ಜಲಾಶಯದೊಳಗೆ ಬಿದ್ದ ಉನ್ನತ ಅಧಿಕಾರಿಯ ಫೋನ್ : 21 ಲಕ್ಷ ಲೀಟರ್ ನೀರು ಪಂಪ್‌ ಮಾಡಿದ ಭೂಪರು !

Delhi : ಛತ್ತೀಸ್ ಗಢ ರಾಜ್ಯದ (Chhattisgarh State) ಅಧಿಕಾರಿಯೊಬ್ಬರಿಗೆ ಸೇರಿದ ದುಬಾರಿ ಬೆಲೆಯ ಮೊಬೈಲ್ ಪೋನ್‌ ಆಕಸ್ಮಿಕವಾಗಿ ಜಲಾಶಯದೊಳಗೆ ಬಿದ್ದಿದೆ. ಆ ಫೋನನ್ನು ತೆಗೆಯುವ (Chhattisgarh State incident) ಸಲುವಾಗಿ ಜಲಾಶಯದಿಂದ 21 ಲಕ್ಷ ಲೀಟರ್ ಲೀಟರ್ ನೀರನ್ನು ಪಂಪ್ ಮಾಡಿದ ಆರೋಪದ ಮೇಲೆ ಅಲ್ಲಿನ ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಕಂಕೇರ್ ಜಿಲ್ಲೆಯ ಕೊಯಿಲಿಬೀಡ ಬ್ಲಾಕ್‌ನ ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ (Food Officer Rajesh Vishwas) ಅವರು ಖೇರ್ಕಟ್ಟಾ ಅಣೆಕಟ್ಟಿನಲ್ಲಿ ರಜೆಯನ್ನು ಆನಂದಿಸುತ್ತಿದ್ದಾಗ

ಅವರ 100,000 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ (Smartphone) ಆಕಸ್ಮಿಕವಾಗಿ ಜಲಾಶಯಕ್ಕೆ ಬಿದ್ದಿತು. ಸ್ಥಳೀಯರು ಹುಡುಕುವಷ್ಟರಲ್ಲಿ 15 ಅಡಿ ಆಳದ ನೀರಿನೊಳಗೆ ಮೊಬೈಲ್‌ ಬಿದ್ದಿದೆ.

ಮೊಬೈಲ್‌ ಹುಡುಕುವ ಪ್ರಯತ್ನ ವಿಫಲವಾದಾಗ, ಅಧಿಕಾರಿ ಮೂರು ದಿನಗಳ ಕಾಲ ನೀರನ್ನು ಪಂಪ್ ಮಾಡಲು ಎರಡು 30 ಎಚ್‌ಪಿ ಡೀಸೆಲ್ ಪಂಪ್‌ಗಳನ್ನು ಬಳಸಿದರು.

ಪರಿಣಾಮವಾಗಿ, ಅವರು 21 ಲಕ್ಷ ಲೀಟರ್ ನೀರನ್ನು ಹೊರಕ್ಕೆ ಹರಿಸಿದರು. 1,500 ಎಕರೆ ನಷ್ಟು ಕೃಷಿ ಭೂಮಿಗೆ ನೀರುಣಿಸುವಷ್ಟು ನೀರನ್ನು ಅಧಿಕಾರಿಯ ಮೊಬೈಲ್‌ ಸಲುವಾಗಿ ಹೊರ ಚೆಲ್ಲಲಾಗಿದೆ.

ಇದನ್ನೂ ಓದಿ : https://vijayatimes.com/parliament-house-inauguration/

ಸೋಮವಾರ ರಾತ್ರಿ ಆರಂಭವಾದ ಪಂಪಿಂಗ್ ಕಾರ್ಯ ಗುರುವಾರದವರೆಗೂ ನಡೆದಿತ್ತು,ದೂರಿನ ಮೇರೆಗೆ ಜಲಸಂರಕ್ಷಣಾ ಇಲಾಖೆ ಅಧಿಕಾರಿಗಳು (Water Conservation Department officials) ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಿಲ್ಲಿಸಿದರು.

ಆದರೆ, ನೀರು ನಿಂತಾಗ ನೀರಿನ ಮಟ್ಟ ಆರು ಅಡಿ ತಲುಪಿತ್ತು. ಸರಿಸುಮಾರು 21 ಲಕ್ಷ ಲೀಟರ್ ಲೀಟರ್ ನೀರನ್ನು ಆಗ್ಲೇ ಖಾಲಿ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಬೇಸಿಗೆಯಲ್ಲೂ (Chhattisgarh State incident) ಪ್ರಾಣಿಗಳಿಗೆ ಕುಡಿಯಲು 10 ಅಡಿ ಆಳದ ನೀರು ಇರುತ್ತದೆ.

ಸೆಲ್ಫಿ ತೆಗೆದುಕೊಳ್ಳುವಾಗ ಫೋನ್ ಕೈಯಿಂದ ಜಾರಿತು. ರಾಜೇಶ್ ವಿಶ್ವಾಸ್ ಅವರ ಮೊಬೈಲ್‌ನಲ್ಲಿ ಇಲಾಖೆಯ ಪ್ರಮುಖ ಡೇಟಾಗಳು ಇದ್ದವು ಅದಕ್ಕಾಗಿ ಮೊಬೈಲ್‌

ಅನ್ನು ಮರು ಪಡೆಯಲೇ ಬೇಕಾದ ಅವಶ್ಯಕತೆ ಇತ್ತು ಮುಳುಗುಗಾರರು ಅದನ್ನು ಹುಡುಕಲು ಪ್ರಯತ್ನಿಸಿದರು ಆದರೆ ಕಲ್ಲಿನ ಮೇಲ್ಮೈಯಿಂದಾಗಿ ಸಾಧ್ಯವಾಗಲಿಲ್ಲ. ಹಾಗಾಗಿ ಈ ಕೃತ್ಯ ನಡೆಸಬೇಕಾಯಿತು ಎಂದು ರಾಜೇಶ್‌ ವಿಶ್ವಾಸ್‌ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ : https://vijayatimes.com/24-ministers-to-take-oath/

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ರಮಣ್ ಸಿಂಗ್ ಭೂಪೇಶ್ ಭಾಗರ್ ಅವರ ಕಾಂಗ್ರೆಸ್ ಸರ್ಕಾರವನ್ನು (Congress Govt) ಟೀಕಿಸಿದ್ದಾರೆ, ನಿರಂಕುಶ ರಾಜ್ಯ ಸರ್ಕಾರದ ಅಧಿಕಾರಿಗಳು ಈ ಪ್ರದೇಶವನ್ನು ಪೂರ್ವಜರ ಆಸ್ತಿ ಎಂದು ಪರಿಗಣಿಸುತ್ತಾರೆ,

ಜನರು ಸುಡುವ ಬಿಸಿಲಿನಲ್ಲಿ ವಾಸಿಸುತ್ತಾರೆ, ಮುಂದಿನ ಜೀವನವು ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಿದೆ. ಆದರೆ ಅಧಿಕಾರಿಯೊಬ್ಬರು ಇಲ್ಲಿ 21 ಲಕ್ಷ ಮಿಲಿಯನ್ ಲೀಟರ್ ನೀರನ್ನು ಖಾಲಿ ಮಾಡುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Exit mobile version