ಭಾರತದ ಚಂದ್ರಯಾನಕ್ಕೆ ಕ್ಷಣಗಣನೆ: ಈ ಅಪೂರ್ವ ದೃಶ್ಯವನ್ನು ನಾವು ವೀಕ್ಷಿಸುವುದು ಹೇಗೆ?

New Delhi : ಇಸ್ರೋ ಚಂದ್ರಯಾನ-3ರ ಉಡಾವಣೆಗೆ ಇಸ್ರೋ (Countdown to Chandrayaan 3) ಸಕಲ ತಯಾರಿ ನಡೆಸಿದೆ. ಮಹತ್ವಾಕಾಂಕ್ಷಿ ಚಂದ್ರಯಾನ ನೌಕೆಯನ್ನು

ಹೊತ್ತ ರಾಕೆಟ್ (Rocket) ಉಪಗ್ರಹ ಶುಕ್ರವಾರ ಮಧ್ಯಾಹ್ನ ನಭೋ ಮಂಡಲಕ್ಕೆ ಚಿಮ್ಮುವ ನೀರಿಕ್ಷೆ ಇದೆ. ಈ ಕ್ಷಣಕ್ಕಾಗಿ ಭಾರತ ಮಾತ್ರವಲ್ಲದೆ ಜಗತ್ತು ಕೂಡ ಕಾತರದಿಂದ ಕಾಯ್ತಿದೆ.

ಭಾರತೀಯ ಸಂಶೋಧನಾ ಸಂಸ್ಥೆಯು ಮಹತ್ವಾಕಾಂಕ್ಷೆಯ (ಇಸ್ರೋ ) ಚಂದ್ರಯಾನ (Chandrayaana) ಯೋಜನೆಯ ಮೂರನೇ ಆವೃತ್ತಿಯ ಚಂದಿರನ ಅಂಗಳಕ್ಕೆ ಶುಕ್ರವಾರ

ಪ್ರಯಾಣಿಸಲು ಸಿದ್ಧತೆ ನಡೆಸಿದೆ. ಚಂದ್ರಯಾನ 2ರಲ್ಲಿ ಉಂಟಾದ ಲೋಪಗಳಿಂದ ಪಾಠ ಕಲಿತಿರುವ ನಮ್ಮ ವಿಜ್ಞಾನಿಗಳು ಈ ಸಲ ಲ್ಯಾಂಡರ್ ಅನ್ನು ಚಂದ್ರನ ತಗ್ಗು ದಿಣ್ಣೆಗಳ ನೆಲದಲ್ಲಿ ಸುಗಮವಾಗಿ

ಇಳಿಸುವ ಮೂಲಕ ಈ ಸಾಧನೆಯನ್ನು ಮಾಡಿದ ದೇಶಗಳ ಪ್ರತಿಷ್ಠಿತ ಸಾಲಿನಲ್ಲಿ ಸೇರಿಕೊಳ್ಳುವ ಗುರಿ ಹೊಂದಿದೆ.

ಇದನ್ನು ಓದಿ: ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ

ಚಂದ್ರಯಾನ 2ರಲ್ಲಿ ಲ್ಯಾಂಡರ್(Lander) ಅನ್ನು ಸುಗಮವಾಗಿ ಇಳಿಸುವ ಪ್ರಯತ್ನ ಯಶಸ್ವಿಯಾಗಿರಲಿಲ್ಲ, ಹಾಗಾಗಿ ಇದರಲ್ಲಿನ ಲೋಪಗಳನ್ನು ಅರಿತುಕೊಂಡು ಈ ಬಾರಿ ಸಾಕಷ್ಟು ಸುಧಾರಣೆಗಳನ್ನು

ಮಾಡಲಾಗಿದೆ. ಅಲ್ಲದೆ ಚಂದ್ರಯಾನ-3 (Chandrayaana-3) ನ್ನು ಭಾರತ ಮಾತ್ರವಲ್ಲದೆ, ಜಗತ್ತಿನಾದ್ಯಂತ ಗಮನ ಸೆಳೆದಿದೆ. ಈ ಕುತೂಹಲಕಾರಿ ಹಾಗು ಐತಿಹಾಸಿಕ ಗಳಿಗೆಯನ್ನು ಕೋಟ್ಯಾಂತರ

ಮಂದಿ ಎದುರು (Countdown to Chandrayaan 3) ನೋಡುತ್ತಿದ್ದಾರೆ.


ಹೇಗೆ ಉಡಾವಣೆಯನ್ನು ವೀಕ್ಷಿಸುವುದು?
ಈ ಅಪೂರ್ವ ಕ್ಷಣವನ್ನು ವೀಕ್ಷಿಸಲು, ಶ್ರೀಹರಿ ಕೋಟಾದ (Shree Harikota) ಪಬ್ಲಿಕ್ ಗ್ಯಾಲರಿಯಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಪಬ್ಲಿಕ್ ಗ್ಯಾಲರಿಯಲ್ಲಿ

(Public Galary) ನೊಂದಣಿ ಮಾಡಿಕೊಳ್ಳದೆ ಇದ್ದರೆ www.isro.gov.in ವೆಬ್ಸೈಟ್ ಆಗಾಗ ಗಮನಿಸಬಹುದು. ಉಡಾವಣೆ ದಿನಾಂಕಕ್ಕೂ ಮುನ್ನವೇ ನೇರ ಪ್ರಸಾರದ ಲಿಂಕ್ ಅನ್ನು ಇಸ್ರೋ

ಹಂಚಿಕೊಳ್ಳಲಿದೆ. ಹಾಗೆ ಟಿ.ವಿ ಚಾನೆಲ್ ಗಳು ಕೂಡ ನೇರಪ್ರಸಾರ ಮಾಡಬಹುದು.

ನಮ್ಮ ಭಾರತವನ್ನು ಜಾಗತಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸುವಂತೆ ಮಾಡಿರುವ ಚಂದ್ರಯಾನ ಕುರಿತಾದ ಕೆಲವು ಪ್ರಶ್ನೆಗೆ ಉತ್ತರ ಹೀಗಿದೆ.

  1. ಏನಿದು ಚಂದ್ರಯಾನ-3?
    ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸಲು ಇಸ್ರೋ ಕಳಿಸುತ್ತಿರುವ 3ನೇ ನೌಕೆ ಇದು, ಹಾಗೆಯೇ ಚಂದ್ರನ ನೆಲದಲ್ಲಿ ಸುರಕ್ಷಿತವಾಗಿ ನೌಕೆಯನ್ನು ಇಳಿಸುವ ಎರಡನೇ ಪ್ರಯತ್ನವಿದು.
  2. ಚಂದ್ರಯಾನ ಉಡಾವಣೆ ಯಾವಾಗ, ಎಲ್ಲಿ ?
    ಜುಲೈ 14ರ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ (Andhra Pradesh) ಶ್ರೀಹರಿ ಕೋಟಾದಲ್ಲಿನ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3ರ ಉಡಾವಣೆಗೆ ಇಸ್ರೋ ದಿನ ನಿಗದಿಪಡಿಸಿದೆ.
    ಕೊನೆಯ ಕ್ಷಣದಲ್ಲಿ ಬದಲಾವಣೆಗಳಾಗಬಹುದು . ಜುಲೈ (July)19 ಅನ್ನು ಉಡಾವಣೆ ಪ್ರಕ್ರಿಯೆಗೆ ಕೊನೆಯ ದಿನವನ್ನಾಗಿ ನಿಗದಿ ಮಾಡಲಾಗಿದೆ.
  3. ನೌಕೆ ಯಾವ ರಾಕೆಟ್ನಲ್ಲಿ ತೆರಳಲಿದೆ?
    ಈ ಬಾರಿ ಚಂದ್ರಯಾನ -2 ಬಳಸಿದ್ದ GSLV-MK3 ಅಥವಾ LVM- 3 ರಾಕೆಟ್ ಅನ್ನೇ ಬಳಸಲಾಗುತ್ತಿದೆ. ಆದ್ರೆ ಇದರಲ್ಲಿನ ತಂತ್ರಜ್ಞಾವನ್ನು ಸುಧಾರಿಸಲಾಗಿದೆ.
  4. ಚಂದ್ರಯಾನ-3ರಲ್ಲಿ ಏನಿದೆ?
    ವಿಕ್ರಮ್ ಲ್ಯಾಂಡರ್(Vikram Landar) ಅನ್ನು ರವಾನಿಸುವ ಪ್ರೊಪಲ್ಶನ್ ಮಾಡಲು ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡುವ ಪ್ರಗ್ಯಾನ್ ರೋವರ್ ಇರುತ್ತದೆ. ಇದರೊಂದಿಗೆ ಚಂದ್ರನಿಂದ ಭೂಮಿಯನ್ನು

    ಅಧ್ಯಯನ ಮಾಡುವ ಒಂದು ಪೇಲೋಡ್ ಇದ್ದು, ಇದು ಭೂಮಿಯಲ್ಲಿನ ನಿಲ್ದಾಣಕ್ಕೆ ದತ್ತಾಂಶಗಳನ್ನು ಮರಳಿ ಕಳುಹಿಸುತ್ತವೆ. ವಿಕ್ರಮ್ ಅಲ್ಲಿ ನಾಲ್ಕು ಪೇಲೋಡ್ ಗಳಿವೆ. ಇದರಲ್ಲಿ ನಾಸಾ

    (NASA)ದ ಪ್ಯಾಸೀವ್ ಪೇಲೋಡ್ ಕೂಡ ಇವೆ. ಇವು ಜತೆಗೂಡಿ ಚಂದ್ರನ ನೆಲದಲ್ಲಿ ಪ್ರಯೋಗಗಳನ್ನು ನಡೆಸುತ್ತವೆ. ಇದರಿಂದ ಚಂದ್ರನನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿ ಕೊಳ್ಳಲು ನೆರವಾಗಲಿದೆ.

ಭವ್ಯಶ್ರೀ ಆರ್.ಜೆ

Exit mobile version