ಭಾಷಾ ಸಮಾನತೆಗಾಗಿ ಸಂವಿಧಾನದ 343-351 ವಿಧಿಗಳನ್ನು ತೆಗೆದುಹಾಕಬೇಕು : ನಟ ಚೇತನ್

Hindi

Karnataka : ಭಾಷಾ ಸಮಾನತೆಗಾಗಿ, 343-351 ಲೇಖನಗಳನ್ನು ತೆಗೆದುಹಾಕಬೇಕು ಅಥವಾ ಅದನ್ನು ತಿದ್ದುಪಡಿ ಮಾಡಬೇಕು ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್‌(Chethan Ahimsa) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಇಂದು ಸಂವಿಧಾನಾತ್ಮಕವಾಗಿ ಆರ್ಟಿಕಲ್(Article) 343-351 ರಲ್ಲಿ ಕಡ್ಡಾಯವಾಗಿರುವ ಹಿಂದಿ ದಿವಸ. ಫೆಡರಲಿಸ್ಟ್ ರಚನೆಯನ್ನು ಎತ್ತಿಹಿಡಿಯಲು ಹೋರಾಡುವ ಭಾರತೀಯರಾಗಿ,

ಇದನ್ನೂ ಓದಿ : https://vijayatimes.com/bjp-target-attack-over-siddaramaiah/

ಯಾವುದೇ ಭಾಷೆಗೆ ವಿಶೇಷ ಸವಲತ್ತುಗಳನ್ನು ನೀಡುವುದನ್ನು ಮತ್ತು ತೆರಿಗೆದಾರರ ಹಣವನ್ನು ಇಂತಹ ರೀತಿಯಲ್ಲಿ ಬಳಸುವುದನ್ನು ನಾವು ವಿರೋಧಿಸುತ್ತೇವೆ. ಭಾಷಾ ಸಮಾನತೆಗಾಗಿ, 343-351 ಲೇಖನಗಳನ್ನು ತೆಗೆದುಹಾಕಬೇಕು ಅಥವಾ ಅದನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೊಂದೆಡೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕೂಡಾ ಹಿಂದಿ ದಿವಸ್‌(Hindi Diwas) ಆಚರಣೆಗೆ ವಿರೋಧಿಸಿದ್ದು, ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ. ಕೇಂದ್ರದ ಸರ್ಕಾರ(Central Government) ಹಿಂದಿದಿವಸ ಆಚರಿಸಿ ಹಿಂದಿ ಭಾಷೆಯ ಹೆಸರಲ್ಲಿ ಆರ್.ಎಸ್.ಎಸ್ ಪ್ರಣೀತ ಹಿಂದುತ್ವ ಹೇರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : https://vijayatimes.com/ranveer-singh-about-his-nude-photoshoot/

ಅದೇ ರೀತಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ(HD Kumarswamy) ಅವರು, ಏಕಭಾಷೆಯನ್ನು ವೈಭವೀಕರಿಸುವುದು ಸರ್ವಥಾ ಸರಿಯಲ್ಲ. ವಿವಿಧತೆಯಲ್ಲಿ ಏಕತೆಯನ್ನೇ ಉಸಿರಾಡುವ ಭಾರತದಲ್ಲಿ ಒಂದು ಭಾಷೆಗಾಗಿ 56ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕುವ ಹುನ್ನಾರ ಸರಿಯಲ್ಲ. ಹಿಂದಿ ದಿವಸಕ್ಕೆ ನಮ್ಮ ವಿರೋಧವಿದೆ.

ಹಿಂದಿ ಹೆಸರಿನಲ್ಲಿ ಅಭಿಜಾತ ಭಾಷೆ ಕನ್ನಡದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಲಾಗುವುದು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಒತ್ತಾಯ ಪೂರ್ವಕವಾಗಿ ನಮ್ಮ ಮೇಲೆ ಹಿಂದಿ ಹೇರುವುದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ.

Exit mobile version