Top Model: ತನ್ನ ಬಣ್ಣದಿಂದ ಅವಮಾನಕ್ಕೊಳಗಾಗಿದ್ದ ನ್ಯಾಕಿಮ್ ಗ್ಯಾಟ್ವೆಚ್ ಎನ್ನುವ ಕಪ್ಪು ಸುಂದರಿ, ಈಗ ಟಾಪ್ ಮಾಡೆಲ್!

top model

Black Beauty : ಸಾಮಾನ್ಯವಾಗಿ ಆಫ್ರಿಕಾದ (Africa) ಜನರು ಕಪ್ಪು ಬಣ್ಣವನ್ನು ಹೊಂದಿರುತ್ತಾರೆ. ಆದರೆ ಇಲ್ಲೊಬ್ಬ ಯುವತಿ ನೂರಕ್ಕೆ ನೂರರಷ್ಟು ಕಪ್ಪು ಬಣ್ಣದಲ್ಲಿ ಹುಟ್ಟಿದ್ದಾರೆ.

ಈ ಯುವತಿಯ ಹೆಸರು ನ್ಯಾಕಿಮ್ ಗ್ಯಾಟ್ವೆಚ್(Nyakim Gatwech), ಈ ಯುವತಿ ತನ್ನ ಬಣ್ಣದಿಂದ ಚಿಕ್ಕ ವಯಸ್ಸಿನಿಂದ ಅವಮಾನಗಳನ್ನು ಎದುರಿಸಿದ್ದಾರೆ.

Nyakim Gatwech

ಹೌದು, ಹಲವಾರು ಜನರು ಈ ಯುವತಿಯ ಬಣ್ಣವನ್ನು ನೋಡಿ ಗೇಲಿ ಮಾಡುವುದು, ಅವಮಾನ ಮಾಡುವುದು ಸಾಮಾನ್ಯವಾಗಿತ್ತು.

ಇಂತಹ ಸಂದರ್ಭದಲ್ಲಿ ಈಕೆ ಪ್ರತಿ ಕ್ಷಣ ಪಟ್ಟ ನೋವು ಅಷ್ಟಿಷ್ಟಲ್ಲ, ಸುಮಾರು ಇಪ್ಪತ್ತು ವರ್ಷಗಳ ಕಾಲ ಈಕೆ ತನ್ನ ಬಣ್ಣದ ಕಾರಣದಿಂದ ಅವಮಾನಕ್ಕೆ ಗುರಿಯಾಗಿದ್ದಾರೆ.


ಸ್ವತಃ ಕಪ್ಪು ವರ್ಣದವರಾದ ಆಫ್ರಿಕಾದವರೇ, ಈಕೆಯನ್ನು ಅವಮಾನ ಮಾಡುತ್ತಿದ್ದರು ಎಂದರೆ ನೀವೆ ಯೋಚನೆ ಮಾಡಿ.

ಆದರೆ ಇದ್ಯಾವುದಕ್ಕೂ ಅಂಜದೇ, ನ್ಯಾಕಿಮ್ ಗ್ಯಾಟ್ವೆಚ್ ಮಾಡಿದ ಈ ಒಂದು ನಿರ್ಧಾರದಿಂದ ಈಗ ಪ್ರಪಂಚವೇ ಈಕೆಯತ್ತ ತಿರುಗಿ ನೋಡುವಂತಾಗಿದೆ.

ಇದನ್ನೂ ಓದಿ : https://vijayatimes.com/queen-elizabeth-ii-is-no-more/

ಅಷ್ಟಕ್ಕೂ, ಈ ಯುವತಿ ಮಾಡಿದ ಧೃಡ ನಿರ್ಧಾರ ಏನು ಗೊತ್ತಾ? ಬರೀ ಅವಮಾನಗಳನ್ನು ಅನುಭವಿಸಿದ ಈಕೆ, ಬಣ್ಣವನ್ನು ನೋಡಿ ಅಳೆಯುವ ಈ ಪ್ರಪಂಚದ ಜನರ ವಿರುದ್ದ ಎದ್ದು ನಿಲ್ಲಬೇಕು ಎಂದು ಒಂದು ದಿನ ಗಟ್ಟಿ ನಿರ್ದಾರವನ್ನು ಮಾಡಿ,

ತನ್ನ ಬಣ್ಣವನ್ನು ಹೆಚ್ಚಾಗಿ ಪ್ರೀತಿ ಮಾಡಲು ಶುರು ಮಾಡುತ್ತಾರೆ. ತನ್ನ ಬಣ್ಣವನ್ನೇ ಹೆಚ್ಚು ಪ್ರದರ್ಶಿಸಲು ಪ್ರಾರಂಭಿಸುತ್ತಾರೆ. ಕೊನೆಗೂ ಇವರ ದೈರ್ಯಕ್ಕೆ ಹಾಗೂ ಛಲಕ್ಕೆ ಯಶಸ್ಸು ಸಿಗುತ್ತದೆ.

ಹೌದು, ಈಕೆಯ ಬಣ್ಣ ಹಾಗೂ ಈ ಬಣ್ಣಕ್ಕಿರುವ ಮೆರುಗನ್ನು ನೋಡಿ ಎಲ್ಲಾ ದೇಶದ ಕಂಪನಿಗಳು ನ್ಯಾಕಿಮ್ ಹಿಂದೆ ಬೀಳುತ್ತವೆ. ತಮ್ಮ ಕಂಪನಿಗಳ ಬಟ್ಟೆ ಹಾಗೂ ಆಭರಣಗಳನ್ನು ಪ್ರದರ್ಶನ ಮಾಡುವಂತೆ ಬೇಡಿಕೆ ಇಡುತ್ತಾರೆ.

ಇದರಿಂದ ಈ ಯುವತಿ ಪ್ರಪಂಚದ ಟಾಪ್ ಮಾಡೆಲ್ ಆಗಿ ಮಿಂಚುತ್ತಾರೆ. ಇದರಿಂದ ಈಕೆಯನ್ನ ಅವಮಾನ ಮಾಡಿದವರೂ ಕೂಡ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

ಹೌದು, ಅವಮಾನ ಮಾಡಿದವರೂ ಕೂಡ ಹೊಗಳುವಷ್ಟು ದೊಡ್ಡ ಸೆಲೆಬ್ರೆಟಿ ಆಗಿದ್ದಾರೆ ನ್ಯಾಕಿಮ್.


ನ್ಯಾಕಿಮ್ ಒಂದು ದಿನ ಉಬರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಕಾರಿನ ಡ್ರೈವರ್ ಅವರಿಗೆ ಒಂದು ಪ್ರಶ್ನೆ ಕೇಳುತ್ತಾನೆ. “ನಿಮಲ್ಲಿರುವ ಹಣದಿಂದ ನೀವು ಬಣ್ಣವನ್ನು ಬದಲಾಯಿಸಿಕೊಳ್ಳಬಹುದಲ್ಲವೇ” ಎಂದು ಹೇಳುತ್ತಾನೆ.

ಈ ಮಾತನ್ನು ಕೇಳಿದ ನ್ಯಾಕಿಮ್ ನಗುತ್ತಾ, “ನಿಮ್ಮ ಪ್ರಶ್ನೆಗೆ ನನ್ನ ಉತ್ತರ ನೋ, ಏಕೆಂದರೆ ದೇವರ ಕೊಟ್ಟಿರುವ ಬಣ್ಣವನ್ನು ನಾನೇಕೆ ಬದಲಾಯಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/up-police-seized-whale-vomit-thiefs/

ತಾವು ಸುಂದರವಾಗಿಲ್ಲ ಎಂದು ಕೀಳರಿಮೆಯಿಂದ ಬಳಲುವ ಯುವ ಜನತೆಗೆ ಸಲಹೆ ಕೊಟ್ಟಿರುವ ನ್ಯಾಕಿಮ್, ಪ್ರತೀ ವ್ಯಕ್ತಿಯೂ ವಿಭಿನ್ನ, ಬೇರೆಯವರಿಗೋಸ್ಕರ ನೀವು ಬದಲಾಗಬೇಡಿ. ನೀವು ನಿಮಗೋಸ್ಕರ ಬದುಕಿ ಎಂದು ಹೇಳಿದ್ದಾರೆ.

ಸಣ್ಣ ಪುಟ್ಟ ವಿಷಯಗಳಿಗೆ ಖಿನ್ನತೆಯಿಂದ ಬಳಲುವ ಈಗಿನ ಯುವಜನತೆ, ನ್ಯಾಕಿಮ್ ಅವರ ದೈರ್ಯ, ಛಲವನ್ನು ನೋಡಿ ಕಲಿಯಬೇಕು. ಹೀಗೆ ನ್ಯಾಕಿಮ್ ಅವರು ಎಲ್ಲರಿಗೂ ಸ್ಪೂರ್ತಿಯಾಗಿ ನಿಂತಿದ್ದಾರೆ.
Exit mobile version