ಹರಳೆಣ್ಣೆಯನ್ನು ನಮ್ಮ ಅಜ್ಜಿಯರ ಮುತ್ತಜ್ಜಿಯರ ಕಾಲದಿಂದಲೂ ಮುಖ, ಕೂದಲಿನ ಆರೋಗ್ಯ ಮತ್ತು ಸೌಂದರ್ಯದಲ್ಲಿ ಬಳಸಲಾಗುತ್ತಿದ್ದು, ತುಂಬಾ ಜನರಿಗೆ ಸುಂದರವಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಹೌದು, ನಿಮಗೆಲ್ಲ ಹರಳು ಬೀಜ ಗೊತ್ತೇ ಇದೆ. ಇದರಲ್ಲಿ ಹೆಚ್ಚಿನ ಮಟ್ಟದ ರಿಸಿನ್ ಅನ್ನು ಹೊಂದಿದ್ದು, ಒಂದು ರೀತಿಯ ವಿಷಕಾರಿ ಕಿಣ್ವ. ಆದರೆ ತೈಲವನ್ನು ಸಂಸ್ಕರಿಸಿದಾಗ ರಿಸಿನ್ ಅಂಶವನ್ನು ತೆಗೆದುಹಾಕಲಾಗುತ್ತದೆ. ಹಾಗಾಗಿ ಸಂಸ್ಕರಿಸಿದ ಕ್ಯಾಸ್ಟರ್ ಆಯಿಲ್ (Castor Oil) ಮಾತ್ರ ಬಳಕೆಗೆ ಸುರಕ್ಷಿತವಾಗಿದ್ದು, ಹರಳೆಣ್ಣೆಯಿಂದ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಯಾವ ರೀತಿ ಉಪಯೋಗವಿದೆ ಎಂದು ನೋಡೋಣ.
ಇದು ಹಳ್ಳಿಗಳಲ್ಲಿ ನಮ್ಮೆಲ್ಲರ ಮನೆಗಳ ಸುತ್ತಮುತ್ತಲಿನಲ್ಲಿ ಇರುವ ಗಿಡವಾಗಿದ್ದು, ಇದರ ಬೀಜಗಳನ್ನು ಕ್ಯಾಸ್ಟರ್ ಬೀನ್ಸ್ (Castor Beans) ಎಂದೂ ಕರೆಯುತ್ತಾರೆ. ಈ ಬೀಜಗಳನ್ನು ಒಣಗಿಸಿ ಅದರಿಂದ ಎಣ್ಣೆ ತಯಾರಿಸಲಾಗುತ್ತದೆ. ಹರಳೆಣ್ಣೆಯ ಬೇರುಗಳನ್ನು ಕೂಡ ಹಳ್ಳಿಗಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಬಳಸಲಾಗುತ್ತದೆ.
ಮುಖದ ಆರೋಗ್ಯಕ್ಕೆ ಹರಳೆಣ್ಣೆಯ ಪ್ರಯೋಜನಗಳು:
- ಚರ್ಮ ತೇವಗೊಳಿಸುತ್ತದೆ:
ಹರಳೆಣ್ಣೆಯಿಂದ ಚರ್ಮಕ್ಕೆ ಹಲವಾರು ಪ್ರಯೋಜನಗಳಿದ್ದು, ಹೆಚ್ಚಿನ ಕೊಬ್ಬಿನಾಮ್ಲದ ಅಂಶದಿಂದಾಗಿ ಕ್ಯಾಸ್ಟರ್ ಆಯಿಲ್ ಚರ್ಮದ ಮೃದುತ್ವವನ್ನು ಹೆಚ್ಚಿಸುತ್ತದೆ. ಒಣ ಚರ್ಮದವರು ನಿಮ್ಮ ಚರ್ಮವನ್ನು ಹೈಡ್ರೇಟ್ (Hydrate) ಮಾಡಲು ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿದ್ದರೆ ಹರಳೆಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. - ಬ್ಯಾಕ್ಟೀರಿಯಾ ವಿರೋಧಿ ಪ್ರಯೋಜನ
ಕ್ಯಾಸ್ಟರ್ ಬೀಜಗಳಿಂದ ಪ್ರೋಟೀನ್ ಸಾರಗಳು ಬ್ಯಾಕ್ಟೀರಿಯಾ (Bacteria) ವಿರೋಧಿ ಮತ್ತು ಆ್ಯಂಟಿ ಪ್ರೊಲಿಫೆರೇಟಿವ್ (Anti-proliferative) ಗುಣಲಕ್ಷಣಗಳನ್ನು ಹೊಂದಿದ್ದು, ಇದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. - ಫಂಗಲ್ ಸೋಂಕನ್ನು ನಿವಾರಿಸುತ್ತದೆ:
ಕ್ಯಾಸ್ಟರ್ ಆಯಿಲ್ ಹೊಂದಿರುವ ಜೆಲ್ ಕ್ಯಾಂಡಿಡಾ ಅಲ್ಬಿಕಾನ್ಸ್ (Gel Candida Albicans) ಬೆಳವಣಿಗೆಯನ್ನು ತಡೆಯುತ್ತದೆ. ಈ ಫಂಗಸ್ ಬಾಯಿಯ ಸೋಂಕು, ಉಗುರಿನ ಫಂಗಸ್, ಡೈಪರ್ ರಾಷಸ್ ಕಾರಣವಾಗುತ್ತದೆ. - ಸನ್ಬರ್ನ್ ಶಮನ
ಉಷ್ಣ ಹೆಚ್ಚಾಗಿ ಚರ್ಮ ಉರಿಯುವಿಕೆಯನ್ನು ಹರಳೆಣ್ಣೆ ಕಡಿಮೆ ಮಾಡುತ್ತದೆ. ಕ್ಯಾಸ್ಟರ್ ಆಯಿಲ್ ಸನ್ಬರ್ನ್ಗೆ ಸಂಬಂಧಿಸಿದ ಕಿರಿಕಿರಿ ಮತ್ತು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಕ್ಯಾಸ್ಟರ್ ಆಯಿಲ್ ನೈಸರ್ಗಿಕವಾಗಿಯೇ ದಪ್ಪವಾಗಿರುತ್ತದೆ. ಹಾಗಾಗಿ ಹೆಚ್ಚಿನವರು ಇದನ್ನು ನಮ್ಮ ಚರ್ಮಕ್ಕೆ ಲೇಪಿಸಿಕೊಳ್ಳಲು ಕಷ್ಟಪಡುತ್ತಾರೆ.
ಭವ್ಯಶ್ರೀ ಆರ್.ಜೆ