2023 ಟಾಟಾ ಐಪಿಎಲ್ : 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಸಿಎಸ್ಕೆ..! ಸಿಕ್ಸರ್ ಸಿಡಿಸಿ ಗೆಲುವು ತಂದು ಕೊಟ್ಟ ಜಡೇಜಾ

Ahmedabad : ಲಕ್ಷಾಂತರ ಅಭಿಮಾನಿಗಳ ನಿರೀಕ್ಷೆ ಕೊನೆಗೂ ನನಸಾಗಿದೆ.ರೋಮಾಂಚನಕಾರಿ ಆಟದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಐದು ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ (Gujurat Titans) ವಿರುದ್ಧ ಜಯಗಳಿಸುವ ಮೂಲಕ ಐದನೇ ಬಾರಿಗೆ ಐಪಿಎಲ್‌ನ (CSK won the match) ಚಾಂಪಿಯನ್ ಆಗಿ ಹೊರಹೊಮ್ಮಿತು.

IPL 2023 ಪಂದ್ಯಾವಳಿಯ ಅಂತಿಮ ಪಂದ್ಯವು ಮಳೆಯಿಂದಾಗಿ ಒಂದು ದಿನ ವಿಳಂಬವಾಗಿತ್ತು,ಆದರೆ ಮಳೆ ಇಲ್ಲದ ಕಾರಣ ಸೋಮವಾರ (ಮೇ 29) ರಾತ್ರಿ 7.30 ಕ್ಕೆ ನಿಗದಿತ ಸಮಯಕ್ಕೆ (CSK won the match) ಪ್ರಾರಂಭವಾಯಿತು.

ಸಿಎಸ್‌ಕೆ ನಾಯಕ ಎಂಎಸ್ ಧೋನಿ (M.S.Dhoni) ಐಪಿಎಲ್‌ನಲ್ಲಿ ತಮ್ಮ 250 ನೇ ಪಂದ್ಯವನ್ನು ಆಡುವ ಮೂಲಕ ಐಪಿಎಲ್‌ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ 250 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮೊದಲು ಟಾಸ್ (Toss) ಗೆದ್ದುಚೇಸಿಂಗ್‌ ಆಯ್ಕೆ ಮಾಡಿಕೊಂಡರು. ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಕಾಲಿಟ್ಟ ತಕ್ಷಣ 250ನೇ ಪಂದ್ಯದ (CSK won the match) ದಾಖಲೆ ಧೋನಿ ಪಾಲಾಯಿತು.

ಮ್ಯಾಜಿಕ್ ಮಾಡಿದ ಜಡೇಜಾ :

ಜಡೇಜಾ ಅವರ 15ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ (Sixer) ಹಾಗೂ 1 ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡವು ರೋಚಕ ಗೆಲುವು ಸಾಧಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಸಾಯಿ ಸುದರ್ಶನ್ ಮತ್ತು ಸಹಾ ಅವರ ಅದ್ಭುತ ಅರ್ಧಶತಕಗಳ ಹಿನ್ನಲೆಯಲ್ಲಿ 214 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಬಿಟ್ಟುಕೊಟ್ಟಿತು.

ನಂತರ ಮಳೆ ಬಂದಿದ್ದರಿಂದ ಆಟ ನಿಲ್ಲಿಸಬೇಕಾಯಿತು. ಅಂತಿಮವಾಗಿ ಆಟ ಆರಂಭವಾದಾಗ ಚೆನ್ನೈ 15 ಓವರ್‌ಗಳಲ್ಲಿ 171 ರನ್ ಗಳಿಸುವ ಗುರಿ ಹೊಂದಿತ್ತು.

ಆ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಅಂತಿಮವಾಗಿ ಸಾಂಘಿಕ ಹೋರಾಟದಿಂದ ಗೆದ್ದುಕೊಂಡಿತು ಮತ್ತು ಜಡೇಜಾ (Jadeja) ಕೊನೆಯ ಎರಡು ಎಸೆತಗಳಲ್ಲಿ ಗೇಮ್ ಗೆದ್ದರು.

ಅತಿ ಹೆಚ್ಚು ಸಂಖ್ಯೆಯ ಫೈನಲ್‌ಗಳನ್ನು ಆಡಿದ ಆಟಗಾರ :

ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಫೈನಲ್‌ಗಳನ್ನು ಆಡಿದ ದಾಖಲೆಯನ್ನು ಧೋನಿ ಮತ್ತಷ್ಟು ವಿಸ್ತರಿಸಿದರು.

ಎಂಎಸ್‌ಡಿ (MSD) ಐಪಿಎಲ್ ಇತಿಹಾಸದಲ್ಲಿ ಸತತ 11 ಬಾರಿ ಫೈನಲ್ ತಲುಪಿದ ಆಟಗಾರ. ಧೋನಿ CSK ಜೊತೆ 10 IPL ಫೈನಲ್‌ಗಳಲ್ಲಿ ಆಡಿದ್ದಾರೆ ಮತ್ತು 2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ನ ಫೈನಲ್‌ನಲ್ಲಿದ್ದರು.

ಗುಜರಾತ್ ಟೈಟಾನ್ಸ್
ಹಾರ್ದಿಕ್ ಪಾಂಡ್ಯ (Hardik Pandya) (ನಾಯಕ), ಶುಭ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ವಿಜಯ್ ಶಂಕರ್,ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ,ಮೊಹಮ್ಮದ್ ಶಮಿ, ನೂರ್ ಅಹ್ಮದ್,

ಚೆನ್ನೈ ಸೂಪರ್ ಕಿಂಗ್ಸ್
ಎಂಎಸ್ ಧೋನಿ (M.S.Dhoni) (ನಾಯಕ), ಅಜಿಂಕ್ಯ ರಹಾನೆ,ರುತುರಾಜ್ ಗಾಯಕ್ವಾಡ್,ಮೊಯಿನ್ ಅಲಿ, ಡೆವೊನ್ ಕಾನ್ವೆ, ಅಂಬಟಿ ರಾಯುಡು, ದೀಪಕ್ ಚಾಹರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮತಿಶಾ ಪತಿರಾನ, ಮಹಿಷ್ ತೀಕ್ಷಣ.

ರಶ್ಮಿತಾ ಅನೀಶ್

Exit mobile version