ಪೈಲ್ಸ್ ಸಮಸ್ಯೆಗೆ ಆಯುರ್ವೇದದ ಪರಿಹಾರ: ವೈದ್ಯರು ಹೇಳೋದೇನು ?

ಪೈಲ್ಸ್ (Piles) ಸಮಸ್ಯೆಯನ್ನು ಅನೇಕರು ನಿರ್ಲಕ್ಷ್ಯ ಮಾಡುತ್ತಾರೆ. ಯಾರೊಂದಿಗೂ (Ayurvedic Remedy for Piles) ಹೇಳಿಕೊಳ್ಳುವುದಿಲ್ಲ. ಅದರ ಕುರಿತು ಮಾತನಾಡಲು

ಕೂಡಾ ಕೆಲವರು ಮುಜುಗರ ಪಡುತ್ತಾರೆ. ಆದರೆ ಪೈಲ್ಸ್ ಸಮಸ್ಯೆ ಹೆಚ್ಚಾದಂತೆ ಅದು ನೀಡುವ ನೋವಿನ ತೀವ್ರತೆಯೂ ಹೆಚ್ಚಾಗುವುದರಿಂದ ಭಾರೀ ನೋವನ್ನು ಅನುಭವಿಸಬೇಕಾಗುತ್ತದೆ.

ಹೀಗಾಗಿ ಆರಂಭಿಕ ಹಂತದಲ್ಲೇ ಪೈಲ್ಸ್ ಲಕ್ಷಣಗಳನ್ನು ಗುರುತಿಸಿ, ಸೂಕ್ತ (Ayurvedic Remedy for Piles) ಚಿಕಿತ್ಸೆ ಪಡೆಯುವುದು ಉತ್ತಮ.

ಇನ್ನು ಪೈಲ್ಸ್ ಸಮಸ್ಯೆಗೆ ಮುಖ್ಯ ಕಾರಣ ಏನೆಂದು ನೋಡಿದರೆ, ಮಲಬದ್ಧತೆ, ಜಂಕ್ ಫುಡ್ (Junkfood) ಮತ್ತು ಮಸಾಲೆಯುಕ್ತ ಆಹಾರಗಳ ಅತಿಯಾದ ಬಳಕೆ, ಕರುಳಿನ ಚಲನೆಯ

ಮೇಲೆ ಹೆಚ್ಚಿನ ಒತ್ತಡ, ಇದು ಆನುವಂಶಿಕ ಕಾಯಿಲೆಯಾಗಿದ್ದು, ಕುಟುಂಬದಲ್ಲಿ ಯಾರಿಗಾದರೂ ಇದು ಮೊದಲು ಇದ್ದರೆ ನಂತರ ನೀವು ಸಹ ಇದನ್ನು ಹೊಂದಬಹುದು, ಅತಿಸಾರ ಅಥವಾ

ಹೊಟ್ಟೆನೋವು, ಅನಾರೋಗ್ಯಕರ ಜೀವನಶೈಲಿ, ದೈಹಿಕ ಚಟುವಟಿಕೆಯಲ್ಲಿ ಇಳಿಕೆ, ಕಡಿಮೆ ನೀರು ಸೇವನೆ, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು.

ಚಂದ್ರನಲ್ಲಿ ಚಿನ್ನ: ಚಂದ್ರನ ಮೇಲೆ ಗಂಧಕ ಪತ್ತೆ ಹಚ್ಚಿದ ಪ್ರಜ್ಞಾನ್ ರೋವರ್, ದ್ರವರೂಪದ ಚಿನ್ನ ಇರೋ ಸಾಧ್ಯತೆ !

ಹೀಗೆ ಅನೇಕ ಕಾರಣಗಳಿಂದ ಪೈಲ್ಸ್ ಬರುತ್ತದೆ. ಇನ್ನು ಪೈಲ್ಸ್ (Piles) ಸಮಸ್ಯೆಗೆ ಆಯುರ್ವೇದದಲ್ಲಿ ಉತ್ತಮ ಚಿಕಿತ್ಸೆ ಇದೆ. ಪೈಲ್ಸ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಕ್ಷರ ಸೂತ್ರ ಚಿಕಿತ್ಸೆಯನ್ನು

ಆಯುರ್ವೇದದಲ್ಲಿ ನೀಡಲಾಗುತ್ತದೆ. ಇನ್ನು ಈಗಾಗಲೇ ಪೈಲ್ಸ್ ಆಪರೇಷನ್ (Operation) ಮಾಡಿದ ನಂತರವೂ ಈ ಸಮಸ್ಯೆ ಮತ್ತೆ ಕಾಣಿಸಿಕೊಂಡಿದ್ದರೆ, ಕ್ಷರ ಸೂತ್ರದ ಚಿಕಿತ್ಸೆ ಪಡೆಯಬಹುದು.

ಇದು ಸಂಪೂರ್ಣವಾಗಿ ಪೈಲ್ಸ್ ಅನ್ನು ನಿರ್ಮೂಲನೆ ಮಾಡುತ್ತದೆ.

ಕ್ಷರ-ಸೂತ್ರ ತಂತ್ರ ಎಂದರೇನು?
ಕ್ಷರ-ಸೂತ್ರವು ಆಯುರ್ವೇದ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಪೈಲ್ಸ್ ಚಿಕಿತ್ಸೆಯಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಪೈಲ್ಸ್ಗೆ ಉತ್ತಮ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಭಾರತದ ಆಯುಷ್

ಸಚಿವಾಲಯವೂ ಇದನ್ನು ಪರಿಣಾಮಕಾರಿ ಚಿಕಿತ್ಸೆ ಎಂದು ಪರಿಗಣಿಸಿದೆ.

ಕ್ಷರ-ಸೂತ್ರ ತಂತ್ರದ ಪ್ರಯೋಜನಗಳೇನು?
ಒಂದೇ ದಿನದಲ್ಲಿ ಚಿಕಿತ್ಸೆ ಪಡೆಯಬಹುದು. ಇದರಿಂದ ದೈನಂದಿನ ಕಾರ್ಯಗಳಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಇದು ಪೈಲ್ಸ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ.

ಯಾವುದೇ ನೋವು ಆಗುವುದಿಲ್ಲ ಮತ್ತು ಕ್ಷರ-ಸೂತ್ರ ಚಿಕಿತ್ಸೆ ಅತ್ಯಂತ ಅಗ್ಗದ ಮತ್ತು ಸುರಕ್ಷಿತ ಚಿಕಿತ್ಸೆಯಾಗಿದೆ. ಆದರೆ ಉತ್ತಮ ಆಯುರ್ವೇದ ಕೇಂದ್ರಗಳಲ್ಲಿ ಮಾತ್ರ ಈ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ನಾಟಿ ವೈದ್ಯರು ಎಂದು ಹೇಳಿಕೊಳ್ಳುವ ನಕಲಿ ವೈದ್ಯರ ಬಳಿ ಈ ಚಿಕಿತ್ಸೆ ಪಡೆಯುವ ಮೊದಲು ಎಚ್ಚರಿಕೆ ವಹಿಸಬೇಕು. ತಜ್ಞ ಆಯುರ್ವೇದ ವೈದ್ಯರ ಬಳಿ ಮಾತ್ರ ಈ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ.

ಮಹೇಶ್

Exit mobile version