ರಾಹುಲ್ ಗಾಂಧಿ ಒಬ್ಬ ಅಜ್ಞಾನಿ : ನಟ ಚೇತನ್ ವಾಗ್ದಾಳಿ

ಬಿಜೆಪಿಯ ಯಾವುದೇ ಕಾರ್ಯಚಟುವಟಿಕೆಯಲ್ಲಿ ಹಿಂದೂ ಎಂಬುದಿಲ್ಲ — ಜಾತಿ ರಚನೆಯನ್ನು ರಕ್ಷಿಸಲು ಅವರು ಏನು ಬೇಕಾದರೂ ಮಾಡುತ್ತಾರೆ’ ಎಂದು ರಾಹುಲ್ ಗಾಂಧಿ (chetan slams rahul gandhi)

ಹೇಳಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಒಬ್ಬ ಅಜ್ಞಾನಿ ಎಂದು ನಟ ಚೇತನ್ (Chethan) ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿಯ (BJP) ಸಿದ್ಧಾಂತ ಹಿಂದುತ್ವ; ಕಾಂಗ್ರೆಸ್ (Congress) ಹಿಂದೂ (ಸಾಮಾಜಿಕ ವ್ಯವಸ್ಥೆ)

ಬಿಜೆಪಿ ಜಾತಿ ರಚನೆಯನ್ನು ರಕ್ಷಿಸುವುದಿಲ್ಲ; ಬಿಜೆಪಿಯ ಹಿಂದುತ್ವ ಜಾತಿ ರಹಿತವಾಗಿದೆ. ಕಾಂಗ್ರೆಸ್ನ ಪೊಲಿಟಿಕಲ್ ಹಿಂದೂಇಸಮ್ ಜಾತಿ ರಚನೆಯನ್ನು ರಕ್ಷಿಸುತ್ತದೆ. ರಾಹುಲ್ ಗಾಂಧಿ ಒಬ್ಬ ಅಜ್ಞಾನಿ

ಎಂದು ನಟ ಚೇತನ್ ವಾಗ್ದಾಳಿ (chetan slams rahul gandhi) ನಡೆಸಿದ್ದಾರೆ.

ಇನ್ನೊಂದು ಬರಹದಲ್ಲಿ, 1967 ರಿಂದ ತಂದೆ ಪೆರಿಯಾರ್ ಅವರ ಚಳವಳಿಯಿಂದಾಗಿ ತಮಿಳುನಾಡಿನಲ್ಲಿ (Tamilnadu) ದ್ರಾವಿಡ ರಾಜಕೀಯವು ಕಾಂಗ್ರೆಸ್ ಅನ್ನು ಹೊರಹಾಕಿತು ಮತ್ತು ಬಿಜೆಪಿಯನ್ನು

ದೂರ ಇಟ್ಟಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಈಗಲೂ ರಾಜಕೀಯ ವಲಯದಲ್ಲಿ ಪ್ರಾಬಲ್ಯ ಹೊಂದಿದವೆ. ಇಂದಿನ ತಮಿಳುನಾಡು ಯುವಜನರಿಗೆ ಈ 2 ಅಸಮಾನತೆಯ ಪಕ್ಷಗಳ

ಅಪಾಯಗಳು ಅರ್ಥವಾಗುತ್ತಿಲ್ಲ; ಕರ್ನಾಟಕದಲ್ಲಿ ನಮಗೆ ಅರ್ಥವಾಗುತ್ತದೆ. ಕರ್ನಾಟಕಕ್ಕೆ ಪೆರಿಯಾರ್ ಅವರ ಸಮಾನತೆಯು ಅಗತ್ಯವಿದೆ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ತಂದೆ ಪೆರಿಯಾರ್

ಅವರ ಸೈದ್ಧಾಂತಿಕ ದೃಷ್ಟಿಯೊಂದಿಗೆ 21 ನೇ ಶತಮಾನದ ಪರಿವರ್ತನಾ ಆಂದೋಲನದ ಅಗತ್ಯತೆಯ ಕುರಿತು ನಾನು ಇಂದು ಬೆಂಗಳೂರಿನಲ್ಲಿ ಸಮಾನತಾವಾದಿಗಳೊಂದಿಗೆ ಮಾತನಾಡಿದೆ ಎಂದಿದ್ದಾರೆ.

ಇನ್ನೊಂದು ಬರಹದಲ್ಲಿ ಕರ್ನಾಟಕದ ಎಲ್ಲಾ 3 ಮುಖ್ಯವಾಹಿನಿಯ ಪಕ್ಷಗಳು ಅಸ್ತಿತ್ವದಲ್ಲಿರುವ ಅಸಮಾನತೆಯ ವ್ಯವಸ್ಥೆಯನ್ನು ಭದ್ರಪಡಿಸುತ್ತವೆ -> ನಮ್ಮ ಸಮಾನತಾವಾದವು ಇಂತಹ ಪಿಡುಗುಗೆ

ಭೀಮಬಾಣವಾಗಿದೆ ಕಳೆದ 10 ದಿನಗಳಲ್ಲಿ, ಸಿಎಂ ಸಿದ್ದರಾಮಯ್ಯ ಅವರು 1. ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಚಾಮುಂಡಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ; 2. ಸರ್ಕಾರದ ಕನ್ನಡ

ಮತ್ತು ಸಂಸ್ಕೃತಿ ಪ್ರಾಯೋಜಿತ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು; 3. ಸೇಂಟ್ ಮೇರಿಸ್ ಬೆಸಿಲಿಕಾದಲ್ಲಿ ಮೇರಿ ಜನ್ಮ ದಿನಾಚರಣೆಯನ್ನು ಆಚರಿಸಿದರು ಇದು ಜ್ಯಾತ್ಯಾತೀತತೆ

ಅಲ್ಲ; ಇದು ಧಾರ್ಮಿಕ ಓಲೈಕೆ (ಸೆಕ್ಯುಲರಿಸಂಗೆ ತದ್ದು-ವಿರುದ್ಧವಾಗಿದೆ) ಕಾಂಗ್ರೆಸ್ನ ಬೂಟಾಟಿಕೆ ಬಿಜೆಪಿಯನ್ನು ಸಕ್ರಿಯಗೊಳಿಸುತ್ತದೆ ನಿಜವಾದ ಜಾತ್ಯತೀತತೆಯು ಈ ಎರಡೂ ಪಕ್ಷಗಳನ್ನು

ಸೋಲಿಸಬಲ್ಲದು ಎಂದು ಹೇಳಿದ್ದಾರೆ.

ಇದನ್ನು ಓದಿ: ಜಿ20 ಶೃಂಗ ಸಭೆಗೆ ಬಂದ ಚೀನಾ ಅಧಿಕಾರಿಗಳು ತಾಜ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ !

Exit mobile version