ಬೆಂಗಳೂರಿಗರೇ ಗಮನಿಸಿ, ಒಂದು ತಿಂಗಳು ಈ ಮಾರ್ಗದಲ್ಲಿ 2 ಗಂಟೆ ಮೆಟ್ರೋ ಸಂಚಾರ ಬಂದ್

Bangalore : ಸಿಲಿಕಾನ್ ಸಿಟಿಯ ಸಂಚಾರ ಜೀವನಾಡಿಯಾದ ನಮ್ಮ ಮೆಟ್ರೋದಿಂದ (Bengaluru metro closed 2months) ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಪ್ರತಿದಿನ 2 ಗಂಟೆ ನೇರಳೆ

ಮಾರ್ಗದ ಎರಡು ಮಾರ್ಗದಲ್ಲಿ ಜುಲೈ 10 ರಿಂದ ಆಗಸ್ಟ್(August) 9 ರವರೆಗೆ ಮೆಟ್ರೋ ಸಂಚಾರವನ್ನು ಬಂದ್ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.

ಈ ವೇಳೆ ಮೆಟ್ರೋ ಬಳಸುವವರು ಪರ್ಯಾಯ (Bengaluru metro closed 2months) ವ್ಯವಸ್ಥೆ ಮಾಡಿಕೊಳ್ಳಬಹುದು.

ಇದನ್ನು ಓದಿ: ಭಾರತ ವಿರುದ್ಧದ ಮೊದಲನೇ ಟೆಸ್ಟ್ ಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

ಜುಲೈ 10 ರಿಂದ ಆಗಸ್ಟ್ 9ರ ವರೆಗೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಬೈಯಪ್ಪನಹಳ್ಳಿ (Baiyappanahalli) ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಹಾಗೂ ಕೃಷ್ಣರಾಜಪುರ ಮತ್ತು

ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತವಾಗಲಿದೆ. ನೇರಳೆ ಮಾರ್ಗದಲ್ಲಿನ ಬೈಯಪ್ಪನಹಳ್ಳಿ ಹಾಗೂ ಕೆ.ಆರ್ ಪುರ (K.R.Pura) ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ

ಕಲ್ಪಿಸಲು BMRCL ಸಿಗ್ನಲ್ ಹಾಗೂ ಇತರೆ ಸಂಬಂಧಿತ ಕಾಮಗಾರಿ ನಡೆಸುತ್ತಿದೆ. ಈ ಕಾರಣಕ್ಕಾಗಿ ಈ ನಿಲ್ದಾಣಗಳ ನಡುವಿನ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ.

ಆದರೆ ಸ್ವಾಮಿ ವಿವೇಕಾನಂದ (Swamy Vivekananda) ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸೇವೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಲಭ್ಯವಿರುತ್ತದೆ. ನಂತರ ಬೆಳಿಗ್ಗೆ

7 ಗಂಟೆಯ ಬಳಿಕ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಹಾಗೂ ಕೆ.ಆರ್ ಪುರಂನಿಂದ ವೈಟ್ ಫೀಲ್ಡ್ (Whitefield) (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ವಾಣಿಜ್ಯ ರೈಲು ಸೇವೆ ಎಂದಿನಂತೆ

ರಾತ್ರಿ 11ಗಂಟೆಗೆ ಲಭ್ಯವಿರುತ್ತದೆ.

ಇನ್ನು ಹಸಿರು ಮಾರ್ಗಕ್ಕೆ ಸಂಬಂಧಪಟ್ಟಂತೆ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿರುವ BMRCL ನಮ್ಮ ಮೆಟ್ರೋ ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ ಪರ್ಯಾಯ ವ್ಯವಸ್ಥೆ

ಮಾಡಿಕೊಳ್ಳಲು ಸೂಚಿಸಿದೆ. ಮತ್ತು ಅನಾನುಕೂಲಕ್ಕಾಗಿ ವಿಷಾಧಿಸಿದೆ. ಕೆಲ ದಿನಗಳ ಹಿಂದಷ್ಟೇ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಸಿಗ್ನಲಿಂಗ್ (Signaling) ವ್ಯವಸ್ಥೆಯ ಸಮಸ್ಯೆಯಿಂದ

ಮೆಟ್ರೋ ಸಂಚಾರ ಬಂದ್ ಆಗಿ ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದರು.

ಭವ್ಯಶ್ರೀ ಆರ್.ಜೆ

Exit mobile version