ಶೇಂಗಾ ಬೀಜ ಅಥವಾ ಕಡ್ಲೆಬೀಜ ಎಂದರೆ ಎಲ್ಲರಿಗೂ ಪ್ರಿಯ. ಬಡವರ ಬಾದಾಮಿ ಎಂದು ಪ್ರಸಿದ್ಧವಾಗಿರುವ ಈ ತಿನಿಸು ಎಲ್ಲರಿಗೂ ಇಷ್ಟ. ನಾವೆಲ್ಲರೂ ಇಷ್ಟಪಟ್ಟು ಕಡಲೆ ಬೀಜದ ಉತ್ಪನ್ನಗಳನ್ನು ಸೇವಿಸುತ್ತೇವೆ. ಕಡಲೆ ಕಾಯಿ ಎಣ್ಣೆಯಿಂದ ಮಾಡಿದ ಅಡುಗೆ ಮತ್ತು ಪದಾರ್ಥ ಬಲು ರುಚಿ ಆಗಿರುತ್ತದೆ. ಅದರಿಂದ ಹಲವಾರು ಪ್ರಯೋಜನಗಳಿದ್ದು, ಕಡಲೆ ಬೀಜಗಳು ಆರೋಗ್ಯಕ್ಕೆ ಹೇಗೆ ಲಾಭ ನೀಡುತ್ತವೆ ಎಂದು ನೋಡೋಣ.

ಪ್ರೋಟೀನ್ (Protein) ಅಂಶ ಹೆಚ್ಚಾಗಿ ಇರುತ್ತದೆ: ನಮ್ಮ ಆರೋಗ್ಯಕ್ಕೆ ಪ್ರೋಟೀನ್ ಬಹಳ ಮುಖ್ಯ. ಪ್ರೋಟೀನ್ ದೇಹದಲ್ಲಿದ್ದರೆ ದೇಹ ಬಲಾಢ್ಯವಾಗಿರುತ್ತದೆ. ಇದರಿಂದ ಮಾಂಸಖಂಡದ ಬೆಳವಣಿಗೆ ಆಗುವುದಲ್ಲದೆ ಮಾಂಸ ಖಂಡಗಳಿಗೆ ತೊಂದರೆ ಎದುರಾಗಿದ್ದರೆ ಅದನ್ನು ಸರಿಪಡಿಸಲು ಪ್ರೋಟಿನ್ ಮುಖ್ಯ. ದೇಹದ ತೂಕ ಹೆಚ್ಚಿಸಿಕೊಳ್ಳಲು ಇದು ಬಹಳ ಸಹಾಯಕಾರಿಯಾಗಿದೆ ನೆಲಗಡಲೆಗಳು ಮಧುಮೇಹಿಗಳಿಗೆ ಒಳ್ಳೆಯದು.
ಆರೋಗ್ಯಕರ ಕೊಬ್ಬಿನ ಅಂಶಗಳು : ಕಡಲೆ ಬೀಜಗಳಲ್ಲಿ ಹೋಲಿಕ್ ಆಮ್ಲ (Holic Acid) ಮತ್ತು ಲೆನೋಲಿಕ್ ಆಮ್ಲಗಳು ಸಿಗಲಿದ್ದು ನಮ್ಮ ದೇಹಕ್ಕೆ ಬಹಳ ಅವಶ್ಯಕವಾದ ಅಂಶಗಳು. ಕಡಲೆ ಬೀಜಗಳು ಉತ್ತಮ ಪ್ರಮಾಣದಲ್ಲಿ ಒಳ್ಳೆಯ ಕೊಬ್ಬಿನ ಅಂಶಗಳು ಲಭಿಸುತ್ತದೆ. ಈ ಅಂಶಗಳು ಹೃದಯಕ್ಕೆ ತುಂಬಾ ಸಹಕಾರಿಯಾಗಿದ್ದು ಹೃದಯ ರಕ್ತನಾಳದ ಕಾಯಿಲೆಗಳು ಬರಲು ಸಾಧ್ಯವಾಗದಂತೆ ನೋಡಿಕೊಳ್ಳುತ್ತದೆ.
ನಾರಿನಾಂಶ ಅಪಾರವಾಗಿದೆ:
ಕಡಲೆ ಬೀಜಗಳಲ್ಲಿ ನಾರಿನಾಂಶ ಹೆಚ್ಚಾಗಿರುತ್ತದೆ. ಅದರಲ್ಲಿರುವ ನಾರಿನಾಂಶವೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ನಾರಿನಂಶವು ಹೊಟ್ಟೆ ತುಂಬಿದ ಅನುಭವ ಉಂಟು ಮಾಡುವುದರಿಂದ ಬೇರೆ ಬಗೆಯ ಆರೋಗ್ಯಕರ ಆಹಾರಗಳನ್ನು ಸೇವಿಸಲು ಸಾಧ್ಯತೆ ಇರುವುದಿಲ್ಲ ಆದ್ದರಿಂದ ದೇಹದ ತೂಕ ನಿರ್ವಹಣೆ ಉತ್ತಮವಾಗಿರುತ್ತದೆ.
ವಿಟಮಿನ್ ಮತ್ತು ಖನಿಜಾಂಶಗಳು :
ದೇಹಕ್ಕೆ ಕಡಲೆ ಬೀಜದಿಂದ ಮುಖ್ಯವಾಗಿ ವಿಟಮಿನ್ ಇ (Vitamin E) ಸಿಗುತ್ತದೆ. ಮೆಗ್ನೀಷಿಯಂ ಹಾಗೂ ಪೊಟ್ಯಾಶಿಯಂ ಪ್ರಮಾಣ ಕೂಡ ಹೇರಳವಾಗಿ ಕಂಡುಬರುತ್ತದೆ. ದೇಹಕ್ಕೆ ಈ ಎಲ್ಲವೂ ಮುಖ್ಯ ದೇಹಕ್ಕೆ ಇವೆಲ್ಲವೂ ಸಾಕಷ್ಟ ಅನುಕೂಲ ಮಾಡಿಕೊಳ್ಳುತ್ತವೆ.

ಆಂಟಿ ಆಕ್ಸಿಡೆಂಟ್ ಪ್ರಮಾಣ :
ದೇಹದ ಆಕ್ಸಿಡೆಟೀವ್ (Oxidative) ಒತ್ತಡವನ್ನು ನಿರ್ವಹಣಾ ಮಾಡುವುದರಲ್ಲಿ ಸಹಾಯಕ್ಕೆ ಬರುವ ಮತ್ತು ಉರಿಯುತವನ್ನು ನಿವಾರಣೆ ಮಾಡುವ ಗುಣಲಕ್ಷಣಗಳು ಆಂಟಿ ಆಕ್ಸಿಡೆಂಟ್ (Anti Oxident) ರೂಪದಲ್ಲಿ ಕಡಲೆ ಬೀಜದಲ್ಲಿ ಲಭ್ಯವಿದೆ. ನೆನೆಸಿದ ಕಡಲೆ ಕಾಯಿ ಬೀಜಗಳನ್ನು ತಿನ್ನುವುದರಿಂದ ಈ ಲಾಭಗಳನ್ನು ಪಡೆಯಬಹುದು.
ಮಧುಮೇಹ ನಿಯಂತ್ರಣ: ನೆನೆಸಿದ ಕಡಲೆಕಾಯಿ ಬೀಜಗಳನ್ನು ತಿನ್ನುವುದರಿಂದ ಮಧುಮೇಹ ನಿಯಂತ್ರಣಿಸಬಹುದು. ಕಡಲೆಕಾಯಿಯಲ್ಲಿರುವ ನಾರಿನಾಂಶವೂ ನಿಮ್ಮ ಬ್ಲಡ್ ಶುಗರ್ ಲೆವೆಲ್ (Sugar Level) ನಿಯಂತ್ರಣೀಸಲು ಸಹಾಯ ಮಾಡುತ್ತದೆ. ಕಡಲೆ ಬೀಜಗಳಲ್ಲಿ ಸಿಹಿಸೂಚ್ಯಂಕ ಕಡಿಮೆ ಇರುವುದರಿಂದ ಇದು ಸಾಧ್ಯವಾಗುತ್ತದೆ.
ಧನಂಜಯ