ಮಾವಿನಲ್ಲೇ ಅತೀ ದುಬಾರಿ ಮಾವಿನ ತಳಿ ಯಾವುದು ಗೊತ್ತಾ? ಇಲ್ಲಿದೆ ಉತ್ತರ!

Miyazaki

ಹಣ್ಣುಗಳ ರಾಜ(Fruit King) ಎಂದೇ ಖ್ಯಾತಿ, ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಹಣ್ಣು ಅಂದ್ರೆ ಅದು ಮಾವು(Mango). ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರೂ ಸಹ ಇ ಮಾವಿನ ಸ್ವಾದಕ್ಕೆ ಮನಸೋತವರೇ.

ಮಾವಿನ ತಳಿಯಲ್ಲಿ ಅನೇಕ ತಳಿಗಳು ಲಭ್ಯವಿದೆ. ಅದರಲ್ಲಿ ಅತಿ ದುಬಾರಿ ಮಾವಿನ ತಳಿ ಯಾವುದು ಗೊತ್ತಾ? ಈ ಮಾವಿನ ತಳಿ ಹೆಸರು ಮಿಯಾಝಾಕಿ. ಹೆಸರೇ ಸೂಚಿಸಿದಂತೆ ಜಪಾನ್‌ನ ಮಿಯಾಝಾಕಿ ಇದರ ಮೂಲ. ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಕರೆಸಿಕೊಂಡಿರುವ ಈ ತಳಿಯ ಒಂದು ಮಾವು 350 ಗ್ರಾಂವರೆಗೂ ಬೆಳೆಯಬಲ್ಲದು. ಇದಕ್ಕೆ “ಸೂರ್ಯನ ಮೊಟ್ಟೆ” ಎಂಬ ಹೆಸರಿನಿಂದ ಕೂಡ ಕರೆಯುತ್ತಾರೆ. ಅತಿ ಹೆಚ್ಚಿನ ಬೆಲೆಗೆ ಈ ಮಾವನ್ನು ಮಾರಾಟ ಮಾಡಲಾಗುತ್ತದೆ. ಹೀಗಾಗೇ ಇದನ್ನು ವಿಶ್ವದಲ್ಲೇ ಅತಿ ದುಬಾರಿ ಮಾವಿನ ತಳಿ ಎಂದು ಕರೆಯಲಾಗಿದೆ.

ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ 2.70 ಲಕ್ಷ ರೂಗೆ ಮಾರಾಟವಾಗಿತ್ತು ಎಂದು ಜಪಾನ್ ಮಾಧ್ಯಮ ವರದಿ ಮಾಡಿದೆ. ಆದರೆ ಹಣ್ಣಿಗೆ ಏಕಿಷ್ಟು ದುಬಾರಿ ಬೆಲೆ ಎಂಬುದರ ಕುರಿತು ಸೂಕ್ತ ಉಲ್ಲೇಖಗಳಿಲ್ಲ. ಉತ್ಪಾದನೆ ಕಡಿಮೆ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಹಳದಿ ಪೆಲಿಕಾನ್ ಮಾವಿಗಿಂತ ಇದು ಭಿನ್ನವಾಗಿದ್ದು, ಆಗ್ನೇಯ ಏಷ್ಯಾ ದೇಶಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಮಿಯಾಝಾಕಿಯಲ್ಲಿ ಬೆಳೆದ ಈ ಹಣ್ಣನ್ನು ಜಪಾನ್‌ನೆಲ್ಲೆಡೆ ಸರಬರಾಜು ಮಾಡಲಾಗುತ್ತದೆ.


ಆ್ಂಟಿಆಕ್ಸಿಡಂಟ್‌ಗಳು ಈ ತಳಿಯ ಮಾವಿನಲ್ಲಿ ಅತಿ ಹೆಚ್ಚಾಗಿದೆ. ಬೆಟಾ ಕೆರೋಟಿನ್, ಫೋಲಿಕ್ ಆಸಿಡ್ ಹೆಚ್ಚಿದ್ದು, ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗಿದೆ. ದೃಷ್ಟಿ ಮಂದವಾಗುತ್ತಿರುವವರಿಗೂ ಇದು ಉಪಯುಕ್ತವಾದ ಹಣ್ಣು ಎಂದು ಹೇಳಲಾಗುತ್ತದೆ.

Exit mobile version