಾಗುತ್ತಿದ್ದಂತೆ ಇತ್ತ ಸರ್ಕಾರಿ ಶಾಲಾ ಶಿಕ್ಷಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆಗೆ ಕರೆಕೊಟ್ಟಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು 1 ಲಕ್ಷ 63 ಸಾವಿರ ಶಿಕ್ಷಕರು ಇದ್ದಾರೆ. ಇವರೆಲ್ಲಾ  ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ ಶಾಲೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನಿಂದ ಮಹಿಳೆ ಮೇಲೆ ಹಲ್ಲೆ

ಹತ್ತು ಜನ ಬೌನ್ಸರ್ ಗಳೊಂದಿಗೆ ಸ್ನೇಹಿತ್ ರಜತ್ ಎಂಬುವವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ಇದಕ್ಕೆ ಪುಷ್ಠಿ ನೀಡುವಂತೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಅಸಲಿಗೆ ರಜತ್ ಮನೆ ಮುಂಭಾಗದಲ್ಲಿ ಅನುರಾಧ  ಕಸ ಗುಡಿಸುತ್ತಿದ್ದರು. ಈ ಕಸದ ಧೂಳು ತಮ್ಮ ಮೈಮೇಲೆ  ಬಿದ್ದಿದೆ..ಕಣ್ಣಿಗೆ ಬಿದ್ದಿದೆ ಎನ್ನುವುದು ಸ್ನೇಹಿತ್ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅನುರಾಧರ ಮೇಲೆ ಹಲ್ಲೆ ಮಾಡಿದ್ದಾರೆ.

ಡೆಲ್ಟಾ ರೂಪಾಂತರಿ ವೈರಸ್‌ ಪತ್ತೆ, ಡೆಲ್ಟಾಗಿಂತಲೂ ಶೇ 10ರಷ್ಟು ವೇಗವಾಗಿ ಹರಡಬಲ್ಲ ವೈರಸ್‌

ಕಳೆದ ವಾರ ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿ ಡೆಲ್ಟಾ ರೂಪಾಂತರಿಯ ಸಬ್ ಟೈಪ್ ಕೊರೋನಾ ವೈರಾಣು ದೇಶದಲ್ಲಿ ಹರಡುತ್ತಿರುವುದನ್ನು ಘೋಷಿಸಿತ್ತು. ಅಮೆರಿಕಾದ ಬಳಿಕ ಬ್ರಿಟನ್ ಜಾಗತಿಕವಾಗಿ ಅತಿ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳನ್ನು ವರದಿ ಮಾಡುತ್ತಿರುವ ರಾಷ್ಟ್ರವಾಗಿದೆ. ಸೆ.27 ರಂದು ಪ್ರಾರಂಭವಾದ ವಾರದಲ್ಲಿ ಸಾರ್ಸ್ ಸಿಒವಿ2 ನ ಎಲ್ಲಾ ಜೆನೆಟಿಕ್ ಸೀಕ್ವೆನ್ಸ್ ಗಳ ಪೈಕಿ ಹೊಸದಾಗಿ ಪತ್ತೆಯಾಗಿರುವ ವೈರಾಣು ತಳಿ ಶೇ.6 ರಷ್ಟು ಇದೆ.

ಟಿ20 ವಿಶ್ವಕಪ್ : ಪಾಕಿಸ್ತಾನಕ್ಕೆ ಐತಿಹಾಸಿಕ ಗೆಲವು

ಮೊದಲ ಓವರ್‌ನಲ್ಲೇ ಅನುಭವಿ ಓಪನರ್‌ ರೋಹಿತ್‌ ಶರ್ಮಾ ಇನ್‌ಸ್ವಿಂಗ್‌ ಎಸೆತವನ್ನು ಅರಿಯಲು ವಿಫಲರಾಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಬಳಿಕ 3ನೇ ಓವರ್‌ನ ಮೊದಲ ಎಸೆತದಲ್ಲಿ ಕೆಎಲ್‌ ರಾಹುಲ್‌ ಕ್ಲೀನ್‌ ಬೌಲ್ಡ್‌ ಆಗಿದ್ದರು. ಆದರೆ, ಈ ಎಸೆತ ನೋ ಬಾಲ್‌ ಆಗಿತ್ತು ಎಂಬುದು ಈಗ ಭಾರಿ ವಿವಾದ ಸೃಷ್ಟಿಸಿದೆ. ರಾಹುಲ್‌ ಔಟ್‌ ಆದ ಎಸೆತದಲ್ಲಿ ಬೌಲರ್‌ ಅಫ್ರಿದಿ ಗೆರೆ ದಾಟಿ ಚೆಂಡನ್ನು ಎಸೆದಿರುವ ಚಿತ್ರಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

Submit Your Article