‘ಕಾಂತಾರ’ ಚಿತ್ರವು ಚೆನ್ನಾಗಿದೆ, ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ : ನಟ ಚೇತನ್

Bengaluru : ‘ಕಾಂತಾರ’ (Kantara) ಚಿತ್ರವು ಚೆನ್ನಾಗಿದೆ, ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ ಎಂದು ನಟ (Actor) ಮತ್ತು ಸಾಮಾಜಿಕ ಹೋರಾಟಗಾರ (Social Activist) ಚೇತನ್ (Chethan Ahimsa) ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಪಂಬದ, ನಲಿಕೆ, ಪರವ ಅರೆ-ಅಲೆಮಾರಿಗಳು ಆಚರಿಸುವ ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ. ಈ (Chethan Appreciate Kantara) ಸಮುದಾಯಗಳು ಬೇಟೆಗಾರರು ಮತ್ತು ಅಸ್ಪೃಶ್ಯರು ಅಂತ ಸುಳ್ಳು ಪ್ರಕ್ಷೇಪಗಳನ್ನು ಸೃಜನಾತ್ಮಕ ಸ್ವಾತಂತ್ರ್ಯ ಎಂದು ಮನ್ನಿಸಬಹುದು.

ಇದನ್ನೂ ಓದಿ : https://vijayatimes.com/police-saved-two-people-lives/

ಸಿನಿಮಾ ತಯಾರಕರು ನಮ್ಮ ಬುಡಕಟ್ಟು ಅಲೆಮಾರಿ ಜನಾಂಗದವರು ಪ್ರಕೃತಿಯ ಜೊತೆ ಹೊಂದಿರುವ ಸಂಬಂಧವನ್ನು ಇನ್ನೂ ಹೆಚ್ಚು ಉತ್ತಮವಾಗಿ ಅನ್ವೇಷಿಸಿದ್ದರೆ, ಚಲನಚಿತ್ರದ ಗುಣಮಟ್ಟ ಮತ್ತು ಇಮೋಶನಲ್ ಕ್ವೋಶೆಂಟ್ (EQ) ಇನ್ನೂ ಹೆಚ್ಚುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು “ಕಾಂತಾರ” ಚಿತ್ರವು ಸದ್ಯ ಕನ್ನಡ ಚಿತ್ರರಂಗದಲ್ಲಿ(Kannada Film Industry) ಭಾರೀ ಸದ್ದು ಮಾಡುತ್ತಿದೆ. ಕಾಂತಾರ ಎಂದರೆ ನಿಗೂಢವಾದ ಕಾಡು ಎಂದು ಅರ್ಥ.

https://youtu.be/yZJ1u9AyIiI

ಸೆಪ್ಟೆಂಬರ್ 30, 2022ರಂದು ಬಿಡುಗಡೆಯಾದ ಈ ಚಿತ್ರವನ್ನು ರಿಷಬ್ ಶೆಟ್ಟಿ(Rishab Shetty) ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲ್ಮ್ಸ್(Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು(Vijay Kirangandur) ನಿರ್ಮಿಸಿದ್ದಾರೆ.

ಇದನ್ನೂ ಓದಿ : https://vijayatimes.com/aravind-kejrival-against-ed-raid/

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಕಂಬಳ ಚಾಂಪಿಯನ್ ಆಗಿ (Chethan Appreciate Kantara) ನಟಿಸಿದ್ದಾರೆ. ನಟ ಕಿಶೋರ್ ಅರಣ್ಯ ಅಧಿಕಾರಿ ಪಾತ್ರದಲ್ಲಿ, ಅಚ್ಯುತ್ ಕುಮಾರ್ ಮತ್ತು ಸಪ್ತಮಿ ಗೌಡ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಛಾಯಾಗ್ರಹಣವನ್ನು ಅರವಿಂದ್ ಕಶ್ಯಪ್ ನಿರ್ವಹಿಸಿದ್ದರೆ, ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಆಕ್ಷನ್ ಸೀಕ್ವೆನ್ಸ್ಗಳನ್ನು ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ವಿಕ್ರಮ್ ಮೋರೆ ಮಾಡಿದ್ದಾರೆ. ಸಂಯೋಜನೆ ಮತ್ತು ನಿರ್ಮಾಣ ವಿನ್ಯಾಸವನ್ನು ಧರಣಿ ಗಂಗೆ ಪುತ್ರ ನಿರ್ವಹಿಸಿದ್ದಾರೆ.
Exit mobile version