ಹೊಟ್ಟೆ ಹಸಿವು ಕಡಿಮೆ ಆಗುತ್ತಿದೆಯಾ? ಹಾಗಾದ್ರೆ ಎಚ್ಚರ ಹೊಟ್ಟೆ ಕ್ಯಾನ್ಸರ್ ಇರಬಹುದು!

Stomach Cancer Symptoms: ಹೊಟ್ಟೆ ಕ್ಯಾನ್ಸರ್ (Stomach Cancer) ಬೇರೆ ಕಾಯಿಲೆಗಳಲ್ಲ. ಇದು ನಿಮ್ಮನ್ನು ಊಟ ಮಾಡುವುದನ್ನು ತಪ್ಪಿಸುತ್ತದೆ, ಮಾಡಿದ ಊಟ ನಮ್ಮ ದೇಹಕ್ಕೆ ದಕ್ಕದೆ ವಾಂತಿಯಾಗುವಂತೆ ಮಾಡುತ್ತದೆ. ಕೊನೆಗೆ ಸುಸ್ತು, ಆಯಾಸ ಹೆಚ್ಚು ಮಾಡಿ ಪ್ರಾಣವನ್ನೇ ತೆಗೆಯುತ್ತದೆ. ಆಹಾರ ಸೇವಿಸಿದರೆ ನಮ್ಮ ದೇಹಕ್ಕೆ ಶಕ್ತಿ ದೊರಕುತ್ತದೆ ಹಾಗಾಗಿ ನಾವು ಒಳ್ಳೆ ಆಹಾರವನ್ನು ತಿನ್ನಬೇಕು ಆದರೆ ಆಹಾರ ಸೇವಿಸಬೇಕಾದರೆ ಹೊಟ್ಟೆ ಹಸಿವಾಗಬೇಕು ಎಂದರೆ ಮೊದಲು ತಿಂದ ಆಹಾರ ಜೀರ್ಣವಾಗಿದೆ ಎನ್ನುವ ಸೂಚನೆಯನ್ನು ನಮ್ಮ ಹೊಟ್ಟೆ ಕೊಡಬೇಕು.

ಪ್ರತಿ ದಿನ ನಿರಂತರವಾಗಿ ನಡೆಯುವ ಸಹಜ ಪ್ರಕ್ರಿಯೆಗಳು. ಆದರೆ ಕೆಲವೊಂದು ಕಾರಣಗಳಿಂದ ಇದರಲ್ಲಿ ಯಾವುದಾದರೂ ಒಂದು ಪ್ರಕ್ರಿಯೆ ನಿಂತು ಹೋದರೆ ಮನುಷ್ಯನ ಸಂಪೂರ್ಣ ದೇಹದ ಆರೋಗ್ಯ (Health) ಹಾಳಾಗುತ್ತದೆ. ಹಾಗಾಗಿ ನಮ್ಮ ದೇಹ ಎಲ್ಲಿಯವರೆಗೆ ಎಲ್ಲಾ ಪ್ರಕ್ರಿಯೆಗಳಿಗೆ ಸ್ಪಂದಿಸುತ್ತದೆ ಅಲ್ಲಿಯವರೆಗೆ ನಮ್ಮ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಇತ್ತೀಚಿಗೆ ಹೊಟ್ಟೆ ಹಸಿವು ಆಗುತ್ತಿಲ್ಲ ಮತ್ತು ನಾವು ಇದರಿಂದ ಕಡಿಮೆ ಆಹಾರ ಸೇವನೆ ಮಾಡುವುದರಿಂದ.ಈ ಸಂದರ್ಭದಲ್ಲಿ ನಿಮ್ಮ ದೇಹದ ತೂಕ ಕೂಡ ಪ್ರತಿದಿನ ಕಡಿಮೆ ಆಗುತ್ತಾ ಬರುತ್ತಿದೆ. ಮೊದಲಿನಷ್ಟು ಚಟುವಟಿಕೆಯಿಂದ ಇರಲು ಆಗುತ್ತಿಲ್ಲ.

ಈ ಸಂದರ್ಭದಲ್ಲಿ ಹೊಟ್ಟೆಅಥವಾ ಕರುಳಿನಲ್ಲಿ ಏನಾದರೂ ಸಮಸ್ಯೆ ಇರುವುದರಿಂದ ನಿರಂತರವಾಗಿ ಹೊಟ್ಟೆ ಹಸಿವು ಕಡಿಮೆಯಾಗುತ್ತಾ ಬರುತ್ತಿದ್ದರೆ, ಅದು ಹೊಟ್ಟೆಯಲ್ಲಿ ಗಡ್ಡೆ ಅಥವಾ ಹೊಟ್ಟೆಯ ಕ್ಯಾನ್ಸರ್ ಆಗಿರಬಹುದು ಹಾಗಾಗಿ ನಾವು ಹೊಟ್ಟೆ ನೋವನ್ನು ಎಂದಿಗೂ ನೆಗ್ಲೆಕ್ಟ್ (Neglect) ಮಾಡಬಾರದು. ಕ್ಯಾನ್ಸರ್ ಸಮಸ್ಯೆ ಹೆಚ್ಚಾದಂತೆ ಊಟ ಸೇವನೆಯ ಬಗ್ಗೆ ಆಸಕ್ತಿ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗೆಂದು ಕೇವಲ ಇದರ ಕಾರಣದಿಂದ ಮಾತ್ರ ಈ ರೀತಿ ಆಗುತ್ತಿದೆ ಎಂದು ನಾವು ಊಟವನ್ನು ಬಿಡಬಾರದು.

ಬೇರೆ ಬೇರೆ ಕಾರಣಗಳಿಂದ ಕೂಡ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ಉದಾಹರಣೆಗೆ ವಾಕರಿಕೆ,ಹೊಟ್ಟೆ ನೋವು,ವಾಂತಿ,ಇವೆಲ್ಲವೂ ಸಹ ಕಾರಣವಾಗಿರುತ್ತವೆ ಎಂದು ಮಣಿಪಾಲ್ ಹಾಸ್ಪಿಟಲ್ (Manipal Hospital) ನಲ್ಲಿ ಆರೋಗ್ಯ ತಜ್ಞರಾದ ಡಾ ಸಂಜೀವ್ ಕುಮಾರ್ ಹೇಳುತ್ತಾರೆ. ಹೊಟ್ಟೆ ಹಸಿವು ಗ್ಯಾಸ್ಟ್ರಿಕ್ (Gastric) ಆದರೂ ಕೂಡಕೆಲವು ಗಂಟೆಗಳ ನಂತರ ಕಡಿಮೆ ಯಾಗುತ್ತೆ. ಇದರ ಜೊತೆಗೆ ತೆಗೆದುಕೊಳ್ಳುವ ಔಷಧಿಗಳು, ಮಾನಸಿಕ ಒತ್ತಡ, ಸೋಂಕುಗಳು ಇತ್ಯಾದಿ ತೊಂದರೆಗಳಿಂದ ಹೊಟ್ಟೆಯ ಕ್ಯಾನ್ಸರ್ ಕಂಡು ಬರುತ್ತದೆ.

ಹೊಟ್ಟೆಯ ಕ್ಯಾನ್ಸರ್ ರೋಗಲಕ್ಷಣಗಳು:
ಯಾವಾಗ ಆಹಾರ ಪದ್ಧತಿಯಲ್ಲಿ ಅಥವಾ ವ್ಯಾಯಾಮದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಇದ್ದರೂ ದೇಹದ ತೂಕ ಮಾತ್ರ ಕಡಿಮೆ ಆಗುತ್ತಾ ಹೋಗುತ್ತದೆ ಅಂತಹ ಸಂದರ್ಭದಲ್ಲಿ ಅದು ಹೊಟ್ಟೆಯ ಕ್ಯಾನ್ಸರ್ (Beware Of Stomach Cancer) ಲಕ್ಷಣವಾಗಿರುತ್ತದೆ.ದೇಹದ ತೂಕ ಒಂದು ರೀತಿ ಮನುಷ್ಯನ ಆರೋಗ್ಯವನ್ನು ಹೇಳುತ್ತದೆ ಎಂದು ಹೇಳಬಹುದು

ಒಂದು ವೇಳೆ ಗ್ಯಾಸ್ಟ್ರಿಕ್ ಆಗಿದ್ದರೆ ಹೊಟ್ಟೆ ಅಷ್ಟು ಬೇಗನೆ ಹಸಿಯುವುದಿಲ್ಲ. ಆದರೆ ಇದೊಂದು ತಾತ್ಕಾಲಿಕವಾದ ವಿಚಾರ ಅಷ್ಟೇ. ಒಂದೆರಡು ದಿನಗಳಲ್ಲಿ ಸರಿ ಹೋಗುತ್ತದೆ. ಆದರೆ ನಿರಂತರವಾಗಿ ಹೊಟ್ಟೆ ಹಸಿವು ಹಾಗೆ ಮುಂದುವರೆಯುವುದರಿಂದ ಅದು ಒಂದು ಗಂಭೀರವಾದ ಆರೋಗ್ಯ ಸಮಸ್ಯೆಯ ಸೂಚನೆಯಾಗಿರುತ್ತದೆ.

ಯಾವುದೇ ತರಹದ ಆಹಾರ ತಿಂದರೂ ಅಜೀರ್ಣತೆ ಅಥವಾ ಎದೆಯುರಿ ಯಾರಿಗೆ ನಿರಂತರವಾಗಿ ಇರುತ್ತದೆ ಮತ್ತು ಯಾವುದೇ ತರಹದ ಔಷಧಿಗಳಿಗೆ ಇಲ್ಲಿ ಉತ್ತಮ ಪರಿಣಾಮಗಳು ಸಿಗುವುದಿಲ್ಲ, ಅವರಿಗೆ ಹೊಟ್ಟೆಯ ಕ್ಯಾನ್ಸರ್ ಇರಬಹುದು ಎಂದು ಡಾಕ್ಟರ್ (Doctor) ಹೇಳುತ್ತಾರೆ.

ವಿಶೇಷವಾಗಿ ಅಸ್ವಸ್ಥತೆ ಕಂಡು ಬಂದರೆ ಅದರಿಂದ ಹೊಟ್ಟೆ ಕ್ಯಾನ್ಸರ್ ಸೂಚನೆ ಇರುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ನೋವು ನಿರಂತರವಾಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿದ ನಂತರ ಇದ್ದಕ್ಕಿದ್ದಂತೆ ಹೊಟ್ಟೆ ತುಂಬಿದ ಅನುಭವ ಉಂಟಾದರೆ ಮತ್ತು ಇದು ಕೂಡ ಪ್ರತಿದಿನ ಊಟ ಮಾಡಿದಾಗ ಮುಂದುವರೆದರೆ ಡಾಕ್ಟರ್ ಬಳಿ ತೋರಿಸಿ ಕೊಳ್ಳುವುದು ಒಳ್ಳೆಯದು.

ಒಂದು ವೇಳೆ ಮಲವಿಸರ್ಜನೆಯ ಸಂದರ್ಭದಲ್ಲಿ ಕಪ್ಪು ಬಣ್ಣದ ಮಲ ಅಥವಾ ತುಂಬಾ ಗಟ್ಟಿಯಾದ ಮಲ ವಿಸರ್ಜನೆ ಪ್ರತಿದಿನ ಆಗುತ್ತಿದ್ದರೆ ಸಹಜವಾದ ಮಲವಿಸರ್ಜನೆಗಿಂತ ಅದು ಮುಂದೊಂದು ದಿನ ಜೀರ್ಣನಾಳದಲ್ಲಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಆಗ ಮಲವಿಸರ್ಜನೆ (Defecation)ಯಲ್ಲಿ ರಕ್ತ ಕಂಡು ಬರುತ್ತದೆ. ಇದು ಕೂಡ ಹೊಟ್ಟೆಯ ಕ್ಯಾನ್ಸರ್ ಸೂಚನೆಯಾಗಿದೆ

ಕೆಲವರಿಗೆ ಇಷ್ಟವಾಗದ ಆಹಾರ ತಿಂದರೆ ವಾಕರಿಕೆ, ವಾಂತಿ (Nausea, Vomiting) ಬರುತ್ತದೆ. ಅದರಲ್ಲೂ ಕೆಲವರಿಗೆ ರಕ್ತ ವಾಂತಿಯಲ್ಲಿ ಕಂಡು ಬಂದರೆ ಅದನ್ನು ನಿರ್ಲಕ್ಷ್ಯ ಮಾಡಲೇಬಾರದು. ತಪ್ಪದೇ ವೈದ್ಯರ ಬಳಿ ಸ್ಕ್ಯಾನಿಂಗ್ (Scanning) ಮೂಲಕ ಪರೀಕ್ಷೆ ಮಾಡಿಸಿಕೊಳ್ಳಿ.

ವೈದ್ಯರು ಹೇಳುವಂತೆ ಹೊಟ್ಟೆಯ ಕ್ಯಾನ್ಸರ್ ಸಮಸ್ಯೆ ಇರುವವರಲ್ಲಿ ಯಾವಾಗಲೂ ಸುಸ್ತು ಮತ್ತು ಆಯಾಸ ಕಂಡು ಬರುತ್ತದೆ. ಎಲ್ಲವನ್ನು ಸಹ ಹೊಟ್ಟೆಯ ಕ್ಯಾನ್ಸರ್ ಎಂದುಕೊಳ್ಳಲು ಆಗುವುದಿಲ್ಲ. ಕೆಲವೊಮ್ಮೆ ಬೇರೆ ಕಾರಣಗಳಿಂದಲೂ ಕೂಡ ಇದೇ ರೀತಿ ಆಗುತ್ತದೆ. ಆದರೂ ಕೂಡ ನಿರ್ಲಕ್ಷ್ಯ ಮಾಡಿದಂತೆ ಆರೋಗ್ಯದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದನ್ನು ಆರಂಭದಲ್ಲಿ ತಡೆಯುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.

ಮೇಘಾ ಮನೋಹರ ಕಂಪು

Exit mobile version