ಕೊಲ್ಲೋ ಕಲರ್ ! ಕೊಲ್ಲೋ ಕಲರ್

ಕೊಲ್ಲೋ ಕಲರ್ ! ವಿಷ ಹಾಕಿ ಕೊಲ್ತಿದೆ ವ್ಯವಸ್ಥೆ. ಬಣ್ಣದ ಹೆಸರಲ್ಲಿ ಕ್ಯಾನ್ಸರ್ ತರಿಸಿಕೊಳ್ತಿದ್ದೇವೆ. ಕ್ಯಾನ್ಸರ್‌ಕಾರಕ ಬಣ್ಣ ಬ್ಯಾನ್(Ban) ಮಾಡೋ ತಾಕತ್ತು ಸರ್ಕಾರಕ್ಕಿಲ್ವಾ? ಆಹಾರಕ್ಕೆ ಹಾಕ್ತಿದ್ದಾರೆ ಬಗೆಬಗೆಯ ವಿಷಗಳು. ಯಾಕೆ ಇಂಥಾ ವಿಷ (chemical in food) ಬಳಕೆಗೆ ಅವಕಾಶ ಕೊಟ್ಟು ಜನರ ಜೀವದ ಜೊತೆ ಚೆಲ್ಲಾಟ ಆಡ್ತಿದೆ ಸರ್ಕಾರ ?

ಕಿಲ್ಲರ್ ಕಲರ್(Killer Colour) ಬ್ಯಾನ್ ಮಾಡೋ ತಾಕತ್ತು ಸರ್ಕಾರಕ್ಕಿಲ್ವಾ?

 ಹೌದು ಸ್ನೇಹಿತ್ರೆ ನಾವು ತುರ್ತಾಗಿ ಈ ಬಗ್ಗೆ ಎಚ್ಚೆತ್ತುಕೊಳ್ಳಲೇ ಬೇಕು. ಜನರಲ್ಲಿ ಜಾಗೃತಿ ಮೂಡಿಸಲೇ ಬೇಕು. ಇಲ್ಲದಿದ್ರೆ ಮುಂದೊ0ದು ದಿನ ಕ್ಯಾನ್ಸರ್(Cancer) ಅನ್ನೋದು ಶೀತ ಜ್ವರದಂತೆ ಪ್ರತಿ ಮನೆಯ ಕಾಯಿಲೆ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಕಣ್ಣಿಗೆ ಕಲರ್ ಕಲರ್ ಆಗಿ ಕಾಣೋ ಈ ಫುಡ್ ಕಲರ್ ಖಂಡಿತವಾಗಿಯೂ ಕಿಲ್ಲರ್. ಡೆಡ್ಲಿ ಕ್ಯಾನ್ಸರ್‌ಕಾರಕ.

ಪೆಟ್ರೋಲಿಯಂ ಉತ್ಪನ್ನವಾಗಿರುವ ಈ ಬಣ್ಣವನ್ನು ಆಹಾರ ಸುರಕ್ಷತೆ ಮಾತ್ತು ಗುಣಮಟ್ಟ ಕಾಯ್ದೆಯಲ್ಲಿ ಆಹಾರದಲ್ಲಿ ಬಳಸಲು ಅವಕಾಶ ಕೊಟ್ಟಿದ್ದೇ ದೊಡ್ಡ ತಪ್ಪು.

ಆದ್ರೆ ಕಾಯ್ದೆಯಲ್ಲಿ ಸೂಜಿ ಮೊನೆಯಷ್ಟು ಮಾತ್ರ ಬಣ್ಣ ಬಳಸಲು ಹೇಳಿದೆ. ಆದ್ರೆ ಜನಸಾಮಾನ್ಯರು ಮಾತ್ರ ಬಳಸುತ್ತಿರೋದು ಕಿಲೋಗಟ್ಟಲೆ.

ಸ್ನೇಹಿತ್ರೆ ಸೂಜಿ ಮೊನೆಯಷ್ಟು ಸೇವಿಸಿದ್ರು ವಿಷ ವಿಷನೇ , ಕೆ.ಜಿ ಗಟ್ಟಲೆ ಸೇವಿಸಿದ್ರೂ ವಿಷ ವಿಷನೇ. ಕಾಯ್ದೆಯಲ್ಲಿ ಈ ವಿಷದ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದು ದೊಡ್ಡ ಅಪಾಯಕ್ಕೆ ಕಾರಣವಾಗಿದೆ.

ಈಗ ಪ್ರತಿಯೊಂದು ಆಹಾರಕ್ಕೂ ಕ್ಯಾನ್ಸರ್‌ಕಾರಕ ಬಣ್ಣವನ್ನು ಮಿತಿ ಪರಿಮಿತಿ ಇಲ್ಲದೆ ಬಳಕೆ ಮಾಡುತ್ತಿದ್ದಾರೆ.

ಅದ್ರಲ್ಲೂ ಮಕ್ಕಳು ತಿನ್ನೋ ಚಾಕಲೇಟ್(Chocolate), ಕೇಕ್, ಬಿಸ್ಕತ್‌ಗಳಿಗೆ (Biscuit)ಕಲರ್ ಹಾಕಿ ಮಕ್ಕಳನ್ನು ಸಣ್ಣ ವಯಸ್ಸಿಗೇ ಕ್ಯಾನ್ಸರ್ ಪೇಷಂಟ್‌ಗಳನ್ನಾಗಿಸುತ್ತಿದ್ದಾರೆ.

ಆಹಾರ ಕೆಡುವುದು ಬೇಗ ಗೊತ್ತಾಗಬಾರದು ಮತ್ತು ಬರೀ ಆಕರ್ಷಣೆಗೆ ಬಳಸೋ ಈ ಕಲರ್ ಪೆಟ್ರೋಲಿಯಂನ ಉಪ ಉತ್ಪನ್ನ.

ಇನ್ನು ಕೆಲವು ಕೃತಕ ಬಣ್ಣಗಳನ್ನು ಕಲ್ಲಿದ್ದಲು  ಟಾರ್‌ನಿಂದ  ತಯಾರಿಸಲಾಗುತ್ತದೆ.

ಈ ಬಣ್ಣವನ್ನು ಆಹಾರದ ಮೂಲಕ ನಿತ್ಯ ಸೇವಿಸ್ತಾ ಹೋದ್ರೆ ಅಲರ್ಜಿ, ಮಕ್ಕಳಲ್ಲಿ ಹೈಪರ್ ಆಕ್ಟಿವ್ ಸಮಸ್ಯೆ ಮತ್ತು ಕ್ಯಾನ್ಸರ್ ಗ್ಯಾರಂಟಿ.

ಆಹಾರದೊಳಗಿದೆ ಮತ್ತಷ್ಟು ವಿಷ?

ಸ್ನೇಹಿತ್ರೆ ಬಣ್ಣ ಕಣ್ಣಿಗೆ ಕಾಣೋ ವಿಷ. ಇನ್ನು ಆಹಾರದೊಳಗೆ ಇನ್ನೂ ಬೇರೆ ಬೇರೆ ವಿಷಗಳನ್ನೂ ಹಾಕ್ತಾರೆ ಅವು ಯಾವುವು ಅಂತ ಒಮ್ಮೆ ಕ್ವಿಕ್ಕಾಗಿ ನೋಡೋಣ.

ಹಾಲಿನಲ್ಲಿದೆ ಆರ್‌ಬಿಜಿಹೆಚ್ ಮತ್ತು ಆರ್‌ಬಿಎಸ್ !

ಹೌದು, ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ಜಪಾನ್, ಇಸ್ರೇಲ್ ಮತ್ತು ಎಲ್ಲಾ ಯುರೋಪಿಯನ್  ಯೂನಿಯನ್ ದೇಶಗಳು ಆರ್‌ಬಿಜಿಹೆಚ್(RBGH) ಮತ್ತು ಆರ್‌ಬಿಎಸ್(RBS)  ಬಳಕೆಯನ್ನು ನಿಷೇಧಿಸಿವೆ. 

ಯಾಕಂದ್ರೆ ಆರ್‌ಬಿಜಿಹೆಚ್ ಮತ್ತು ಆರ್‌ಬಿಎಸ್ ಅನ್ನು ಹಸುವಿನ ಹಾಲಿನ (chemical in food) ಉತ್ಪಾದನೆ ಹೆಚ್ಚಿಸಲು ಬಳಸ್ತಾರೆ. ಇದನ್ನು ಬಳಸಿದ್ರೆ ಹಸುವಿನಲ್ಲಿ ಹಾರ್ಮೋನ್ ಮಟ್ಟವನ್ನು ಕನಿಷ್ಠ ಆರು ಪಟ್ಟು ಹೆಚ್ಚಿಸುತ್ತದೆ.

ಜೊತೆಗೆ ಹಾಲಿನ ಉತ್ಪನ್ನವೂ ಹೆಚ್ಚುತ್ತೆ. ಆದ್ರೆ ಈ ಹಾಲು ಅತ್ಯಂತ ಅಪಾಯಕಾರಿ. ಇದರಿಂದ ಮಹಿಳೆಯರಲ್ಲಿ ಸ್ತನ ಮತ್ತು ಪುರುಷರಲ್ಲಿ ಪ್ರಾಸ್ಟೆಟ್ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿಸಿದೆ.

ಚಿಪ್ಸ್ ನಲ್ಲಿ  ಒಲೆಸ್ಟ್ರಾ ಬಳಕೆ

ಕೊಬ್ಬು ಮುಕ್ತ ಆಲೂಗೆಡ್ಡೆ ಚಿಪ್ಸ್ ನಲ್ಲಿ ಕೊಬ್ಬಿನ ಬದಲು ಒಲೆಸ್ಟ್ರಾ(Olestra) ರಾಸಾಯನಿಕವನ್ನು ಬಳಕೆ ಮಾಡಲಾಗುತ್ತಿದೆ. ಇದು ಮನುಷ್ಯನ ದೇಹದಲ್ಲಿ ಸೇರಿಕೊಂಡು ಮೂಳೆಗಳು ಸವಿಯುವಂತೆ  ಮಾಡುತ್ತಿದೆ. 

ಅಷ್ಟು ಅಲ್ಲದೆ ಪ್ರಮುಖ ಸೂಕ್ಷ್ಮ ಪೋಷಕಾಂಶಗಳನ್ನು ಸಾಯಿಸುತ್ತಿದೆ. ಆದ್ರೆ ಜನ ಇದರ ಅಪಾಯವೇ ತಿಳಿಯದೇ ಕೊಬ್ಬು ಮುಕ್ತ ಅಂತ ತಿಂದು ಮತ್ತೊಂದಷ್ಟು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ

ಅಜೋಡಿಕಾರ್ಬೊನಾಮೈಡ್ ಅನ್ನೋ ವಿಷ

ಅಜೋಡಿಕಾರ್ಬೊನಾಮೈಡ್ (Azodicarbonamide)ಅನ್ನೋ ರಾಸಾಯನಿಕವನ್ನು ಬ್ರೆಡ್, ಶಿಥಿಲೀಕರಿಸಿದ ಭೋಜನ, ಪ್ಯಾಕ್ ಮಾಡಿದ ಪಾಸ್ತಾ ಮಿಶ್ರಣಗಳು ಮತ್ತು ಬೇಯಿಸಿದ ಪ್ಯಾಕ್ಡ್ ಪದಾರ್ಥಗಳಲ್ಲಿ ಬಳಸಲಾಗುತ್ತೆ. ಈ ರಾಸಾಯನಿಕವು ಅಸ್ತಮಾಕ್ಕೆ ನೇರ ಕಾರಣವಾಗುತ್ತಿದೆ.

ನೋಡುದ್ರಲ್ಲ ನಮಗೆ ಗೊತ್ತಿಲ್ಲದೆ, ನಾವು ನಿತ್ಯ ಸೇವಿಸೋ ಆಹಾರಕ್ಕೆಎಂಥೆಂಥಾ ಕಾರ್ಕೋಟಕ ವಿಷ ಸೇರಿಸ್ತಿದ್ದಾರೆ ಅಂತ. ಈ ಬಗ್ಗೆ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಇಂಥಾ ವಿಷ ವಸ್ತುಗಳ ಬಳಕೆ ಮೇಲೆ ನಿಷೇಧ ಹೇರಬೇಕು. ಇಲ್ಲದಿದ್ದರೆ ಭಾರತ ಕ್ಯಾನ್ಸರ್ ಕ್ಯಾಪಿಟಲ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

-ಪ್ರೀತಿ ಮಹೇಂದರ್

Exit mobile version