ಅಯ್ಯೋ ಪಾಪ : ಬನ್ನೇರುಘಟ್ಟ ಉದ್ಯಾನವನದಲ್ಲಿ ಒಂದೇ ವಾರದಲ್ಲಿ 15 ಜಿಂಕೆಗಳ ಸಾವು !

Bengaluru: ಬೆಂಗಳೂರಿನ (Deers died in Bannerghatta Park) ಬನ್ನೇರುಘಟ್ಟ ಜೈವಿಕ ಉದ್ಯಾನ ವನದಲ್ಲಿ ವನ್ಯಜೀವಿಗಳ ಸಾವು ಮುಂದುವರಿಯುತ್ತಿದ್ದು, ಕೆಲವು ದಿನಗಳ ಹಿಂದೆ ವೈರಸ್

(Virus) ನಿಂದಾಗಿ 7 ಚಿರತೆಮರಿಗಳು ಸಾವನಪ್ಪಿದ್ದವು. ಇದರ ಬೆನ್ನಲ್ಲೇ ಬನ್ನೇರುಘಟ್ಟ (Bannerghatta) ಉದ್ಯಾನವನದಲ್ಲಿ ಒಂದು ವಾರದಲ್ಲಿ 15 ಜಿಂಕೆಮರಿಗಳು ಸಾವನ್ನಪ್ಪಿವೆ..

ನಗರದ ಸೆಂಟ್ ಜಾನ್ (St John) ಆಸ್ಪತ್ರೆ ಬಳಿ 28 ಜಿಂಕೆಮರಿಗಳನ್ನು ಸಾಕಲಾಗಿತ್ತು. ಆದರೆ ಅವುಗಳ ಸರಿಯಾದ ರೀತಿಯ ಪೋಷಣೆ ಇಲ್ಲದೆ 28 ಜಿಂಕೆ ಮರಿಗಳನ್ನು ಬೆಂಗಳೂರಿನ ಹೊರವಲಯದ

ಆನೇಕಲ್ (Anekal) ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನ ವನಕ್ಕೆ ತರಲಾಗಿತ್ತು. ಅದಕ್ಕೂ ಮುಂಚೆ ವೈದ್ಯರ ತಂಡವು ಜಿಂಕೆಗಳನ್ನು ಪರಿಶೀಲಿಸಿ ಕ್ವಾರಂಟೈನ್ ನಲ್ಲಿ ಇರಿಸಿದ್ದರು.

ಹೊರಗಿನಿಂದ ಬರುವ ಯಾವುದೇ ಪ್ರಾಣಿಗಳು ಉದ್ಯಾನವನ್ನು ಪ್ರವೇಶಿಸುವ ಮೊದಲು ಅವುಗಳನ್ನು ಒಂದು ತಿಂಗಳು ಕ್ವಾರಂಟೈನ್ (Quarantine) ಅಲ್ಲಿ ಇರಿಸಬೇಕು. ಒಂದು ತಿಂಗಳ ನಂತರ ಅವುಗಳಿಗೆ

ಯಾವುದೇ ರೀತಿಯ ರೋಗಗಳು ಇಲ್ಲ ಎಂದರೆ ಮಾತ್ರ ಬೇರೆ ಬೇರೆ ಪ್ರಾಣಿಗಳ ಜೊತೆಗೆ ಬಿಡಬೇಕು ಎಂಬ ನಿಯಮವಿದೆ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ ಸೂರ್ಯ ಸೆನ್

(A V Surya Sen) ಅವರು ಈ (Deers died in Bannerghatta Park) ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಜಿಂಕೆಗಳನ್ನು ಕರೆತಂದ ಮೊದಲ ದಿನವೇ ಕಿತ್ತಾಡಿ ತೀವ್ರವಾಗಿ ಗಾಯಮಾಡಿಕೊಂಡಿದ್ದವು. ಇದೇ ಸಮಯದಲ್ಲಿ 5 ಜಿಂಕೆಗಳು ಸಾವನಪ್ಪಿದವು. ತದ ನಂತರ ಇನ್ನುಳಿದ ಜಿಂಕೆಗಳನ್ನು ಕ್ವಾರಂಟೈನ್ ನಲ್ಲಿ

ಇರಿಸಲಾಗಿತ್ತು. ಕ್ವಾರಂಟೈನ್ ನಲ್ಲಿ ಜಿಂಕೆಗಳ ಕರುಳಿನಲ್ಲಿ ಬ್ಯಾಕ್ಟಿರಿಯಾ ಸೋಂಕು ಕಾಣಿಸಿಕೊಂಡು ದೇಹದ ಎಲ್ಲಾ ಭಾಗಗಳಿಗೆ ಹರಡಿ ಜಿಂಕೆಗಳು ಸಾಯಲಾರಂಭಿಸಿದ್ದವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮಾನ್ಸೂನ್ ಸಮಯದಲ್ಲಿ ಕ್ಲೋಸ್ಟ್ರಿಡಿಯಮ್ ಬ್ಯಾಕ್ಟೀರಿಯಾ ಸೋಂಕಿನ ಪ್ರಕರಣಗಳು ಅತಿಹೆಚ್ಚಾಗಿ ಕುರಿಗಳಲ್ಲಿ ಕಾಣಿಸಿಕೊಳ್ಳುತ್ತವೆ ಇದು ಹುಲ್ಲಿನ ಚಿಗುರಿನಿಂದ ಬದಲಾವಣೆ ಕಂಡುಬರುತ್ತವೆ ಇದನ್ನು ಸೇವಿಸಿದ

ಪ್ರಾಣಿಗಳು ಸಾವನ್ನಪ್ಪುತ್ತವೆ ಎಂದು ಪಶುವೈದ್ಯರು ಹೇಳಿದ್ದಾರೆ. 1980 ರ ದಶಕದಲ್ಲಿ ಅರಣ್ಯ ಇಲಾಖೆಯು ಸೇಂಟ್‌ ಜಾನ್ಸ್ ಆಸ್ಪತ್ರೆಗೆ ನಾಲ್ಕು ಜಿಂಕೆಗಳನ್ನು ಸೇರಿಸಲಾಗಿತ್ತು.

ಜಿಂಕೆಗಳ ಸಂಖ್ಯೆ 38 ಕ್ಕೆ‌ ಏರಿಕೆಯಾಗಿತ್ತು ಆ ಜಿಂಕೆಗಳು ಎಲ್ಲಾ ನಿಶಕ್ತವಾಗಿದ್ದವು 23 ಜಿಂಕೆಗಳು ರಕ್ತಹೀನತೆಯಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದವು ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಂಕೆಗಳು

ಸಾಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣೆಯ ಕ್ವಾರಂಟೈನ್ ನಲ್ಲಿ ಇರುವ ಜಿಂಕೆಗಳನ್ನು ಮೃಗಾಲಯದಲ್ಲಿರುವ ಬೇರೆ ಬೇರೆ ಪ್ರಾಣಿಗಳ ಜೊತೆಗೆ ಬೆರೆಯಲು ಬಿಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಪ್ರತಿದಿನ ಕಡಲೆ ಬೀಜಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು

ನಾಗರಾಜ್ (ಕೆ.ಕಲ್ಲಹಳ್ಳಿ).

Exit mobile version