ಸೇಬಿನ ಸಿಪ್ಪೆಯನ್ನು ಎಸೆಯುತ್ತಿದ್ದರೆ ಈಗಲೇ ನಿಲ್ಲಿಸಿ! ಸಿಪ್ಪೆಯಿಂದ ಸಿಗುವ ಪ್ರಯೋಜನ ಹೀಗಿದೆ ನೋಡಿ.

ನಮ್ಮಲ್ಲಿ ಹಲವರು ಇಂದಿಗೂ ಕೂಡ ಸೇಬಿನ ಹಣ್ಣು ಎಂದರೆ ಅತೀವ ಆಸೆಯನ್ನು ಹೊಂದಿದ್ದಾರೆ. ಮಾರುಕಟ್ಟೆಯಲ್ಲಿ ಸೇಬು ದುಬಾರಿಯಾಗಿದ್ದರು ಕೂಡ ಹಿಂದೆ ಮುಂದೆ ನೋಡದೇ ಖರೀದಿ ಮಾಡಿಕೊಂಡು ಬಂದು ತೊಳಯದೆ ತಿನ್ನುವವರ ಸಂಖ್ಯೆ ಅಪಾರವಾಗಿದೆ. ಆದರೆ ಹಲವರು ಇಂದಿಗೂ ಸೇಬಿನ ಹಣ್ಣಿನ ಮೇಲಿರುವ ಸಿಪ್ಪೆಯನ್ನು ತೆಗೆದು ಹಣ್ಣನ್ನು ಮಾತ್ರ ಸೇವಿಸುತ್ತಾರೆ. ಆದರೆ ಅದು ತಪ್ಪು! ಸೇಬಿನ ಸಿಪ್ಪೆಯನ್ನು ಎಸಯದೆ ಅದನ್ನು ಅನೇಕ ರೀತಿ ಬಳಸಬಹುದಾಗಿದ್ದು, ಅದರ ಉಪಯೋಗಗಳು ಲಾಭಾದಾಯಕವಾಗಿದೆ. ಇದು ಎಷ್ಟೋ ಜನಕ್ಕೆ ಇವತ್ತಿಗೂ ತಿಳಿಯದ ಮಾಹಿತಿ.

ಸೇಬು ಹಣ್ಣು ಮಾತ್ರವಲ್ಲದೆ ಬಾಳೆಹಣ್ಣು, ಸಪೋಟ ಈ ಹಣ್ಣುಗಳ ಸಿಪ್ಪೆಯಲ್ಲಿ ಅನೇಕ ಪ್ರಯೋಜನಗಳು ಅಡಗಿದೆ. ಹಣ್ಣನ್ನು ತಿಂದು ಸಿಪ್ಪೆಯನ್ನು ಕಸಕ್ಕೆ ಈ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ. ಈ ಸಿಪ್ಪೆ ತಿನ್ನುವುದರಿಂದ ಅನೇಕ ರೀತಿಯ ಪ್ರಯೋಜನಗಳು ನಮಗೆ ದೊರೆಯುತ್ತದೆ. ಔಷಧಿ ಗುಣಗಳು ಸಿಪ್ಪೆಯಲ್ಲಿ ತುಂಬಿದೆ. ಸೇಬಿನ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಪೋಷಕಾಂಶಗಳು ಹೆಚ್ಚು ಸಮೃದ್ಧವಾಗಿದೆ. ಸೇಬಿನ ಸಿಪ್ಪೆಯಿಂದ ಏನೆಲ್ಲಾ ಮಾಡಬಹುದು ಎಂಬುದನ್ನು ಈಗ ನೋಡೋಣ ಮುಂದೆ ಓದಿ.

ಸೇಬು ಹಣ್ಣಿನ ಸಿಪ್ಪೆಯ ಸಲಾಡ್‌ : ಸೇಬು ಹಣ್ಣಿನಂತೆಯೇ ಇದರ ಸಿಪ್ಪೆಯಲ್ಲಿಯೂ ಪೋಷಕಾಂಶಗಳು, ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ವಯಸ್ಸಾಗದಂತೆ ತಡೆಯುವ ಗುಣಗಳು ಹೇರಳವಾಗಿವೆ. ಅದಕ್ಕಾಗಿಯೇ ನೀವು ಇದನ್ನು ಸಲಾಡ್ ಆಗಿ ಸೇವಿಸಬಹುದು. ಇದಕ್ಕಾಗಿ, ಸೇಬು ಹಣ್ಣಿನ ಸಿಪ್ಪೆಗಳನ್ನು ಉದ್ದದ್ದವಾಗಿ  ಕತ್ತರಿಸಿ. ಈಗ ಅದನ್ನು ತರಕಾರಿಗಳು ಮತ್ತು ಹಣ್ಣುಗಳ ಸಲಾಡ್ ಮೇಲೆ ಇರಿಸಿ, ನಂತ್ರ ಸೇವನೆ ಮಾಡಿ. ಇದು ನಿಮ್ಮ ಆರೋಗ್ಯ ಮತ್ತು ನಿಮ್ಮ ಚರ್ಮ ಎರಡಕ್ಕೂ ಪ್ರಯೋಜನಕಾರಿಯಾಗಿದೆ. 

ಹೊಳೆಯುವ ಪಾತ್ರೆಗೆ ಸೇಬು ಸಿಪ್ಪೆ : ಕೇವಲ ಟೀ,ಜಾಮ್ ಮಾತ್ರವಲ್ಲ ಪಾತ್ರೆ ಹೊಳಪಿಗೂ ಸೇಬು ಹಣ್ಣಿನ ಸಿಪ್ಪೆ ಪ್ರಯೋಜನಕಾರಿ. ಅಲ್ಯೂಮಿನಿಯಂ ಪಾತ್ರೆಗಳ ಮೇಲಿನ ಕಲೆಗಳನ್ನು ಸ್ವಚ್ಛಗೊಳಿಸಲು ನೀವು ಸೇಬು ಹಣ್ಣಿನ ಸಿಪ್ಪೆಗಳನ್ನು ಬಳಸಬಹುದು. ಇದಕ್ಕಾಗಿ ಸೇಬು  ಸಿಪ್ಪೆ ಮತ್ತು ನೀರನ್ನು ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ 30 ನಿಮಿಷಗಳ ಕಾಲ ಕುದಿಸಿ. ಸಿದ್ಧಪಡಿಸಿದ ಮಿಶ್ರಣದಿಂದ ಅಲ್ಯೂಮಿನಿಯಂ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಪಾತ್ರೆಗಳ ಮೇಲಿನ ಜಿಡ್ಡಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Exit mobile version